ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸಮಾಜಕ್ಕೆ ಸಂತೋಷ ನೀಡುವ ವ್ಯಕ್ತಿತ್ವ ರೂಪಿಸಿಕೊಳ್ಳಿ ಎಂದು ಪೇಜಾವರ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.
ಉಡುಪಿ ಶ್ರೀ ಭಂಡಾರಕೇರಿ ಮಠ, #BandarakeriMutt ಲೋಕ ಸಂಸ್ಕೃತಿ ವಿದ್ಯಾ ವಿಕಾಶ ಪ್ರತಿಷ್ಠಾನವು ರಾಜಧಾನಿಯ ಗಿರಿನಗರದ ಭಾಗವತ ಕೀರ್ತಿಧಾಮದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರಗುರು ಶ್ರೀ ವೇದವ್ಯಾಸ ಜಯಂತಿ, ಮಾಧ್ವ ರಾದ್ಧಾಂತ ಸಂವರ್ಧಕ ಸಭಾ 81ನೇ ಅಧಿವೇಶನ ಸಮಾರೋಪ ಮತ್ತು ಶ್ರೀ ವಿದ್ಯಾಮಾನ್ಯ ತೀರ್ಥರ 24ನೇ ಆರಾಧನೋತ್ಸವ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ರಾಜ ಪ್ರಭುತ್ವ ಇದ್ದಾಗ ಮಹಾರಾಜರೇ ಪ್ರಜೆಗಳಿಗೆ ಸಂತೋಷವಾಗುವ ರೀತಿ ರಾಜ್ಯಭಾರ ಮಾಡುತ್ತ ಇದ್ದರು. ರಾಮ ಇದಕ್ಕೆ ಆದರ್ಶ ಪುರುಷ. ಆದರೆ ಇಂದು ಪ್ರಜಾಪ್ರಭುತ್ವ ಇದೆ. ಪ್ರಜೆಗಳೇ ಸಮಾಜಕ್ಕೆ ಹಿತವಾಗುವಂತೆ ಬಾಳಬೇಕು. ಇತರರಿಗೆ ನೆಮ್ಮದಿ, ಸಂಭ್ರಮ ನೀಡುವ ಉದಾತ್ತ ಮನೋಭಾವ ರೂಢಿಸಿಕೊಂಡರೆ ನಾಡು ಸುಭಿಕ್ಷವಾಗಿರುತ್ತದೆ ಎಂದರು.
ಭಂಡಾರಕೇರಿ ಮಠದ #BandarakeriMutt ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವೇದವ್ಯಾಸ ಜಯಂತಿ ಅಂಗವಾಗಿ ಬೆಳಗ್ಗೆ 8ಕ್ಕೆ ಹೋಮ, 9ಕ್ಕೆ ವೇದ ಶಾಸ್ತ್ರ ವಿನೋದ, ಮಧ್ಯಾಹ್ನ 2ಕ್ಕೆ ವಸಂತ ಉತ್ಸವ, ಸಂಜೆ 5ಕ್ಕೆ ಶ್ರೀ ವಿದ್ಯಾಮಾನ್ಯರ ಭಾವಚಿತ್ರ ಶೋಭಾಯಾತ್ರೆ ನೆರವೇರಿತು.
ಪ್ರಶಸ್ತಿ ಪ್ರದಾನ
ಉಡುಪಿ ಶ್ರೀ ಭಂಡಾರಕೇರಿ ಮಠದ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದ ಈರೋಡ್ ವೇದವ್ಯಾಸ ಸಂಸ್ಕೃತ ಗುರುಕುಲದ ದಾಮೋದರಾಚಾರ್ಯರ ಪರವಾಗಿ ಅವರ ಶಿಷ್ಯ ಸಂತಾನ ಕೃಷ್ಣ ರಿಗೆ (1 ಲಕ್ಷ ರೂ. ನಗದು, ಸನ್ಮಾನಪತ್ರ, ಸ್ಮರಣಿಕೆ), ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ #PoornaprajnaVidyapeeta ಪ್ರಾಧ್ಯಾಪಕ ಮಧ್ವೇಶ ನಡಿಲ್ಲಾಯ (ರಾಜಹಂಸ ಪ್ರಶಸ್ತಿ) ಬಸವನಗುಡಿ ಶ್ರೀ ಜಯತೀರ್ಥ ವಿದ್ಯಾಪೀಠದ ಪಂಡಿತ ಸತ್ಯಬೋಧಾಚಾರ್ಯ ಹೊನ್ನಾಳಿ (ಶ್ರೀ ಸತ್ಯತೀರ್ಥ ಅನುಗ್ರಹ ಪ್ರಶಸ್ತಿ) ತಲಾ 50 ಸಾವಿರ ರೂ. ನಗದು, ಸನ್ಮಾನಪತ್ರ ನೀಡಿ ಗೌರವಿಸಲಾಯಿತು.
Also read: ಲೈಂಗಿಕ ದೌರ್ಜನ್ಯ ಕೇಸ್ | ಶಾಸಕ ಎಚ್.ಡಿ. ರೇವಣ್ಣಗೆ ಜಾಮೀನು ಮಂಜೂರು

ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರಿಗೆ ಶ್ರೀ ಭಂಡಾರಕೇರಿ ಶ್ರೀಗಳು ‘ಶ್ರೀ ರಾಮ ಲಲನ ಲಾಲನ ಲಲಾಮ ತೀರ್ಥ’ ಬಿರುದು ನೀಡಿ ಸನ್ಮಾನಿಸಿದರು. ನೂರಾರು ಜನ ವಿದ್ವಾಂಸರು, ಪಂಡಿತರು ಇದಕ್ಕೆ ಸಾಕ್ಷಿಯಾದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

ಭಂಡಾರಕೇರಿ ಮಠದ #BandarakeriMutt ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವೇದವ್ಯಾಸ ಜಯಂತಿ ಅಂಗವಾಗಿ ಬೆಳಗ್ಗೆ 8ಕ್ಕೆ ಹೋಮ, 9ಕ್ಕೆ ವೇದ ಶಾಸ್ತ್ರ ವಿನೋದ, ಮಧ್ಯಾಹ್ನ 2ಕ್ಕೆ ವಸಂತ ಉತ್ಸವ, ಸಂಜೆ 5ಕ್ಕೆ ಶ್ರೀ ವಿದ್ಯಾಮಾನ್ಯರ ಭಾವಚಿತ್ರ ಶೋಭಾಯಾತ್ರೆ ನೆರವೇರಿತು.
ಪ್ರಶಸ್ತಿ ಪ್ರದಾನಉಡುಪಿ ಶ್ರೀ ಭಂಡಾರಕೇರಿ ಮಠದ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದ ಈರೋಡ್ ವೇದವ್ಯಾಸ ಸಂಸ್ಕೃತ ಗುರುಕುಲದ ದಾಮೋದರಾಚಾರ್ಯರ ಪರವಾಗಿ ಅವರ ಶಿಷ್ಯ ಸಂತಾನ ಕೃಷ್ಣ ರಿಗೆ (1 ಲಕ್ಷ ರೂ. ನಗದು, ಸನ್ಮಾನಪತ್ರ, ಸ್ಮರಣಿಕೆ), ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ #PoornaprajnaVidyapeeta ಪ್ರಾಧ್ಯಾಪಕ ಮಧ್ವೇಶ ನಡಿಲ್ಲಾಯ (ರಾಜಹಂಸ ಪ್ರಶಸ್ತಿ) ಬಸವನಗುಡಿ ಶ್ರೀ ಜಯತೀರ್ಥ ವಿದ್ಯಾಪೀಠದ ಪಂಡಿತ ಸತ್ಯಬೋಧಾಚಾರ್ಯ ಹೊನ್ನಾಳಿ (ಶ್ರೀ ಸತ್ಯತೀರ್ಥ ಅನುಗ್ರಹ ಪ್ರಶಸ್ತಿ) ತಲಾ 50 ಸಾವಿರ ರೂ. ನಗದು, ಸನ್ಮಾನಪತ್ರ ನೀಡಿ ಗೌರವಿಸಲಾಯಿತು.