ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹಾವೇರಿಯಲ್ಲಿ ನಡೆದ ದುರ್ಘಟನೆ ನೋಡಿ ಇಲ್ಲಿಗೆ ಬರುವ ಧೈರ್ಯ ಮಾಡೋಕೆ ಕಷ್ಟ ಆಯ್ತು ಎಂದು ನಟ ಶಿವರಾಜ ಕುಮಾರ್ #Shivarajkumar ಭಾವುಕರಾದರು.
ಹಾವೇರಿಯಲ್ಲಿ ಇತ್ತೀಚೆಗೆ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟ ಎಮ್ಮೆಹಟ್ಟಿ ಗ್ರಾಮದ ಕುಟುಂಬಸ್ಥರನ್ನು ಭೇಟಿಯಾದ ವೇಳೆ ಅವರು ಮಾತನಾಡಿದರು.
Also read: ಹೆಚ್ಚಿನ ಸಹಾಯ ಬೇಕಿದ್ದಲ್ಲಿ ನಾವಿದ್ದೇವೆ | ಅಪಘಾತದಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ಗೀತಾ ಶಿವರಾಜಕುಮಾರ್ ಭರವಸೆ
ಇದು ಮಾತಾನಾಡುವ ಸಮಯವಲ್ಲ. ಕುಟುಂಬಸ್ಥರಿಗೆ ಸಮಾಧಾನ ಮಾಡೋದು ಕಷ್ಟ. ಊರಿನ ಗ್ರಾಮಸ್ಥರು ಆ ಕುಟುಂಬದ ಜೊತೆ ನಿಂತಿದ್ದಾರೆ. ಇಲ್ಲಿಗೆ ಬಂದಾಗ ತುಂಬಾ ಬೇಜಾರು ಆಯಿತು. ಘಟನೆ ನೋಡಿ ತುಂಬಾ ದುಃಖ ಆಯ್ತು. ವಿಶೇಷ ಚೇತನ ಅರ್ಪಿತಾಗೆ ದೇವರು ಶಕ್ತಿ ಕೊಡಲಿ. ನಾವು ಕುಟುಂಬದ ಜೊತೆ ಇರುತ್ತೇವೆ ಎಂದರು.
ದುರ್ಘಟನೆ ನೋಡಿ, ಬರೋಕೆ ಧೈರ್ಯ ಮಾಡೋಕೆ ಕಷ್ಟ ಆಯ್ತು. ಒಂದು ನಿಮಿಷದಲ್ಲಿ 13 ಜನ ಸಾವನಪ್ಪಿದ್ದಾರೆ. ಸಾವಿನ ದುಃಖ ತಡೆದುಕೊಳ್ಳಲು ದೇವರು ಅವರಿಗೆ ಶಕ್ತಿ ತುಂಬಲಿ. ಘಟನೆಯಲ್ಲಿ ಮಾನಸ ಅವರನ್ನು ಕಳೆದುಕೊಂಡಿದ್ದು ತುಂಬಾ ದೊಡ್ಟ ನಷ್ಟವಾಗಿದೆ. ಊರಿನ ಗ್ರಾಮಸ್ಥರು ಆ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ. ಕುಟುಂಬಸ್ಥರ ನೆರವಿಗೆ ಬರೋಕೆ ಇಲ್ಲಿಗೆ ಬಂದಿದ್ದೇವೆ. ನಮ್ಮ ಕೈಯಲ್ಲಿ ಆದಷ್ಟು ಸಹಾಯ ಮಾಡಿದ್ದೇವೆ ಎಂದರು.
ಇದೇ ಸಂದರ್ಭ ಸಾಂತ್ವಾನ ಸಭೆಯಲ್ಲಿ ಭದ್ರಾವತಿ ಶಾಸಕರಾದ ಸಂಗಮೇಶ್ವರ್, ಜಿಲ್ಲಾಧ್ಯಕ್ಷರಾದ ಆರ್. ಪ್ರಸನ್ನಕುಮಾರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post