ಕಲ್ಪ ಮೀಡಿಯಾ ಹೌಸ್ | ಜಮ್ಮು |
ಕಣಿವೆ ರಾಜ್ಯ ಜಮ್ಮು ಕಾಶ್ಮೀರದ #Jammu and Kashmir ಕಥುವಾ ಹಾಗೂ ದೋಡಾ ಜಿಲ್ಲೆಗಳಲ್ಲಿ ಸಿಆರ್’ಪಿಎಫ್ ಯೋಧರ ಮೇಲೆ ಗುಂಡಿನ ದಾಳಿ ನಡೆಸಲು ಮುಂದಾದ ಉಗ್ರರಿಗೆ ನಮ್ಮ ಯೋಧರು ತಕ್ಕ ಉತ್ತರ ನೀಡಿದ್ದು, ಈ ವೇಳೆ ಸಿಆರ್’ಪಿಎಫ್ ಓರ್ವ ಯೋಧ ಹುತಾತ್ಮರಾಗಿದ್ದಾರೆ.
ಎರಡೂ ಜಿಲ್ಲೆಗಳಲ್ಲಿ ಯೋಧರು ಹಾಗೂ ಉಗ್ರರ ನಡುವೆ ಭಾರೀ ಸಂಘರ್ಷ ನಡೆದಿದ್ದು, ಸಿಆರ್’ಪಿಎಫ್ ಓರ್ವ ಜವಾನ ಹುತಾತ್ಮರಾಗಿದ್ದು, ಭದ್ರತಾ ಸಿಬ್ಬಂದಿಗಳು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
Also read: ಆಂಧ್ರಪ್ರದೇಶ | ನಾಯ್ಡು ಸಿಎಂ, ಪವನ್ ಕಲ್ಯಾಣ್ ಡಿಸಿಎಂ | ಪ್ರಮಾಣ ವಚನ ಸ್ವೀಕಾರ | ಪ್ರಧಾನಿ ಉಪಸ್ಥಿತಿ

ಮತ್ತೊಂದೆಡೆ, ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ ಜವಾನ ಕಬೀರ್ ದಾಸ್ ಅವರು ನಸುಕಿನ ಜಾವ 3 ಗಂಟೆ ಸುಮಾರಿಗೆ ಕಥುವಾ ಜಿಲ್ಲೆಯ ಸೈದಾ ಸುಖಲ್ ಗ್ರಾಮದಲ್ಲಿ ನಡೆದ ಭಯೋತ್ಪಾದಕರಿಂದ ಗುಂಡಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news














Discussion about this post