ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗದ ಶ್ರೀವೈಷ್ಣವ ಮಹಾಪರಿಷತ್ ನಿರ್ಮಿಸಿರುವ ಶ್ರೀ ರಾಮಾನುಜ ಭವನದ ಉದ್ಘಾಟನಾ ಸಮಾರಂಭ ಜೂನ್ 13ರ ಗುರುವಾರ ನಡೆಯಲಿದೆ.
ಅಂದು ಬೆಳಿಗ್ಗೆ ಆರು ಗಂಟೆಗೆ ಸಲ್ಲುವ ಶುಭ ಸಮಯದಲ್ಲಿ ಶಿವಮೊಗ್ಗ ತ್ಯಾವರೆ ಚಟ್ನಹಳ್ಳಿ (ಪುಣ್ಯಕೋಟಿ ಬಡಾವಣೆ) ಯಲ್ಲಿ ನಿರ್ಮಿಸಿರುವ ಶ್ರೀ ರಾಮಾನುಜ ಭವನ ಪ್ರವೇಶ ಕಾರ್ಯಕ್ರಮ ನಡೆಯಲಿದೆ.
ಬೆಳಗ್ಗೆ 11 ಗಂಟೆಗೆ ಯದುಗಿರಿ ಯತಿರಾಜ ಮಠ, ಮೇಲುಕೋಟೆ ಶಾಖಾ ಮಠದ ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ ಸಾನಿಧ್ಯ ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
Also read: VISL ಪುನಶ್ಚೇತನ? ಮಹತ್ವದ ಚರ್ಚೆ ನಡೆಸಿ ಅಧಿಕಾರಿಗಳಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ಸೂಚನೆ ನೀಡಿದ್ದೇನು?
ಈ ಸಮಾರಂಭದಲ್ಲಿ ಜಿಲ್ಲಾ ಸಮಿತಿ ಅಧ್ಯಕ್ಷ ಎಸ್. ರಂಗನಾಥಯ್ಯ ಅಧ್ಯಕ್ಷತೆ ವಹಿಸಲಿದ್ದು, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಂಸದ ಬಿ ವೈ ರಾಘವೇಂದ್ರ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಶಾಸಕರಾದ ಎಸ್ ಎನ್ ಚನ್ನಬಸಪ್ಪ, ಶಾರದಾ ಪೂರ್ಯಾನಾಯ್ಕ್ ಹಾಗೂ ಸೂಡಾ ಅಧ್ಯಕ್ಷ ಎಚ್ಎಸ್ ಸುಂದರೇಶ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಸರ್ವರನ್ನು ವೈಷ್ಣವ ಮಹಾಸಭಾ ಶಿವಮೊಗ್ಗ ಹಾಗೂ ಬಿ ವೈಷ್ಣವ ಮಹಾಸಭಾ ಶಿವಮೊಗ್ಗ ಆತ್ಮೀಯವಾಗಿ ಸ್ವಾಗತಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news






















