ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಚನ್ನಬಸಪ್ಪ ನನ್ನಿಂದ ಬೆಳದಿರುವ ಶಿಷ್ಯ ಎಂದು ಕರೆಯುತ್ತೇನೆ. ಅವರ ಬಗ್ಗೆ ಮಾತನಾಡಿ ನಾನ್ಯಾಕೆ ಹೀರೋ ಮಾಡಲಿ ಎಂದು ನಗರ ಸ್ವತಂತ್ರ ಅಭ್ಯರ್ಥಿ, ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ #K S Eshwarappa ಚಾಟಿ ಬೀಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಚನ್ನಬಸಪ್ಪ ನನ್ನಿಂದ ಬೆಳೆದಿರುವ ಶಿಷ್ಯ ಎಂದು ಕರೆಯುತ್ತೇನೆ. ಅವರ ಬಗ್ಗೆ ಮಾತನಾಡಿ ನಾನ್ಯಾಕೆ ಹೀರೋ ಮಾಡಲಿ ಎಂದರು.
ಮೋದಿಯನ್ನು #Modi ಕಾಂಗ್ರೆಸ್ಸಿಗರು ಟೀಕೆ ಮಾಡಿದರೆ 28 ಕ್ಷೇತ್ರಗಳಲ್ಲಿ ಅವರಿಗೆ ಸಿಗುವುದು ಚೊಂಬು ಮಾತ್ರ ಎಂದು ಟೀಕಿಸಿದರು. ತಾಳಿ ಪವಿತ್ರವಾದ ಹಿಂದೂ ಮಹಿಳೆಯರ ಸಂಕೇತ ಮೋದಿ ಯಾಕೆ ಹೇಳಿದ್ದಾರೆ ಗೊತ್ತಿಲ್ಲ. ಯತೀಂದ್ರ ಸಿದ್ದರಾಮಯ್ಯ ಯಾಕೆ ಹೇಳಿದ್ದಾರೋ ಗೊತ್ತಿಲ್ಲ ಎಂದರು.
Also read: ಅವರಿಗೆ ಅಭಿನಂದನೆ | ನಾನು ಗೆದ್ದರೆ ಅವರಪ್ಪ ಕೂಡಾ ಕರಿತಾನೆ | ಈಶ್ವರಪ್ಪ ಹೀಗೆ ಹೇಳಿದ್ದೇಕೆ?
ರೈತನ ಚಿನ್ಹೆ ಸಿಕ್ಕಿರುವುದು ನನಗೆ ಸಂತೋಷ ಸಿಕ್ಕಿದೆ. ರೈತರ ಪರವಾಗಿ ಅನೇಕ ವರ್ಷ ಹೋರಾಟ ಮಾಡಿದ್ದು, ಇದೇ ಚಿನ್ಹೆ ದೊರೆತಿರುವುದು ಸಂತೋಷ., ಒಂದೆಡೆ ರೈತ, ಇನ್ನೊಂದೆಡೆ ಮೋದಿ.. ರೈತರ ಹೆಸರಲ್ಲಿ ಮತ ಕೇಳುತ್ತೇನೆ ಎಂದರು.
ಹನುಮ ಜಯಂತಿಯಲ್ಲಿ ಭಾಗಿ
ಇನ್ನು, ಕೆ.ಎಸ್. ಈಶ್ವರಪ್ಪರವರು ಹನುಮ ಜಯಂತಿ ಅಂಗವಾಗಿ ಹೊಳಲೂರಿನ ಶ್ರೀ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ತೆರಳಿ ದರ್ಶನ ಮಾಡಿ ಆಶಿರ್ವಾದ ಪಡೆದರು.
ನಂತರ ಗ್ರಾಮಸ್ಥರ ಬಳಿ ತೆರಳಿ ಚುನಾವಣೆಯಲ್ಲಿ ಆಶೀರ್ವಾದ ಮಾಡಿ ಗೆಲ್ಲಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಹೊಳಲೂರಿನ ಗ್ರಾಮಸ್ಥರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news






















