ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಭ್ಯರ್ಥಿ ಆಯ್ಕೆಯಲ್ಲಿ ಕೆಲವು ನಾಯಕರ ತಪ್ಪು ನಿರ್ಧಾರ ಮತ್ತು ಕಾರ್ಯಕರ್ತರಿಗೆ ಆದ ನೋವನ್ನು ಕೇಂದ್ರ ನಾಯಕರಿಗೆ ಸಂದೇಶ ಕಳುಹಿಸಬೇಕು ಎಂಬುವುದು ನನ್ನ ಇಚ್ಛೆ. ನಾನು ನಿಂತಿರುವುದು ಗೆಲ್ಲುವುದಕ್ಕೆ ಮತ್ತು ಗೆದ್ದು ಪದವೀಧರರ ಪರ ಕೆಲಸ ಮಾಡುವುದಕ್ಕೆ ಯಾರ ಮೇಲೂ ದ್ವೇಷದಿಂದಲ್ಲ ಎಂದು ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ರಘುಪತಿ ಭಟ್ #Raghupathi Bhat ಹೇಳಿದ್ದಾರೆ.
ನಗರದ ಮಲ್ಲೇಶ್ವರ ನಗರದಲ್ಲಿರುವ ಈಶ್ವರಪ್ಪನವರ ಮನೆಯಲ್ಲಿ ರಾಷ್ಟ್ರಭಕ್ತರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಈಶ್ವರಪ್ಪನವರ ಬೆಂಬಲ ನನಗೆ ಶಕ್ತಿ ತುಂಬಿದೆ. ಉಡುಪಿಯ ಕನಕ ಗೋಪುರ ವಿವಾದವಾದಾಗ ಈಶ್ವರಪ್ಪನವರು #K S Eshwarappa ಜಾತಿ ಮೀರಿ ಸಮಸ್ಯೆ ಬಗೆಹರಿಸಿದ್ದರು. ನನ್ನ ಸ್ಪರ್ಧೆ ಒಂದು ದಿನದ ನಿರ್ಧಾರವಲ್ಲ. ನನ್ನ ಗೆಲುವು ಬಿಜೆಪಿ ಕೇಂದ್ರ ನಾಯಕರಿಗೆ ಸ್ಪಷ್ಟ ಸಂದೇಶ ನೀಡಲಿದೆ. ವ್ಯವಸ್ಥೆ ಸರಿ ಮಾಡಬೇಕು ಎಂದಾಗ ಕೆಲವೊಂದು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ನಾನು ಬಿಜೆಪಿ ಕಾರ್ಯಕರ್ತರ ಬೆಂಬಲಿತ ಅಭ್ಯರ್ಥಿ ಎಂದರು.
ಡಾ. ಧನಂಜಯ ಸರ್ಜಿ ಬಿಜೆಪಿ ನಾಯಕರ ಬೆಂಬಲಿತ ಅಭ್ಯರ್ಥಿ, ಇನ್ನೋರ್ವ ಅಭ್ಯರ್ಥಿ ಆಯನೂರು ಮಂಜುನಾಥ್ ನಮ್ಮ ಪಕ್ಷದಿಂದಲೇ ನಾಲ್ಕು ಸ್ಥಾನ ಪಡೆದವರು. ಉಡುಪಿಯ ಶ್ರೀಕೃಷ್ಣ ಹಾಗೂ ಆಯೋಧ್ಯೆಯ ಬಾಲರಾಮನ ಸಂಪೂರ್ಣ ಅನುಗ್ರಹ ನನಗಿದೆ. ಡಾ. ಸರ್ಜಿ ಇದುವರೆಗೆ ನನ್ನನ್ನು ಒಂದು ಬಾರಿಯೂ ಸಂಪರ್ಕಿಸಲಿಲ್ಲ. ಯಾರೂ ನಿಂತರೂ ಬಿಜೆಪಿಯಲ್ಲಿ ಗೆಲ್ಲುತ್ತಾರೆ ಎಂಬ ಭಾವನೆಯಿದೆ ಎಂದರು.
ಶಿವಮೊಗ್ಗದ ಪದವೀಧರರ ಬೆಂಬಲ ನನಗೆ ಬೇಕು. ನಾನು ಸದಾ ಕಾರ್ಯಕರ್ತರ ಜೊತೆಯಲ್ಲಿಯೇ ಇದ್ದವನು ನಿಮ್ಮ ಮತಕ್ಕೆ ನ್ಯಾಯ ಕೊಡುವ ಕೆಲಸ ಮಾಡುತ್ತೇನೆ. ಈ ಚುನಾವಣೆಯಲ್ಲಿ ಮತಹಾಕಲು ಬೆಳಿಗ್ಗೆ 8ರಿಂದ ಸಂಜೆ 4ರ ವರೆಗೆ ಅವಕಾಶವಿರುತ್ತದೆ. ಅಭ್ಯರ್ಥಿ ಆಯ್ಕೆಯಲ್ಲಿ ಕೆಲವು ನಾಯಕರ ತಪ್ಪು ನಿರ್ಧಾರ ಮತ್ತು ಕಾರ್ಯಕರ್ತರಿಗೆ ಆದ ನೋವನ್ನು ಕೇಂದ್ರ ನಾಯಕರಿಗೆ ಸಂದೇಶ ಕಳುಹಿಸಬೇಕು ಎಂಬುವುದು ನನ್ನ ಇಚ್ಛೆ. ನಾನು ನಿಂತಿರುವುದು ಗೆಲ್ಲುವುದಕ್ಕೆ ಮತ್ತು ಗೆದ್ದು ಪದವೀಧರರ ಪರ ಕೆಲಸ ಮಾಡುವುದಕ್ಕೆ ಯಾರ ಮೇಲೂ ದ್ವೇಷದಿಂದಲ್ಲ ಎಂದರು.
ಬಳಿಕ ರಾಷ್ಟ್ರಭಕ್ತರ ಬಳಗದ ವತಿಯಿಂದ ಸುದ್ಧಿಗೋಷ್ಠಿ ನಡೆಸಿ ಕರಪತ್ರ ಬಿಡುಗಡೆ ಮಾಡಿ, ರಘುಪತಿಭಟ್‍ರ ಗೆಲುವಿಗೆ ಶ್ರಮಿಸುವ ನಿರ್ಧಾರ ಕೈಗೊಳ್ಳಲಾಯಿತು. ಶಿಕ್ಷಕರ ಕ್ಷೇತ್ರದಲ್ಲಿ ಯಾರಿಗೆ ಬೆಂಬಲ ನೀಡಬೇಕು ಎಂದು ಮುಂದೆ ತಿಳಿಸಲಾಗುವುದು ಎಂದು ಈಶ್ವರಪ್ಪನವರು ಹೇಳಿದರು.
Also read: ದ್ವಿತೀಯ ಪಿಯುಸಿ ಎರಡನೇ ವಾರ್ಷಿಕ ಪರೀಕ್ಷೆ | ಕ್ರೈಸ್ಟ್ಕಿಂಗ್ ಕಾಲೇಜಿನ ಇಬ್ಬರಿಗೆ ರ‍್ಯಾಂಕ್
ತೀರ್ಥಹಳ್ಳಿಯ ಬಿಜೆಪಿ ಪ್ರಮುಖರಾದ ಮದನ್, ಸಾಗರದ ವಾಟ್‍ಗೋಡು ಸುರೇಶ್, ಭದ್ರಾವತಿಯ ಮಂಜುನಾಥ್ ಮೊದಲಾದವರು ರಘುಪತಿ ಭಟ್‍ರ ಗೆಲುವಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಕೆ.ಇ. ಕಾಂತೇಶ್, ಕಾಚಿನಕಟ್ಟೆ ಸತ್ಯನಾರಾಯಣ್, ರಾಜಾರಾಮ್ ಭಟ್, ಸತ್ಯನಾರಾಯಣ್, ಗಂಗಾಧರ್, ಶ್ರೀಕಾಂತ್, ಜಾಧವ್, ರಾಜು, ಮೋಹನ್, ಲಿಂಗರಾಜ್ ಮತ್ತಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post