ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗೀತಾ ಶಿವರಾಜಕುಮಾರ್ #GeethaShivarajkumar ಗ್ರಾಪಂ ಕೂಡಾ ಗೆಲ್ಲಲ್ಲ. ರಾಜ್ಯದ ರಾಜಕಾರಣ ಅಲ್ಲೋಲ ಕಲ್ಲೋಲ ದೂರ ಇಲ್ಲ. ಅಹಂಕಾರಕ್ಕೆ ಮದ್ದು ಕೊಡಲು ಬಿಜೆಪಿ ವೋಟ್ ಹಾಕಿ ಎಂದು ಮಾಜಿ ಶಾಸಕ ಕುಮಾರ್ ಬಂಗಾರಪ್ಪ #KumarBangarappa ಮನವಿ ಮಾಡಿದರು.
ಪೆಸಿಟ್ ಕಾಲೇಜು ಸಭಾಂಗಣದಲ್ಲಿ ನಡೆಸ ಸಭೆಯಲ್ಲಿ ಮಾತನಾಡಿದ ಅವರು, ನಾನೂ ಒಬ್ಬ ನಿರ್ಮಾಪಕ. ನಮ್ಮದೂ ಸ್ಟುಡಿಯೋ ಇದೆ. ಮುನಿರತ್ನ, ರಾಕ್ ಲೈನ್ ವೆಂಕಟೇಶ್ ಇದ್ದಾರೆ. ಫಿಲಂ ಇಂಡಸ್ಟ್ರಿ ಹಿಂದೆ ಇದೆ ಎಂಬುದು ಸುಳ್ಳು. ಗೀತಾ ಗ್ರಾಪಂ ಕೂಡಾ ಗೆಲ್ಲಲ್ಲ. ರಾಜ್ಯದ ರಾಜಕಾರಣ ಅಲ್ಲೋಲ ಕಲ್ಲೋಲ ದೂರ ಇಲ್ಲ. ಅಹಂಕಾರಕ್ಕೆ ಮದ್ದು ಕೊಡಲು ಬಿಜೆಪಿ #BJP ವೋಟ್ ಹಾಕಿ ಎಂದು ಮನವಿ ಮಾಡಿದರು.
ರಾಷ್ಟ್ರ ಕಟ್ಟುವ ಜವಾಬ್ದಾರಿ ಜಾಸ್ತಿ ಇದೆ. ಅಸಂಘಟಿತ ಕಾರ್ಮಿಕರನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದು ಮೋದಿ ಉದ್ದೇಶ. ಸರ್ಕಾರದ ಮೇಲೆ ಅವಲಂಬಿತ ಹೆಚ್ಚು. ಜಾತಿ, ಮತಕ್ಕೆ ಮತ ಅಂತ ಕೆಲವರು ಅಭ್ಯರ್ಥಿ ಬರುತ್ತಾರೆ. ಭೂಮಿ ಅನೇಕ ವಿಚಾರದಲ್ಲಿ ಮಾಫಿಯಾ ತರಹ ಆಗಿದೆ. ಇದಕ್ಕೆ ಕ್ರಮ ಬೇಕು. ಆದರೆ ಬರೇ ಅವ್ಯವಹಾರ. ಕೋರ್ಟ್ ತಡೆ ನೀಡಿದೆ ಎಂದರು.
Also read: ಮೋದಿಗೆ ಕೃತಜ್ಞತೆ ಸಲ್ಲಿಸುವ ಅವಕಾಶ ಮಿಸ್ ಮಾಡ್ಕೋಬೇಡಿ | ಬಿ.ವೈ. ರಾಘವೇಂದ್ರ ಕರೆ
ನಮ್ಮ ತಂಗಿ, ನನ್ನ ತಮ್ಮ, ಜಾತಿ ಅಂತಾದರೆ ಪುಟಗಟ್ಟಲೆ ಮಾತನಾಡಬಹುದು. ಸಮಾಜದ ವೋಟ್ ಎಲ್ಲಾ ಒಂದೇ ಕಡೆ ಸತ್ಯಕ್ಕೆ ದೂರವಾದ ಮಾತುಗಳು. ಈಡಿಗರ ಭವನ ಕೊಟ್ಟಿದ್ದು ಯಡಿಯೂರಪ್ಪ. ಶಿಕಾರಿಪುರ, ಸೊರಬ ಎರಡು ಕಣ್ಣು ಅಂತ ಕೆಲಸ ಮಾಡಿದ್ದು ಯಡಿಯೂರಪ್ಪ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
























