ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಜಿಲ್ಲಾ ಫುಟ್ಬಾಲ್ ಸಂಸ್ಥೆಯು ಜೂನ್ 24 ರಿಂದ ಶಿವಮೊಗ್ಗ ನಗರದ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಪುಟ್ಬಾಲ್ ಲೀಗ್ ಪಂದ್ಯಾವಳಿಯು #Football League Tournament ಈಗ ಸೆಮಿಫೈನಲ್ ಹಂತ ತಲುಪಿದೆ. ಇದಾದ ನಂತರ ಜುಲೈ 3ರಂದು ಫೈನಲ್ ಪಂದ್ಯ ನಡೆಯಲಿದೆ ಎಂದು ಜಿಲ್ಲಾ ಪುಟ್ವಾಲ್ ಸಂಸ್ಥೆಯ ಅಧ್ಯಕ್ಷ ಎಸ್.ಆರ್.ಶ್ರೀನಾಥ್ ತಿಳಿಸಿದ್ದಾರೆ.
ಅವರು ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿ, ಜೂನ್ 24 ರಿಂದ ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳ ತೀರ್ಮಾನ ಮತ್ತು ಪರಿಶ್ರಮದಿಂದ ಈ ಪಂದ್ಯಾವಳಿ ಯಶಸ್ವಿಯಾಗಿ ನಡೆಯುತ್ತಾ ಬಂದಿದೆ. ಇದುವರೆಗೂ ಪಂದ್ಯಾವಳಿ ಯಶಸ್ವಿ ಯಾಗಿ ನಡೆದಿದ್ದು, ಈಗ ಸೆಮಿಫೈನಲ್ಸ್ ಹಂತಕ್ಕೆ ಕಾಲಿಟ್ಟಿರುವುದಕ್ಮೆ ನಮಗೆಲ್ಲ ತುಂಬಾ ಸಂತಸ ತಂದಿದೆ ಎಂದರು.
Also read: ಜುಲೈ 3ರಂದು ಶ್ರೀ ಜಗದ್ಗುರು ರಂಭಾಪುರೀಶ ನಿವಾಸ ಉದ್ಘಾಟನಾ ಸಮಾರಂಭ
ಫುಟ್ಬಾಲ್ ಸಂಸ್ಥೆಯ ಸದಸ್ಯ ಎಲ್. ವಿಜಯ್‍ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಒಟ್ಡು 20 ಫುಟ್ಬಾಲ್ ಕ್ಲಬ್ ಗಳಿದ್ದು ,ಈಗ ಎ ಡಿವಿಷನ್ ನಲ್ಲಿ 9 ಕ್ಲಬ್ ಗಳು ಪಂದ್ಯಾವಳಿಯಲ್ಲಿ ಭಾಗಿಯಾಗಿವೆ. ಎಲ್ಲಾ ಕ್ಲಬ್ ನ ಆಟಗಾರರು ತುಂಬಾ ಒಳ್ಳೆಯ ಆಟ ಪ್ರದರ್ಶಿಸಿರುವುದು , ಜಿಲ್ಲೆಯ ಫುಟ್ಬಾಲ್ ಬೆಳವಣಿಗೆಗೆ ತುಂಬಾ ಆಶಾದಾಯಕವೇ ಎನಿಸಿದೆ. ಈಗ ಜುಲೈ 2 ರಂದು ಸೆಮಿ ಫೈನಲ್ ಮತ್ತುಜುಲೈ 3 ರಂದು ಫೈನಲ್ ಪಂದ್ಯಾವಳಿನಡೆಯಲಿದೆ. ಇದಾದನಂತರ ಶನಿವಾರ ಮತ್ತು ಭಾನುವಾರ ಬಿ. ಡಿವಿಷನ್‍ನಲ್ಲಿ 8 ಕ್ಲಬ್ ಗಳು ಪಂದ್ಯಾವಳಿಯಲ್ಲಿ ಆಡಲಿವೆ ಎಂದರು.
ಎ ಡಿವಿಷನ್ ನಲ್ಲಿ ನೋವಾ ಎಫ್ ಸಿ, ಪ್ರಮೋದ್ ಎಫ್ ಸಿ, ದಯಾ ಎಫ್ ಸಿ, ಶಿವಮೊಗ್ಗ ಯುನೈಟೆಡ್ ಎಫ್ ಸಿ, ಮಜೆರ್ಂಟ್ ಎಫ್ ಸಿ, ಜೈನ್ ಎಫ್ ಸಿ, ಮಲ್ನಾಡ್ ಕಿಕರ್ಸ್, ಮೊಹಮೊಡನ್ ಸ್ಪೋಟಿಂಗ್, ಹಾಗೂ ಜೆ ಎಂ ಎಫ್ ಸಿ ತಂಡಗಳು ಪಂದ್ಯಾವಳಿಯಲ್ಲಿ ಭಾಗಿಯಾಗಿವೆ ಎಂದು ವಿವರಿಸಿದರು.
ಇನ್ನು ಜುಲೈ 2 ರ ಮಂಗಳವಾರದಿಂದ ಸೆಮಿಫೈನಲ್ಸ್ ಶುರುವಾಗಲಿದ್ದು, ಮೊದಲದಿನ ಆಡಲಿವೆ. ಇದಾದ ನಂತರ ಜುಲೈ 3 ರಂದು ಪೈನಲ್ ಪಂದ್ಯಾವಳಿ ನಡೆಯಲಿದ್ದು, ಶಿವಮೊಗ್ಗ ನಗರ ಹಾಗೂ ಜಿಲ್ಲೆಯ ಫುಟ್ಬಾಲ್ ಪ್ರೇಮಿಗಳು ಹೆಚ್ಛಿನ ಸಂಖ್ಯೆಯಲ್ಲಿ ಬಂದು ಪಂದ್ಯ ವೀಕ್ಣಣೆ ಮಾಡಿದರೆ ಸಂಸ್ಥೆಯ ಶ್ರಮ ಸಾರ್ಥಕವಾಗಲಿದೆ ಎನ್ನುವುದು ನಮ್ಮ ಭಾವನೆ. ಪುಟ್ವಾಲ್ ಲೀಗ್ ಪಂದ್ಯಾವಳಿ ಈವರೆಗೂ ಇಷ್ಟು ಯಶಸ್ವಿಯಾಗಿರುವುದಕ್ಕೆ ಎಲ್ಲಾ ಮಾಧ್ಯಮದವರ ಸಹಕಾರವೂ ಕಾರಣ. ಈಗ ಸೆಮಿಫೈನಲ್ಸ್ ಮತ್ತು ಫೈನಲ್ ಆಟಕ್ಕೂ ಜನರ ಸಹಕಾರ ಬೇಕಿದೆ ಎಂದರು.
ಜುಲೈ 3 ರಂದು ಪೈನಲ್ ಪಂದ್ಯಕ್ಕೆ ಮುಖ್ಯ ಅತಿಥಿಗಳಾ ಶಿವಮೊಗ್ಗ ನಗರ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್. ಎನ್. ಚನ್ನಬಸಪ್ಪ. ಶಿವಮೊಗ್ಗ ವಿಭಾಗಾಧಿಕಾರಿ ಸತ್ಯನಾರಾಯಣ್, ಕಾಂಗ್ರೆಸ್ ಮುಖಂಡ ಎಂ. ಶ್ರೀಕಾಂತ್ ಆಗಮಿಸಲಿದ್ದಾರೆ.
ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷರಾದ ಎಸ್ . ಆರ್ . ವಿಶ್ವನಾಥ್ ಅಧ್ಯಕ್ಷತೆ ವಹಿಸಲಿದ್ದಾರೆಂದು ವಿವರಿಸಿದರು. ಗೋಷ್ಟಿಯಲ್ಲಿ ಸಂಸ್ಥೆಯ ಖಜಾಂಚಿ ಸೂಲಯ್ಯ, ಗೌರವ ಉಪ ಪ್ರಧಾನ ಕಾರ್ಯದರ್ಶಿ ಅರಿಫ್ ಅಹಮದ್ ಅಬಿದ್, ಹಿರಿಯ ಪುಟ್ಬಾಲ್ ನಾದನ್, ಪ್ರಚಾರ ಸಮಿತಿಯ ಕೆ.ಹರ್ಷ ಭೋವಿ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post