ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಓದು ವಕ್ಕಾಲು ಬುದ್ದಿ ಮುಕ್ಕಾಲು ಎಂಬಂತೆ ಓದು ಕೆಲಸ ಮಾಡಿದರೆ ಬುದ್ದಿ ದೇಶ ಆಳುತ್ತದೆ, ವಿದ್ಯಾಭ್ಯಾಸದ ಜೊತೆ ಜೊತೆಗೆ ಹೊರ ಸಮಾಜದ ಒಡನಾಟವು ಕೂಡ ವಿದ್ಯಾರ್ಥಿಗಳಿಗೆ ತುಂಬಾ ಮುಖ್ಯವಾದುದು ಎಂದು ನೂತನ ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ #Dr. Dhananjaya Sarji ಹೇಳಿದರು.
ಗೋಪಾಳದ ಗುಡ್ ಶಫರ್ಡ್ ಚರ್ಚ್ ನಲ್ಲಿ ಭಾನುವಾರ ಎಸ್ ಎಸ್ ಎಲ್ ಸಿ , ಪಿ ಯು ಸಿ ಮತ್ತು ಪದವಿ ತರಗತಿಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಗುರುಗಳಾಗಿ ಪೋಷಕರಾಗಿ ನಾವು ಪಾಠ ಪ್ರವಚನಗಳ ಜೊತೆಗೆ ವಿದ್ಯಾರ್ಥಿಗಳಲ್ಲಿ ಒಳ್ಳೆಯ ಸಂಸ್ಕಾರ, ಸಂಸ್ಕೃತಿ , ಒಳ್ಳೆಯ ಶಿಸ್ತು , ಒಳ್ಳೆಯ ಗುಣಗಳನ್ನು ಕಲಿಸಿ ಭವ್ಯ ಭಾರತದ ಮುಂದಿನ ನಾಗರಿಕ ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ಸಲಹೆ ನೀಡಿದರು.
Also read: ಸಂಗೀತ ಕ್ಷೇತ್ರಕ್ಕೆ ವಿದ್ಯಾರಣ್ಯ ಶ್ರೀಗಳ ಕೊಡುಗೆ ಅಪಾರ
ಈ ವೇಳೆ ಧರ್ಮಗುರು ಗುಡ್ ಶಫರ್ಡ್ ಚರ್ಚ್ ನ ಫಾದರ್ ವೀರೇಶ್ ವಿ. ಮೋರಾಸ್ ಅವರು ವಿಧಾನ ಪರಿಷತ್ತಿನ ನೂತನ ಸದಸ್ಯ ಡಾ. ಧನಂಜಯ ಸರ್ಜಿ ಅವರಿಗೆ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ತೀರ್ಥಹಳ್ಳಿ ಗೆ ವರ್ಗಾವಣೆ ಗೊಂಡ ಫಾ.ವೀರೇಶ್ ಮೋರಾಸ್ ಅವರನ್ನು ಗೌರವಿಸಿ ಬೀಳ್ಕೊಡಲಾಯಿತು. ಈ ವೇಳೆ ದಿವ್ಯ ನವೀನ್, ಜೆನಿತ ಆಲ್ವಿನ್, ವಿಲಿಯಂ ಕ್ಯಾಸ್ತೆಲಿನೊ, ಖಜಾಂಚಿ ಫ್ಲಾರೆನ್ಸ್ ಮೇರಿ, ಅನಿತಾ ಸಂತೋಷ್, ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news





















