ಕಲ್ಪ ಮೀಡಿಯಾ ಹೌಸ್ | ಅಹಮದಾಬಾದ್ |
ಬಿಜೆಪಿ #BJP ಹಾಗೂ ಆರ್’ಎಸ್’ಎಸ್’ನ #RSS ಹಲವು ನಾಯಕರ ಮೇಲೆ ಆತ್ಮಾಹುತಿ ದಾಳಿ ನಡೆಸಲು ಭಾರೀ ಸಂಚು ರೂಪಿಸಿದ್ದ ನಾಲ್ವರು ಉಗ್ರರನ್ನು ಬಂಧಿಸುವಲ್ಲಿ ಗುಜರಾತ್ ಭಯೋತ್ಪಾದನಾ ನಿಗ್ರಹ ದಳವು ಯಶಸ್ವಿಯಾಗಿದೆ.
ತಮ್ಮ ನಾಲ್ವರು ಹ್ಯಾಂಡ್ಲರ್’ಗಾಗಿ ಕಾಯುತ್ತಿದ್ದ ಶ್ರೀಲಂಕಾದ ನಾಲ್ವರು ಉಗ್ರರನ್ನು ವೇಳೆ ಸರ್ದಾರ್ ವಲ್ಲಭಾಬಾಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೃಹತ್ ಕಾರ್ಯಾಚರಣೆ ನಡೆಸಿ ಎಟಿಎಸ್ #ATS ಅಧಿಕಾರಿಗಳು ಬಂಧಿಸಿದ್ದಾರೆ.
ಈ ಉಗ್ರರು ಲೋಕಸಭಾ ಚುನಾವಣೆಯ #ParliamentElection2024 ವೇಳೆಯಲ್ಲಿ ಭಾರೀ ವಿದ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದರು ಎಂಬ ಮಾಹಿತಿ ಹೊರಬಿದ್ದಿದ್ದು, ಈ ಕೃತ್ಯಕ್ಕಾಗಿಯೇ ಇವರನ್ನು ಶ್ರೀಲಂಕಾದಿಂದ ಚೆನ್ನೈ ಮೂಲಕ ಭಾರತಕ್ಕೆ ಕಳುಹಿಸಲಾಗಿದೆ ಎಂದು ಹೇಳಲಾಗಿದೆ.

Also read: ಲೈಂಗಿಕ ದೌರ್ಜನ್ಯ ಕೇಸ್ | ಶಾಸಕ ಎಚ್.ಡಿ. ರೇವಣ್ಣಗೆ ಜಾಮೀನು ಮಂಜೂರು
ಆರ್’ಎಸ್’ಎಸ್, ಬಿಜೆಪಿ ನಾಯಕರೇ ಟಾರ್ಗೆಟ್
ಬಂಧಿತ ಉಗ್ರರು ವಿಚಾರಣೆ ವೇಳೆ ಆತಂಕಕಾರಿ ಮಾಹಿತಿಗಳನ್ನು ಹೊರಹಾಕಿದ್ದು, ಆರ್’ಎಸ್’ಎಸ್ ಹಾಗೂ ಬಿಜೆಪಿ ನಾಯಕರೇ ಇವರ ಟಾರ್ಗೆಟ್ ಆಗಿದ್ದರು ಎಂದು ವರದಿಯಾಗಿದೆ.

ಬಂಧಿತರ ಬ್ಯಾಗ್’ಗಳಿಂದ ಐಎಸ್’ಐಎಸ್ ಧ್ವಜ, #ISIS ಮೊಬೈಲ್ ಫೋನ್’ಳು, ಪಾಸ್’ಪೋರ್ಟ್’ಳನ್ನು ಎಟಿಎಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
36 ಗಂಟೆಗಳ ಮಹತ್ವದ ಕಾರ್ಯಾಚರಣೆ
ಗುಪ್ತಚರ ಇಲಾಖೆಗೆ ಚೆನ್ನೈ #Chennai ಮೂಲಕ ಭಾರತಕ್ಕೆ ಐಸಿಸ್ ಉಗ್ರರು ಬಂದಿದ್ದಾರೆ ಎಂಬ ಖಚಿತ ಮಾಹಿತಿ ದೊರೆತಿತ್ತು. ಈ ಮಾಹಿತಿ ಆಧರಿಸಿ, ಎಟಿಎಸ್ ಅಧಿಕಾರಿಗಳು ಚೆನ್ನೈ ಸೇರಿದಂತೆ ಮಹತ್ವದ ಎಲ್ಲ ವಿಮಾನ, ರೈಲು ನಿಲ್ದಾಣಗಳಲ್ಲಿ ಹದ್ದಿನ ಕಣ್ಣಿಟ್ಟಿತ್ತು.

ಪ್ರಮುಖವಾಗಿ ಅಹಮದಾಬಾದ್’ನ #Ahmedabad ಚೊಟ್ಟಾ ಚಿಲೋಡಾ ಪ್ರದೇಶದಲ್ಲಿ ಶಸ್ತ್ರಾಸ್ತ್ರಗಳನ್ನು ಅಡಗಿಸಿಟ್ಟಿರುವ ಬಗ್ಗೆ ಬಾಯ್ಬಿಟ್ಟಿದ್ದು, ಅವುಗಳನ್ನು ವಶಕ್ಕೆ ಪಡೆಯಲಾಗಿದೆ.
ಪ್ರಮುಖವಾಗಿ ಈ ಶಸ್ತ್ರಾಸ್ತ್ರಗಳನ್ನು ಭಾರತಕ್ಕೆ ತಂದಿದ್ದು ಹೇಗೆ, ಅವುಗಳನ್ನು ಇಲ್ಲಿ ಸಂಗ್ರಹಿಸಲು ಸಹಾಯ ಮಾಡಿದವರು ಯಾರು ಎಂಬ ಕುರಿತಾಗಿ ತನಿಖೆ ನಡೆದಿದೆ.
ಮೇ 12 ರಂದು, ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಇಮೇಲ್ ಬಂದಿದ್ದು, ಭದ್ರತಾ ಸಿಬ್ಬಂದಿ ವಿಮಾನ ನಿಲ್ದಾಣದ ಸಂಕೀರ್ಣವನ್ನು ಶೋಧಿಸಿದ ನಂತರ ಅದು ಸುಳ್ಳು ಎಂದು ತಿಳಿದುಬಂದಿದೆ. ಆದರೆ ಅನುಮಾನಾಸ್ಪದ ಏನೂ ಕಂಡುಬಂದಿರಲಿಲ್ಲ. ಮಧ್ಯಾಹ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕೃತ ಇಮೇಲ್ ಐಡಿಗೆ ಅಪರಿಚಿತ ವ್ಯಕ್ತಿಯಿಂದ ಬೆದರಿಕೆ ಇಮೇಲ್ ಕಳುಹಿಸಲಾಗಿತ್ತು. ನಂತರ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಇಡೀ ವಿಮಾನ ನಿಲ್ದಾಣವನ್ನು ಸ್ಕಾö್ಯನ್ ಮಾಡಿದ್ದಾರೆ ಎಂದು ವರದಿಯಾಗಿದೆ.
ಕಳೆದ ವರ್ಷ ಆಗಸ್ಟ್’ನಲ್ಲಿ ಎಟಿಎಸ್ ಅಲ್ ಖೈದಾದೊಂದಿಗೆ ಸಂಪರ್ಕ ಹೊಂದಿದ್ದಕ್ಕಾಗಿ ರಾಜ್’ಕೋಟ್’ನಿಂದ ಮೂವರನ್ನು ಬಂಧಿಸಿತ್ತು. ನಿಷೇಧಿತ ಭಯೋತ್ಪಾದಕ ಸಂಘಟನೆಗೆ ಜನರನ್ನು ಆಮೂಲಾಗ್ರಗೊಳಿಸಲು ಮತ್ತು ನೇಮಕಾತಿ ಮಾಡಲು ಬಾಂಗ್ಲಾದೇಶದ ಹ್ಯಾಂಡ್ಲರ್’ಗಾಗಿ ಬಂಧಿತ ಉಗ್ರರು ಪ್ರಾಥಮಿಕವಾಗಿ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













Discussion about this post