ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಮಾಜವನ್ನು ಪೀಡಿಸುತ್ತಿರುವ ಮಾದಕ ವ್ಯಸನದಿಂದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಿದೆ. ವ್ಯಸನವನ್ನು ತಡೆಗಟ್ಟಲು ರೋಟರಿ ಕ್ಲಬ್ ರೂಪಿಸಿರುವ ಹೊಸ ಯೋಜನೆ ಸಹಾಕಾರಿಯಾಗುತ್ತದೆ ಎಂದು ರೊ. ಪ್ರೊ. ಎ.ಎಸ್.ಚಂದ್ರಶೇಖರ್ ಅಭಿಪ್ರಾಯಪಟ್ಟರು.
ಶುಕ್ರವಾರ ರೋಟರಿ #Rotary ಮಿಡ್ ಟೌನ್ ಸಭಾಂಗಣದಲ್ಲಿ ನಡೆದ ಪದಪ್ರಧಾನ ಸಮಾರಂಭದಲ್ಲಿ ಕಾರ್ಯಕ್ರಮದ ಪದಪ್ರಧಾನ ಅಧಿಕಾರಿಯಾಗಿ ಆಗಮಿಸಿದ್ದ ಅವರು, ಮಾದಕ ವ್ಯಸನ ತಡೆ ಜಾಗೃತಿಗಾಗಿ ಕ್ಲಬ್ ನ ಹೊಸ ಯುಟ್ಯೂಬ್ ಚಾನೆಲ್ ‘ನವ್ಯ ಸಂಕಲ್ಪ’ ಕ್ಕೆ ಚಾಲನೆ ನೀಡಿ, ಈ ನಿಟ್ಟಿನಲ್ಲಿ ಕ್ಲಬ್ ರೂಪಿಸಿರುವ ಹೊಸ ಯೋಜನೆಗೆ ಶುಭಕೋರಿದರು.
ಇದೇ ಸಂದರ್ಭದಲ್ಲಿ ಕ್ಲಬ್ ನ 2023-24 ನೇ ಸಾಲಿನ ಅಧ್ಯಕ್ಷರಾದ ರೊ.ಸಿ.ರಾಜು ಅವರಿಂದ ನೂತನ ಅಧ್ಯಕ್ಷರಿಗೆ ಅಧಿಕಾರ ವರ್ಗಾವಣೆ ಮಾಡಿದರು.
ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ಇದರ 2024-25 ನೇ ಸಾಲಿನ ನೂತನ ಅಧ್ಯಕ್ಷ ರೊ.ಮುಸ್ತಾಕ್ ಅಲಿಶಾ.ಟಿ.ಎಂ ಮಾತನಾಡಿ, ಯುವ ಜನತೆಯಲ್ಲಿ ಹೆಚ್ಚುತ್ತಿರುವ ಮಾದಕ ವ್ಯಸನವನ್ನು ತಡೆಗಟ್ಟುವ ಬಗ್ಗೆ ಮಾಹಿತಿ ನೀಡಿ, ಈ ನಿಟ್ಟಿನಲ್ಲಿ ರೋಟರಿ ಕ್ಲಬ್ ವತಿಯಿಂದ ರೂಪಿಸಿರುವ ಹೊಸ ಯೋಜನೆಯು ಬಹಳ ಉಪಯುಕ್ತವಾಗಿದೆ. ಇತರೆ ಕ್ಲಬ್ ಗಳು ಹಾಗೂ ಸಾರ್ವಜನಿಕರೂ ಸಹ ರೋಟರಿ ಕ್ಲಬ್ ನೊಂದಿಗೆ ಕೈಜೋಡಿಸುವಂತೆ ಕರೆ ನೀಡಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ವಲಯ 10 ರ ಸಹಾಯಕ ಗವರ್ನರ್ ರೊ.ನಾಗರಾಜ್.ಎಸ್.ಆರ್ ರೋಟರಿಯ ಧ್ಯೇಯೋದ್ದೇಶಗಳ ಕುರಿತು ಮಾತನಾಡಿ, ಇವುಗಳನ್ನು ಸಮುದಾಯಗಳಿಗೆ ತಲುಪಿಸುವಲ್ಲಿ ಕ್ಲಬ್ ಗಳ ಪಾತ್ರದ ಬಗ್ಗೆ ವಿವರಿಸಿದರು.
Also read: ಕೃಷಿಗೆ ಆದ್ಯತೆಯಿಂದ ದೇಶದ ಸಮಗ್ರ ಅಭಿವೃದ್ಧಿ: ಸಚಿವ ಚಲುವರಾಯಸ್ವಾಮಿ
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ರೊ. ಪ್ರಕಾಶ್ ಮೂರ್ತಿ, 2023-24 ನೇ ಸಾಲಿನಲ್ಲಿ ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾದ ಕಾರ್ಯಕ್ರಮಗಳ ಪಕ್ಷಿನೋಟ ಪ್ರಸ್ತುತ ಪಡಿಸಿದರು. ನೂತನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ರೊ.ಶ್ರೀಕಾಂತ್.ಎ.ವಿ, 2024-25 ನೇ ಸಾಲಿನಲ್ಲಿ ಹಮ್ಮಿಕೊಳ್ಳಲ್ಲಿರುವ ಕಾರ್ಯಕ್ರಮಗಳ ಮಾಹಿತಿ ನೀಡಿದರು.
ವಲಯ ಸೇನಾನಿ ರೊ.ಮಂಜುಳಾ ರಾಜು ಕ್ಲಬ್ ನ ಮೊದಲ ಅಧ್ಯಕ್ಷರಾಗಿದ್ದ ತಮ್ಮ ಅನುಭವವನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಪರಿನೀಟ್ ಅಕಾಡೆಮಿ, ಶಿವಮೊಗ್ಗದ ಸಹಯೋಗ ಹಾಗೂ ರೊ. ಆನಂದ ಮೂರ್ತಿ, ರೊ. ಹೆಚ್.ಎಲ್.ರವಿ ಹಾಗೂ ರೊ. ಮಂಜುಳಾ ಸಿ.ರಾಜು ರವರ ಸಹಕಾರದೊಂದಿಗೆ ಸರ್ಕಾರಿ ಹಾಗೂ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಆಯ್ದ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ನೀಟ್ ಪರೀಕ್ಷಾ ತಯಾರಿ ಪುಸ್ತಕಗಳನ್ನು ವಿತರಿಸಲಾಯಿತು.
ಜೊತೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಐದು ಜನ ಶಾಲಾ ಮಕ್ಕಳಿಗೆ ಉಚಿತವಾಗಿ ಬ್ಯಾಗ್, ಪುಸ್ತಕ ಹಾಗೂ ಧನಸಹಾಯವನ್ನು ಸಹ ನೀಡಲಾಯಿತು.
ರೋಟರಿಯ ಹೊಸ ಯೋಜನೆಗೆ ಇತರ ಸಂಘ ಸಂಸ್ಥೆಗಳ ಪ್ರಮುಖರು, ವಾಣಿಜ್ಯೋದ್ಯಮಿಗಳು, ಶಿಕ್ಷಣ ಕ್ಷೇತ್ರದ ಹಲವರು ಆಗಮಿಸಿ ನೂತನ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಕಾರ್ಯಕಾರಿ ಮಂಡಳಿಗೆ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಶಿವಮೊಗ್ಗದ ಇತರ ಕ್ಲಬ್ ಗಳ ರೊಟೇರಿಯನ್ಸ್ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post