ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಪ್ರಧಾನಿ ನರೇಂದ್ರ ಮೋದಿ #PMNarendraModi ಪತ್ರಿಕಾಗೋಷ್ಠಿ ನಡೆಸುವುದಿಲ್ಲ, ಮಾಧ್ಯಮಗಳನ್ನು ಎದುರಿಸಲು ಹೆದರುತ್ತಾರೆ ಎಂದೆಲ್ಲಾ ಕಳೆದ 10 ವರ್ಷಗಳಿಂದ ಪ್ರತಿಪಕ್ಷಗಳು ಮಾಡುತ್ತಿರುವ ಟೀಕಾ ಪ್ರಹಾರಕ್ಕೆ ಈಗ ಸ್ವತಃ ಪ್ರಧಾನಿಯವರೇ ಉತ್ತರ ನೀಡಿದ್ದು, ಈ ಮೂಲಕ ಮಿಲಿಯನ್ ಡಾಲರ್ ಪ್ರಶ್ನೆಗೆ ಸಮಾಧಾನ ಕೊಟ್ಟಿದ್ದಾರೆ.
ಆಜ್ ತಕ್ ಜೊತೆಗಿನ ವಿಶೇಷ ಸಂವಾದದಲ್ಲಿ ಮಾತನಾಡಿರುವ ಪ್ರಧಾನಿ ಮೋದಿಯವರು, ಪತ್ರಿಕಾಗೋಷ್ಠಿ #PressConferences ನಡೆಸುವುದರಿಂದ ದೂರ ಉಳಿದಿರುವ ತಮ್ಮ ನಿರ್ಧಾರಕ್ಕೆ ವಿವರಣೆ ನೀಡಿದ್ದಾರೆ.
ಸಂವಾದದಲ್ಲಿ ಮಾತನಾಡಿದ ಪ್ರಧಾನಿಯವರು, ಈ ಹಿಂದೆ ಇದ್ದಂತಹ ಮಾಧ್ಯಮಗಳು ಇಂದು ಅಲ್ಲ. ನಾನು ಸಂಸತ್ತಿಗೆ ಜವಾಬ್ದಾರನಾಗಿದ್ದೇನೆ. ಇಂದು ಪತ್ರಕರ್ತರು ತಮ್ಮದೇ ಆದ ಆದ್ಯತೆಗಳೊಂದಿಗೆ ಗುರುತಿಸಿಕೊಂಡಿದ್ದಾರೆ. ಮಾಧ್ಯಮವು ಇನ್ನು ಮುಂದೆ ಪಕ್ಷಾತೀತ ಘಟಕವಾಗಿಲ್ಲ ಎಂದು ತಿಳಿಸಿದ್ದಾರೆ.
ತಾವು ಗುಜರಾತ್ #Gujrat ಮುಖ್ಯಮಂತ್ರಿಯಾಗಿದ್ದಾಗ ಹೋಲಿಸಿದರೆ ಈಗ ಕಡಿಮೆ ಸಂದರ್ಶನಗಳನ್ನು ನೀಡುತ್ತಾರೆ ಎಂಬ ಆರೋಪಗಳಿಗೂ ಸಹ ಉತ್ತರಿಸಿರುವ ಅವರು, ಇಂದಿನ ದೃಶ್ಯ ಮಾಧ್ಯಮ ಹಾಗೂ ಬಹು ಸಂವಹನ ಚಾನಲ್’ಗಳ ಬದಲಾದ ಉಪಸ್ಥಿತಿಯ ಬಗ್ಗೆ ಒತ್ತಿ ಹೇಳಿದ್ದಾರೆ.
ಮೊದಲು ಮಾಧ್ಯಮಗಳು ಮುಖರಹಿತವಾಗಿದ್ದವು. ಮಾಧ್ಯಮದಲ್ಲಿ #Media ಯಾರು ಬರೆಯುತ್ತಿದ್ದಾರೆ, ಸಿದ್ಧಾಂತ ಏನು… ಯಾರೂ ಅದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಆದರೆ, ಇನ್ನು ಮುಂದೆ ಪರಿಸ್ಥಿತಿ ಹಾಗೆಯೇ ಇಲ್ಲ ಎಂದು ಪ್ರಧಾನಿ ಹೇಳಿದ್ದಾರೆ.ಈ ಹಿಂದೆ ಒಂದೇ ಒಂದು ಸಂವಹನ ಮೂಲವಿದ್ದರೆ, ಇಂದು ಹೊಸ ಸಂವಹನ ಮಾಧ್ಯಮಗಳ ಉಪಸ್ಥಿತಿಯಿಂದ ಬದಲಾಗಿದೆ. ಇಂದು, ನೀವು ಸಾರ್ವಜನಿಕರೊಂದಿಗೆ ಮಾತನಾಡಲು ಬಯಸಿದರೆ, ಸಂವಹನವು #communication ದ್ವಿಮುಖವಾಗಿದೆ ಎಂದು ಪ್ರಧಾನಿ ಹೇಳಿದರು.
Also read: ನಾಳೆ ಸಂಜೆವರೆಗೂ ಆದಿಉಡುಪಿಯಲ್ಲಿ ಬಾಳಗಾರು ಅಕ್ಷೋಭ್ಯ ರಾಮಪ್ರಿಯತೀರ್ಥರು
ಇಂದು ಮಾಧ್ಯಮಗಳು ಇಲ್ಲದೇ ಜನರ ತಮ್ಮ ಅಭಿಪ್ರಾಯವನ್ನು ಬಹಿರಂಗಪಡಿಸಬಹುದಾಗಿದೆ. ಉತ್ತರಿಸಬೇಕಾದವರು ಮಾಧ್ಯಮಗಳಿಲ್ಲದೆ ತಮ್ಮ ಅಭಿಪ್ರಾಯಗಳನ್ನು ಉತ್ತಮವಾಗಿ ವ್ಯಕ್ತಪಡಿಸಬಹುದು ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Also read: ಬಿರಿಯಾನಿ ಪ್ರಿಯರೇ ಎಚ್ಚರ | ವ್ಯಕ್ತಿಯ ಅನ್ನನಾಳದಲ್ಲಿ ಸಿಲುಕಿತ್ತು 3.5 ಸೆಮೀ ಉದ್ದದ ಮಟನ್ ಮೂಳೆ
Discussion about this post