ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ವಿವಿಧ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ #SSLC Result ಉತ್ತಮ ಫಲಿತಾಂಶ ಪಡೆದಿದ್ದು, ಕಸ್ತೂರಬಾ ಬಾಲಿಕಾ ಪ್ರೌಢಶಾಲೆಯ ವಿದ್ಯಾರ್ಥಿನಿ ಆಲಿಯಾ ಮೆಹರೂಶ್ 621 (ಶೇ.99.36%) ಅಂಕ ಗಳಿಸಿ ಜಿಲ್ಲೆಗೆ ಎರಡನೇ ಟಾಪರ್ ಆಗಿದ್ದಾರೆ.
ಚೀಲೂರು ರಾಷ್ಟ್ರೀಯ ಆಂಗ್ಲ ಮಾಧ್ಯಮ ಶಾಲೆ ಶೇ.100% ಫಲಿತಾಂಶ, ಕುಂಸಿ ರಾಷ್ಟ್ರೀಯ ಪ್ರೌಢಶಾಲೆ ಶೇ.100%, ಕೋಣಂದೂರು ರಾಷ್ಟ್ರೀಯ ಪ್ರೌಢಶಾಲೆ ಶೇ.100%, ಹುಂಚಾದ ಪದ್ಮಾಂಬ ಶಾಲೆ ಶೇ.100%, ಕಸ್ತೂರಬಾ ಶಾಲೆ ಶೇ.99%, ಚೀಲೂರು ಕನ್ನಡ ಮಾಧ್ಯಮ ರಾಷ್ಟ್ರೀಯ ಪ್ರೌಢಶಾಲೆ ಶೇ.88%, ಶಿವಮೊಗ್ಗದ ರಾಷ್ಟ್ರೀಯ ಪ್ರೌಢಶಾಲೆ ಶೇ.88%, ಜೆ.ಪಿ.ಎನ್ ಶಾಲೆ ಶೇ.80%, ಹರಿಗೆಯ ಶರಾವತಿ ರಾಷ್ಟ್ರೀಯ ಪ್ರೌಢಶಾಲೆ ಶೇ.75%, ಬಿ.ಆರ್.ಪಿ ಶಾಲೆ ಶೇ.75%, ಬೆಳಗುತ್ತಿಯ ತೀರ್ಥಲಿಂಗೇಶ್ವರ ಪ್ರೌಢಶಾಲೆ ಶೇ.55% ಪಡೆದಿದೆ. ಗುಣಾತ್ಮಕ ಸರಾಸರಿಯಲ್ಲಿಯು ಎನ್ಇಎಸ್ ಸಂಸ್ಥೆಯ ಶಾಲೆಗಳು ಉತ್ತಮ ಫಲಿತಾಂಶವನ್ನು ತಮ್ಮದಾಗಿಸಿಕೊಂಡಿವೆ.
Also read: ಶಿವಮೊಗ್ಗ | ಮೇ 12 ಮತ್ತು 13 | ಶ್ರೀನಾಗಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ
ಎಲ್ಲಾ ವಿದ್ಯಾರ್ಥಿಗಳಿಗೆ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗಕ್ಕೆ ರಾಷ್ಟ್ರೀಯ ಶಿಕ್ಷಣ ಸಮಿತಿ ಆಡಳಿತ ಮಂಡಳಿ ಸದಸ್ಯರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post