ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತದಾರರ ಬಹುದಿನಗಳ ಬೇಡಿಕೆ ಈಡೇರಿಕೆಗೆ ಕ್ಷಣಗಣನೆಗೆ ಮುಹೂರ್ತ ನಿಗದಿಯಾಗಿದೆ.
ಚುನಾವಣೆಗೂ ಮುನ್ನ ತಾಂತ್ರಿಕ ಕಾರಣದಿಂದ ನಿಲುಗಡೆಯಾಗಿದ್ದ ಶಿವಮೊಗ್ಗ – ಚೆನ್ನೈ ರೈಲು #Shivamogga – Chennai Train ಕ್ಷೇತ್ರದ ಜನತೆಯ ಬೇಡಿಕೆ ಮೇರೆಗೆ ಇದೇ ತಿಂಗಳ ಜುಲೈ 10ರಂದು ಸಂಚಾರ ಆರಂಭಿಸಲು ಸಜ್ಜಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ #B Y Raghavendra ತಿಳಿಸಿದ್ದಾರೆ.
Also read: ಪ್ರಧಾನಿ ಮೋದಿ ಸರ್ಕಾರದಿಂದ ಬಡವರ ಅನ್ನದ ಜೊತೆ ಆಟ | ಕಲ್ಲೂರು ಮೇಘರಾಜ್
ತಮ್ಮ ಈ ಬೇಡಿಕೆಗೆ ತಕ್ಷಣವೇ ಸ್ಪಂದಿಸಿ ಅನುಮೋದನೆ ನೀಡಿದ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಹಾಗೂ ಮಾನ್ಯ ರೈಲ್ವೇ ಖಾತೆ ರಾಜ್ಯ ಸಚಿವ ಸೋಮಣ್ಣ ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ಧನ್ಯವಾದ ತಿಳಿಸಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಪರ್ಕ ವ್ಯವಸ್ಥೆ ಮತ್ತಷ್ಟು ಸುಧಾರಣೆಗೆ ತರಲು ಸಾಕಷ್ಟು ಬೇಡಿಕೆ ಸಚಿವದ್ವಯರಲ್ಲಿ ಮಂಡಿಸಿದ್ದು ಶೀಘ್ರವಾಗಿ ಅನುಮೋದನೆ ದೊರಕುತ್ತದೆ ಎಂಬ ಆಶಾಭಾವ ಈ ಮೂಲಕ ಮೂಡಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news






















