ಕಲ್ಪ ಮೀಡಿಯಾ ಹೌಸ್ | ಸೊರಬ |
ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮದ ರಭಸಕ್ಕೆ ಎರಡು ದನಗಳು ಸ್ಥಳದಲ್ಲಿ ಅತ್ಯಂತ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಪಟ್ಟಣದ ಸಾಗರ ರಸ್ತೆಯಲ್ಲಿ #Sagara ನಡೆದಿದೆ.
ಪಟ್ಟಣದಲ್ಲಿ ಎರಡು ದಿನಗಳ ಅಂತರದಲ್ಲಿ ಎರಡು ಅಪಘಾತ ನಡೆದಿದ್ದು, ಹಲವು ದನಗಳು ದಾರುಣವಾಗಿ ಸಾವನ್ನಪ್ಪಿವೆ.
ಜೂನ್ 24ರಂದು ಕೆನರಾ ಬ್ಯಾಂಕ್ ಹಾಗೂ ಶ್ರೀರಾಮ ದೇವಾಲಯ, ಜೂನ್ 25ರಂದು ಕೆಎಸ್’ಆರ್’ಟಿಸಿ ಬಸ್ ನಿಲ್ದಾಣದ ಎದುರು ಹಾಗೂ ಇಂಡೇನ್ ಗ್ಯಾಸ್ ಕಚೇರಿ ಮುಂಭಾಗದಲ್ಲಿ ವಾಹನ ಅಪಘಾತ ಸಂಭವಿಸಿದ್ದು, ಹಲವು ದನಗಳು ಸಾವನ್ನಪ್ಪಿವೆ.
Also read: ಮಾದಕ ವಸ್ತುಗಳ ವಿರುದ್ಧ ಸಮರ ಸಾರಲು ಪೊಲೀಸರೊಂದಿಗೆ ಸಹಕರಿಸಿ: ಎಸ್’ಪಿ ಮಿಥುನ್ ಕುಮಾರ್ ಕರೆ
ಪ್ರಮುಖವಾಗಿ ಇದೇ ರೀತಿಯಲ್ಲಿಯೇ ಕಳೆದ ವರ್ಷ ದನಗಳ ತೊಂದರೆಯಿಂದಾಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು.ತಾಲೂಕಿನಾದ್ಯಂತ ನೂರಾರು ಬಿಡಾಡಿ ದನಗಳು ಹಗಲು ರಾತ್ರಿಯನ್ನದೇ ರಸ್ತೆಯಲ್ಲೇ ತಿರುಗಾಡುತ್ತಿದ್ದು, ವಾಹನ ಸವಾರರಿಗೆ ತೊಂದರೆಯುಂಟಾಗುತ್ತಿದೆ.
ಕೆಲವು ದನಗಳ ವಾರಸುದಾರರು ಇದ್ದರೂ ಕೂಡ ಕಟ್ಟದೇ ಬೇಕಾಬಿಟ್ಟಿ ರಸ್ತೆಯಲ್ಲಿಯೇ ಬಿಟ್ಟಿರುತ್ತಾರೆ. ಕಳೆದ ಒಂದು ತಿಂಗಳಿಂದ 20 ಕ್ಕೂ ಹೆಚ್ಚು ದನಗಳು ಅಪರಿಚಿತ ವಾಹನಗಳಿಗೆ ಬಲಿಯಾಗಿವೆ.
ಪುರಸಭೆ ವ್ಯಾಪ್ತಿಯಲ್ಲಿ ಹೆಚ್ಚಾಗಿ ದನಗಳ ಸಾವುಗಳು ಕಂಡುಬರುತ್ತಿದ್ದು, ಕೂಡಲೇ ಅಧಿಕಾರಿಗಳು ದನಗಳನ್ನು ಗೋ ಶಾಲೆಗೆ ಸೇರಿಸಲು ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.
ದನಗಳ ಸ್ಥಳಾಂತರ ವಿಚಾರದಲ್ಲಿ ಹಿಂದಿನ ಘಟನೆಗಳ ಆಧಾರದಲ್ಲಿ ಹಲವು ಬಾರಿ ದೂರು ಸಲ್ಲಿಸಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಮುಂದಿನ 15 ದಿನಗಳಲ್ಲಿ ಬಿಡಾಡಿ ದನಗಳ ವಿಚಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳದೇ ಇದ್ದಲ್ಲಿ ಸ್ಥಳೀಯರೇ ಸೇರಿ ದನಗಳ ಸ್ಥಳಾಂತರ ಕಾರ್ಯ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.
ಈಗ ಮೃತಪಟ್ಟ ದನಗಳ ಅಂತ್ಯಸಂಸ್ಕಾರವನ್ನು ಸ್ಥಳೀಯರೇ ಒಟ್ಟಾಗಿ ನೆರವೇರಿಸಿದ್ದಾರೆ.
ನಾಗರಾಜ್ ಗುತ್ತಿ, ಲೋಕೇಶ್, ಕೀರ್ತಿರಾಜ, ಭಾಸ್ಕರ, ಚಿದಾನಂದ ಗೌಡ್ರು, ರಾಘು ಆಚಾರ್, ರಂಗನಾಥ ಮೊಗವೀರ್, ಜಾನಕಪ್ಪ ಯಲಸಿ, ಅಭಿ ಹೊಯ್ಸಳ, ಸುಭಾಷ್ ಆಚಾರ್, ಸ್ನೇಕ್ ನವೀನ, ರಾಘು ಮಡಿವಾಳ, ಪುನೀತ್, ವಿಕ್ರಮ್ ಮೇಸ್ತಿç, ಮೋಹನ್, ಗಣೇಶ್, ಚಂದನ್, ಶರತ್, ಭರತ್, ಪ್ರದೀಪ್, ರಮೇಶ್ ಸೇರಿದಂತೆ ಹಲವರು ಇದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post