ಕಲ್ಪ ಮೀಡಿಯಾ ಹೌಸ್ | ಉಪ್ಪಿನಂಗಡಿ |
ಭಾರೀ ಮಳೆ ಸೃಷ್ಠಿಸುತ್ತಿರುವ ಅವಾಂತರಗಳ ನಡುವೆಯೇ ಆನೆಯೊಂದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಅದರ ಮೃತದೇಹ ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಕುಮಾರಧಾರ ನದಿಯಲ್ಲಿ #Kumaradhara river of Kukke Subrahmanya ತೇಲಿ ಬಂದಿದೆ ಎಂದು ವರದಿಯಾಗಿದೆ.
ನಿನ್ನೆ ರಾತ್ರಿ ಸುಬ್ರಹ್ಮಣ್ಯದ ಕುಮಾರಧಾರಾ ನದಿಯಲ್ಲಿ ಮೃತದೇಹ ತೇಲಿಬಂದಿದೆ ಎಂದು ಹೇಳಲಾಗಿದ್ದು, ಇದು ತೇಲಿಕೊಂಡು ಉಪ್ಪಿನಂಗಡಿ ಭಾಗಕ್ಕೆ ತೇಲುತ್ತಿದೆ ಎಂದು ವರದಿಯಾಗಿದೆ.
Also read: ಜುಲೈ 17ರ ನಾಳೆ ಕೂಡಲಿ ಅಕ್ಷೋಭ್ಯ ಮಠದ ಶ್ರೀಗಳಿಂದ ತಪ್ತ ಮುದ್ರಾಧಾರಣೆ
ಸುಬ್ರಹ್ಮಣ್ಯ ಸಮೀಪ ಹರಿಯುವ ಕುಮಾರಧಾರಾ ನದಿಯಲ್ಲಿ ನಿನ್ನೆ ತಡ ರಾತ್ರಿ ಆನೆಯ ಮೃತದೇಹ ಪತ್ತೆಯಾಗಿದ್ದು, ಕಾಡಿನಲ್ಲಿದ್ದ ಆನೆಯು ನದಿಯ ಪ್ರವಾಹಕ್ಕೆ ಸಿಲುಕಿ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.
ನಿನ್ನೆ ರಾತ್ರಿ ಪ್ರವಾಹ ನೀರಿನಲ್ಲಿ ಆನೆ ಮೃತದೇಹ ಕೊಚ್ಚಿ ಕೊಂಡು ಬಂದಿದೆ, ಇದೀಗ ನದಿ ನೀರಿನಲ್ಲಿ ಕೊಚ್ಚಿ ಹೋಗಿರುವ ಆನೆಯ ಮೃತದೇಹಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಹುಡುಕಾಟ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















