ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಡಿ.ಕೆ. ಶಿವಕುಮಾರ್ #D K Shivakumar ಅವರು ನಾಲ್ಕು ಗೋಡೆಯ ನಡುವೆ ನನ್ನನ್ನೊಬ್ಬ ಸಂಸದನನ್ನಾಗಿ ಆರ್ಶೀವಾದ ಮಾಡುತ್ತಾರೆ, ಆದರೆ ಅನಿವಾರ್ಯವಾಗಿ ಹೊರಗೆ ಟೀಕಿಸ್ತಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ #B Y Raghavendra ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರು. ಪ್ರತಿಪಕ್ಷಗಳನ್ನು ಟೀಕಿಸುವುದು ಅವರಿಗೆ ಅನಿವಾರ್ಯವಾಗಿದೆ. ಹೀಗಾಗಿ, ಟೀಕಿಸುತ್ತಾರೆ. ಆದರೆ, ನನ್ನನ್ನು ಒಬ್ಬ ಸಂಸದನನ್ನಾಗಿ ಅವರು ನಾಲ್ಕು ಗೋಡೆಗಳ ನಡುವೆ ಪ್ರಶಂಸೆ ವ್ಯಕ್ತಪಡಿಸುತ್ತಾರೆ ಎಂದರು.
Also read: ನಟ ದ್ವಾರಕೀಶ್ ನಿಧನ | ಶಿವಮೊಗ್ಗದಲ್ಲಿ ಶಿವರಾಜಕುಮಾರ್ ಕಂಬನಿ | ನೆನಪುಗಳ ಮೆಲುಕು
ನಾನು ಶಿವಕುಮಾರ್ ಅವರಿಗೆ ಯಾವುದೇ ಉತ್ತರ ಕೊಡುವುದಿಲ್ಲ. ಆದರೆ, ಕಾಂಗ್ರೆಸ್ ಮುಖಂಡರಿಗೆ ಪ್ರಶ್ನೆಗಳನ್ನು ಕೇಳಬೇಕು. ಅವರು ನನ್ನನ್ನು ಪ್ರಶ್ನಿಸುವ ಮುನ್ನ ಅವರ ಐದೂ ಬೆರಳುಗಳು ಅವರನ್ನೇ ಪ್ರಶ್ನಿಸುತ್ತವೆ ಎಂದು ತಿರುಗೇಟು ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post