ಕಲ್ಪ ಮೀಡಿಯಾ ಹೌಸ್ | ಬಾಗಲಕೋಟೆ/ಬೆಂಗಳೂರು |
ಪ್ರಸಕ್ತ ಸಾಲಿನ ಎಸ್’ಎಸ್’ಎಲ್’ಸಿ ಫಲಿತಾಂಶ #SSLC Result ಇಂದು ಪ್ರಕಟಗೊಂಡಿದ್ದು, ಬಾಗಲಕೋಟೆಯ ಅಂಕಿತಾ ಬಸಪ್ಪ ಕೊಣ್ಣೂರು ರಾಜ್ಯಕ್ಕೇ ಪ್ರಥಮ ಸ್ಥಾನ ಗಳಿಸುವ ಮೂಲಕ ಅದ್ವಿತೀಯ ಸಾಧನೆ ಮಾಡಿದ್ದಾರೆ.
ಮುಧೋಳ ತಾಲೂಕಿನ ಮೆಳ್ಳಿಗೇರಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ 625ಕ್ಕೆ 625 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೇ ಪ್ರಥಮ ಸ್ಥಾನ ಗಳಿಸಿದ್ದಾರೆ.
Also read: SSLC ರಿಸಲ್ಟ್ | ಶಿವಮೊಗ್ಗಕ್ಕೆ ದಾಖಲೆಯ ಫಲಿತಾಂಶ | ಎಷ್ಟು ಪರ್ಸೆಂಟ್? ಇಲ್ಲಿದೆ ಮಾಹಿತಿ
ಇನ್ನು, ಈ ಬಾರಿ ಒಟ್ಟು ಶೇ.73.40ರಷ್ಟು ಫಲಿತಾಂಶ ಬಂದಿದ್ದು, ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ಅತಿ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗಳ ವಿವರ
ಅಂಕಿತಾ ಬಸಪ್ಪ ಕೊನ್ನೂರು (625/625) (ರಾಜ್ಯಕ್ಕೆ ಫ್ರಥಮ)
ದ್ವಿತಿಯ ಸ್ಥಾನ 7 ವಿದ್ಯಾರ್ಥಿಗಳಿಗೆ ಹಂಚಿಕೆಯಾಗಿದೆ:
- ಮೇದಾ ಪಿ ಶೆಟ್ಟಿ ( ಬೆಂಗಳೂರು) 624/625
- ಹರ್ಷಿತಾ ಡಿಎಂ (ಮಧುಗಿರಿ)
- ಚಿನ್ಮಯ್ (ದಕ್ಷಿಣ ಕನ್ನಡ)
- ಸಿದ್ದಾಂತ್ (ಚಿಕ್ಕೊಡಿ )
- ದರ್ಶನ್ (ಶಿರಸಿ)
- ಚಿನ್ಮಯ್ (ಶಿರಸಿ)
- ಶ್ರೀರಾಮ್ (ಶಿರಸಿ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post