ಕಲ್ಪ ಮೀಡಿಯಾ ಹೌಸ್ | ಸೊರಬ |
ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಗೀತಾ ಶಿವರಾಜಕುಮಾರ್ #Geetha Shivarajkumar ಹೆಚ್ಚಿನ ಮತಗಳ ಅಂತರದಲ್ಲಿ ಗೆಲುವು ಸಾಧಿಸುವುದು ನಿಶ್ಚಿತ ಎಂದು ಸಚಿವ ಎಸ್. ಮಧು ಬಂಗಾರಪ್ಪ #Madhu Bangarappa ಭರವಸೆ ವ್ಯಕ್ತಪಡಿಸಿದರು.
ಪಟ್ಟಣದ ಬಂಗಾರಧಾಮದಲ್ಲಿ ಶಕುಂತಲಾ ಬಂಗಾರಪ್ಪನವರ ಪುಣ್ಯ ಸ್ಮರಣೆ ಸಲುವಾಗಿ ಅವರ ಸಮಾಧಿಗೆ ಕುಟುಂಬ ಸಮೇತರಾಗಿ ಆಗಮಿಸಿ ಪೂಜೆ ಸಲ್ಲಿಸಿ, ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಕಾರ್ಡ್ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಜನರು ಗ್ಯಾರಂಟಿ ಯೋಜನೆಗಳ ಮೇಲೆ ಅಪಾರವಾದ ವಿಶ್ವಾಸವನ್ನು ಹೊಂದಿದ್ದು ಅ ನಿಟ್ಟಿನಲ್ಲಿ ಸರ್ಕಾರ ಸಾಮಾನ್ಯ ಜನರಿಗೆ ಸ್ಪಂದನೆ ಮಾಡುವ ಸರ್ಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಸೊರಬ ಕ್ಷೇತ್ರದ ಇತಿಹಾಸದಲ್ಲಿ 94,0000 ಮತಗಳನ್ನು ನೀಡಿ ದಾಖಲೆಯ ಗೆಲುವು ಸಾಧಿಸಲು ಈ ಕ್ಷೇತ್ರದ ಮತದಾರರು ಸಹಕರಿಸಿದ್ದಾರೆ. ಬಂಗಾರಪ್ಪನವರು ಮುಖ್ಯಮಂತ್ರಿಯಾದ 32 ವರ್ಷಗಳ ನಂತರ ಇಬ್ಬರು ಸಚಿವರಾದರೂ ಈ ತಾಲೂಕಿಗೆ ಯಾವುದೇ ಅಭಿವೃದ್ಧಿಪರ ಯೋಜನೆ ತರಲು ಸಾಧ್ಯವಾಗಿರಲಿಲ್ಲ ಎಂದರು.
ಸಿದ್ದರಾಮಯ್ಯ #Siddaramaiah ಹಾಗೂ ಡಿ.ಕೆ. ಶಿವಕುಮಾರ್ #D K Shivakumar ಅವರ ನೇತೃತ್ವದ ಸರ್ಕಾರ ರಾಜ್ಯಕ್ಕೆ ನೀಡುತ್ತಿರುವ ಉತ್ತಮ ಆಡಳಿತ, ಯೋಜನೆಗಳು ಚುನಾವಣೆಯಲ್ಲಿ ವರದಾನವಾಗಲಿವೆ. ಉತ್ತಮವಾದ ಗ್ಯಾರೆಂಟಿ ಯೋಜನೆಗಳು ಮನೆ ಮನೆಗೆ ತಲುಪಿವೆ ಎಂದರು.
ಮಾಸಿಕ ಧನ ನೀಡುತ್ತಿರುವ ಸರ್ಕಾರ 5 ವರ್ಷಕ್ಕೆ 2.5 ಲಕ್ಷ ರೂ. ನೀಡಿದಂತಾಗುತ್ತಿದೆ. ಇಂತಹ ಯೋಜನೆಯನ್ನು ಪ್ರಪಂಚದ ಎಲ್ಲೂ ಸಹ ನೀಡಿಲ್ಲ. ಆದರೆ ನಮ್ಮ ಸರ್ಕಾರವು ಹಲವು ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡುವ ಮೂಲಕ ಗ್ಯಾರಂಟಿ ಯೋಜನೆಗಳ ಮೂಲಕ ಜನರ ಆಶೋತ್ತರಗಳಿಗೆ ಸ್ಪಂದಿಸುವ ಕಾರ್ಯ ಮಾಡಿದೆ ಎಂದರು.
Also read: ನನ್ನಿಂದ ಬೆಳೆದ ಶಿಷ್ಯ, ಅವರ ಬಗ್ಗೆ ಮಾತಾಡಿ ನಾನ್ಯಾಕೆ ಹೀರೋ ಮಾಡಲಿ: ಈಶ್ವರಪ್ಪ ಹೇಳಿದ್ದು ಯಾರಿಗೆ
ಮೋದಿಯವರ #Modi ಗ್ಯಾರಂಟಿಯಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. ಗ್ಯಾರಂಟಿ ಯೋಜನೆಗಾಗಿ ಸರ್ಕಾರ ಈಗಾಗಲೇ 57,000 ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರತಿ ಮನೆ ಮನೆಗೆ ಹೋಗಿ ಒಟ್ಟಾಗಿ ಅರಿವು ಮೂಡಿಸಬೇಕು ವಿರೋಧ ಪಕ್ಷದವರಿಗೂ ಈ ಯೋಜನೆ ಮನವರಿಕೆ ಮಾಡಬೇಕು ಎಂದರು.
ಅನಿತಾ ಮಧು ಬಂಗಾರಪ್ಪ, ಸೂರ್ಯ ಮಧುಬಂಗಾರಪ್ಪ, ಬ್ಲಾಕ್ ಅಧ್ಯಕ್ಷರಾದ ಅಣ್ಣಪ್ಪ, ಸದಾನಂದಗೌಡ ಬಿಳಿಗಲಿ, ಜಯಶೀಲ ಗೌಡ, ಕೆ.ವಿ. ಗೌಡ, ಗಣಪತಿ ಎಚ್. ಹುಲ್ತಿಕೊಪ್ಪ, ಎಂ.ಡಿ. ಶೇಖರ್, ಶಿವಲಿಂಗೇಗೌಡ, ಅಬ್ದುಲ್ ರಶೀದ್ ಹಿರೇಕೌಂಶಿ, ಮಹಮದ್ ಸಾಜೀದ್, ಸುಜಾಯತ್, ಸತ್ಯನಾರಾಯಣ, ಸುರೇಶ್ ಬಿಳವಾಣಿ, ಸುರೇಶ್ ಹಾವಣ್ಣನವರ್, ಮಧು ಗೌಡ, ಸುನೀಲ್ ಗೌಡ, ಫಯಾಜ್ ಉಳವಿ, ನಾಗರಾಜ್ ಚಿಕ್ಕಸವಿ, ಬಸವೇಶ್ವರ, ಮಂಜು, ಪ್ರವೀಣ್ ಶಾಂತಗೇರಿ, ಸಂಜಯ್, ಶ್ರೀಕಾಂತ್, ಸುಜಾತ ಜೋತಾಡಿ, ಪ್ರೇಮಾ, ರಂಜಿನಿ, ಅತಿಕ್, ಶಶಿ, ಸಂತೋಷ್, ಬಸವರಾಜ್ ಸೇರಿದಂತೆ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post