ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಿಸಿಲಿನ ಬೇಗೆಯಲ್ಲಿ ಬೆಂದ ಶಿವಮೊಗ್ಗ ನಗರಕ್ಕೆ ಮಳೆರಾಯ ಇಂದು ತಂಪೆರೆದಿದ್ದಾನೆ. ಮಲೆನಾಡಿನ ಹೆಬ್ಬಾಗಿಲು ಶಿವಮೊಗದಲ್ಲಿ ಮಳೆಯ ಸಿಂಚನವಾಗಿದ್ದು, ಬಿಸಿಲಿನಿಂದ ಕಾದ ಕೆಂಡದಂತಿದ್ದ ಮಲೆನಾಡು ತಂಪಾಗಿದೆ.
ಈ ಬಾರಿ ಉತ್ತರ ಒಳನಾಡು ಜಿಲ್ಲೆಗಳಂತೆ ಮಲೆನಾಡು ಶಿವಮೊಗ್ಗ ಜಿಲ್ಲೆಯಲ್ಲೂ ಬಿಸಿಲು ತೀವ್ರ ಏರಿಕೆ ಆಗಿತ್ತು. ಕಳೆದ ಕೆಲವು ದಿನಗಳಿಂದ ಶಿವಮೊಗ್ಗ ಸುತ್ತಮುತ್ತ ಮಳೆಯಾಗುತ್ತಲಿದ್ದರೂ ಶಿವಮೊಗ್ಗ ನಗರದ ಜನತೆಗೆ ಬಿಸಿಲಿನ ತಾಪ ಕಡಿಮೆಯಾಗಿರಲಿಲ್ಲ.
Also read: ಬಳ್ಳಾರಿ | ಶ್ರೀರಾಮುಲು ಆಸ್ತಿ, ಸಾಲ ಎಷ್ಟಿದೆ? ಕಾರು ಮಾತ್ರವಲ್ಲ ಬಸ್ ಸಹ ಹೊಂದಿದ್ದಾರೆ
ಆದರೆ, ಇಂದು ಸಂಜೆ ವೇಳೆ ಗುಡುಗು ಸಹಿತ ಮಳೆಯಾದ ಹಿನ್ನೆಲೆ ನಗರದ ಜನತೆ ಮೊಗದಲ್ಲಿ ಮಂದಹಾಸ ಮೂಡಿದೆ. ಇನ್ನು ತೀರ್ಥಹಳ್ಳಿ ತಾಲೂಕಿನ ಹಲವೆಡೆ ಅರ್ಧ ಗಂಟೆಗೂ ಹೆಚ್ಚು ಕಾಲ ಉತ್ತಮ ಮಳೆಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post