ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಶ್ರೀಮನ್ವಾಧ್ವ ಪರಂಪರೆಯ ವಿವಿಧ ಸಂಸ್ಥಾನದ ಮಠಾಧಿಪತಿಗಳು ಬೆಂಗಳೂರಿನ ವಿವಿಧೆಡೆ ಭಕ್ತ ವಲಯದ ದೇಹ ಶುದ್ಧಿಗೆ ಜೂನ್ 17ರಂದು ತಪ್ತ ಮುದ್ರಾಧಾರಣೆ ಮಾಡಲಿದ್ದಾರೆ.
ಆಶಾಢ ಏಕಾದಶಿ (ಪ್ರಥಮ ಏಕಾದಶಿ) ನಿಮಿತ್ತ ಈ ಬಾರಿಯೂ ಹಲವೆಡೆ ಮಾಧ್ವ ಸಮುದಾಯದ ಲಕ್ಷಾಂತರ ಭಕ್ತರು ಮುದ್ರೆ ಪಡೆದು ಧನ್ಯತೆ ಮೆರೆಯಲಿದ್ದಾರೆ. ಎಲ್ಲಿ ಯಾವ ಯತಿಗಳು ಮುದ್ರೆ ನೀಡಲಿದ್ದಾರೆಂಬ ಮಾಹಿತಿ ಇಲ್ಲಿದೆ.
ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ
ಸೋಸಲೆ ಶ್ರೀ ವ್ಯಾಸರಾಜ ಮಠದ ಶ್ರೀ ವಿದ್ಯಾಶ್ರೀಶ ತೀರ್ಥರು ಬೆಂಗಳೂರಿನ ಬಸವನಗುಡಿ ಗಾಂಧಿ ಬಜಾರಿನ ಸೋಸಲೆ ಮಠದಲ್ಲಿ (ಬೆಣ್ಣೆ ಗೋವಿಂದಪ್ಪ ಛತ್ರ) ಬೆಳಗ್ಗೆ 8.30ರಿದ ಮಧ್ಯಾಹ್ನ 1, ಮಧ್ಯಾಹ್ನ 3ರಿಂದ ರಾತ್ರಿ 9ವರೆಗೆ ಮುದ್ರಾಧಾರಣೆಯನ್ನು ಕೊಡಲಿದ್ದಾರೆ. ಹಿರಿಯ ನಾಗರಿಕರಿಗೆ ಮತ್ತು ಆರೋಗ್ಯ ಸಮಸ್ಯೆ ಇರುವವರಿಗೆ ಗೇಟ್ 2 ರಲ್ಲಿ ಪ್ರತ್ಯೇಕ ವ್ಯವಸ್ಥೆ ಇದೆ. ಈ ಸಂದರ್ಭ 15 ವಿದ್ವಾಂಸರಿಂದ ಅಖಂಡ ಭಾಗವತ ಪ್ರವಚನ , ದೇವರನಾಮ ಗಾಯನ, ಹೋಮ ಮತ್ತಿತರ ಕಾರ್ಯಗಳು ನೆರವೇರಲಿದೆ. ವಿವರಗಳಿಗೆ ಸಂಪರ್ಕ: 90603 02210.
1008 ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ
ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಬೆಂಗಳೂರಿನ ಬಸವನಗುಡಿಯ ಶ್ರೀ ಸತ್ಯಪ್ರಮೋದ ಕಲ್ಯಾಣ ಮಂದಿರದ ಆವರಣದಲ್ಲಿ ಜು. 17ರ ಬೆಳಗ್ಗೆ 5ರಿಂದ ಮುದ್ರಾಧಾರಣೆ ಪ್ರಕ್ರಿಯೆಗೆ ಚಾಲನೆ ನೀಡಲಿದ್ದಾರೆ.
ಮಧ್ಯಾಹ್ನ 1ರಿಂದ 4 ಗಂಟೆವರೆಗೆ ಸಂಸ್ಥಾನ ಪೂಜೆ ನೆರವೇರಿಸಲಿದ್ದು, ಸಂಜೆ 5ರಿಂದ ರಾತ್ರಿ 12ರವರೆಗೆ ಮುದ್ರಾಪ್ರದಾನ ನಡೆಯಲಿದೆ. ಅಂಗವಿಕಲರಿಗೆ, ವೃದ್ಧರಿಗೆ, ಚಿಕ್ಕಮಗುವಿನ ಮಾತೆಯರಿಗೆ ಪ್ರತ್ಯೇಕ ಪ್ರವೇಶವಿರಲಿದೆ. ಆನ್ ಲೈನ್ ಮೂಲಕ ಈಗಾಗಲೇ 10 ಸಾವಿರ ಭಕ್ತರಿಗೆ ಸಮಯ ನಿಗದಿಯಾಗಿದೆ. ಎಲ್ಲ ಭಕ್ತರಿಗೂ ಸ್ವಾಮೀಜಿ ಮುದ್ರೆ ನೀಡಲಿರುವುದರಿಂದ ಭಕ್ತರು ಸಹಕರಿಸಲು ಶ್ರೀಮಠ ವಿನಂತಿಸಿದೆ. ಇದೇ ಸಂದರ್ಭ 12 ವಿದ್ವಾಂಸರಿಂದ ದಿನಪೂರ್ಣ ಅಖಂಡ ಭಾಗವತ ಪ್ರವಚನವೂ ನೆರವೇರಲಿದೆ. ಹೆಚ್ಚಿನ ಮಾಹಿತಿಗೆ ಕರೆ ಮಾಡಿ: 76763 83176.
ಮುಳಬಾಗಿಲು ಶ್ರೀಪಾದರಾಜ ಮಠದ ಶ್ರೀ ಸುಜಯನಿಧಿ ತೀರ್ಥ ಸ್ವಾಮೀಜಿ
ಬೆಂಗಳೂರಿನ ಚಾಮರಾಜಪೇಟೆ ರಾಘವೇಂದ್ರ ಕಾಲನಿ ಮಠದ ಆವರಣದಲ್ಲಿ ಬೆಳಗ್ಗೆ 7.30ರಿಂದ ಮಧ್ಯಾಹ್ನ 2.30ರವರೆಗೆ, 2.30ರಿಂದ 3ರವರೆಗೆ ಚಾಮರಾಜಪೇಟೆಯ ಶ್ರೀ ಮನ್ ಮಾಧ್ವ ಸಂಘದಲ್ಲಿ, 4ರಿಂದ 4.30ಕ್ಕೆ ಎಚ್‌ಎಎಲ್ ಬಡಾವಣೆ ರಾಯರ ಮಠದಲ್ಲಿ, ಸಂಜೆ 5.30ರಿಂದ 6.30ರ ವರೆಗೆ ಹೊಸೂರು ರಾಯರ ಮಠದಲ್ಲಿ ಮುದ್ರಾಧಾರಣೆ ಮಾಡಲಿದ್ದಾರೆ. ಹೆಚ್ಚಿನ ಮಾಹಿತಿಗೆ ಸಂಪರ್ಕ 080 26673032.
ಅದಮಾರು ಸಂಸ್ಥಾನ
ಉಡುಪಿ ನರಹರಿ ತೀರ್ಥರ ಅದಮಾರು ಸಂಸ್ಥಾನದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಬೆಳಗ್ಗೆ 6ರಿಂದ 8ರವರೆಗೆ ಬೆಂಗಳೂರಿನ ಬಸವನಗುಡಿ ಮುಖ್ಯರಸ್ತೆಯ ಶ್ರೀ ಗೋವರ್ಧನಗಿರಿ ಕ್ಷೇತ್ರದಲ್ಲಿ ಪುತ್ತಿಗೆ ಮಠದಲ್ಲಿ ಮುದ್ರಾಧಾರಣೆ ಮಾಡಲಿದ್ದಾರೆ. ವಿವರಗಳಿಗೆ ಸಂಪರ್ಕ: 96110 39332.
ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರು
ಬೆಳಗ್ಗೆ 6ರಿಂದ ಬೆಳಗ್ಗೆ 11ರವರೆಗೆ ಬೆಂಗಳೂರಿನ ಕತ್ತರಿಗುಪ್ಪೆ ಮುಖ್ಯ ರಸ್ತೆಯ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ, ಮಧ್ಯಾಹ್ನ 3ರಿಂದ ಚೆನ್ನೈನ ನಂಗಾನಲ್ಲೂರು ರಾಯರ ಮಠದಲ್ಲಿ, ಸಂಜೆ 5ರಿಂದ ಚೆನ್ನೈನ ಟಿ.ನಗರ ರಾಯರ ಮಠದಲ್ಲಿ ಮುದ್ರಾಧಾರಣೆ ಮಾಡಲಿದ್ದಾರೆ. ವಿವರಗಳಿಗೆ ಸಂಪರ್ಕ: 94490 82198.
ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಮಂತ್ರಾಲಯ ಮಹಾ ಮಠದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಬೆಂಗಳೂರಿನ ಜಯನಗರ 5ನೇ ಬ್ಲಾಕ್ ರಾಯರ ಮಠದಲ್ಲಿ ಬೆಳಗ್ಗೆ 6ಕ್ಕೆ ಸಂಸ್ಥಾನ ಪೂಜೆ ಮತ್ತು ಸುದರ್ಶನ ಹೋಮ ನೆರವೇರಿಸಲಿದ್ದಾರೆ. ಬೆಳಗ್ಗೆ 7. 30ರಿಂದ ದಿನಪೂರ್ಣ ಮುದ್ರಾಧಾರಣೆ ಮಾಡಲಿದ್ದಾರೆ. 12 ಜನ ವಿದ್ವಾಂಸರಿಂದ ಭಾಗವತ ಉಪನ್ಯಾಸ ನೆರವೇರಲಿದೆ. ವಿವರಗಳಿಗೆ ಕರೆ ಮಾಡಿ: 94488 47586.
ಶ್ರೀ ಸುವಿದ್ಯೇಂದ್ರ ತೀರ್ಥ ಸ್ವಾಮೀಜಿ
ಭುವನಗಿರಿ ಆಶ್ರಮದ ಶ್ರೀ ಸುವಿದ್ಯೇಂದ್ರ ತೀರ್ಥ ಸ್ವಾಮೀಜಿ ಬೆಳಗ್ಗೆ 5ರಿಂದ ಬೆಂಗಳೂರಿನ ಚನ್ನಮ್ಮನಕೆರೆ ಅಚ್ಚುಕಟ್ಟು ಭುವನಗಿರಿ ಆಶ್ರಮ, 6 ಕ್ಕೆ ಕೆಂಗೇರಿ ಉಪನಗರ ರಾಯರ ಮಠ, 7ಕ್ಕೆ ಆರ್‌ಆರ್‌ನಗರ ರಾಯರ ಮಠ, 8 ಕ್ಕೆ ದೇವಗಿರಿ ರಾಯರಮಠ, 9ಕ್ಕೆ ದೇವಗಿರಿ ರಾಯರ ಮಠ, 10ಕ್ಕೆ ಹೊಸಕೆರೆಹಳ್ಳಿ ರಾಯರ ಮಠ, 11ಕ್ಕೆ ಪೂರ್ಣಪ್ರಜ್ಞ ಬಡಾವಣೆ ರಾಯರ ಮಠ, 12. 30ಕ್ಕೆ ತುರಹಳ್ಳಿ ರಾಯರ ಮಠ, ಸಣಜೆ 5ರಿಂದ 7ರವರೆಗೆ ಬಸವನಗುಡಿ ಪುತ್ತಿಗೆ ಮಠದಲ್ಲಿ ಮುದ್ರಾಧಾರಣೆ ಮಾಡಲಿದ್ದಾರೆ. ಸಂಪರ್ಕ: 97414 54816
ತಂಬಿಹಳ್ಳಿ ಮಾಧವತೀರ್ಥ ಮಠ
ಮಠದ ಕಿರಿಯ ಶ್ರೀವಿದ್ಯಾವಲ್ಲಭ ಮಾಧವ ತೀರ್ಥರು ಬೆಳಗ್ಗೆ 9.30ಕ್ಕೆ ಬೆಂಗಳೂರಿನ ಯಲಹಂಕ ರಾಯರ ಮಠ, 10.30 ಆರ್.ಟಿ.ನಗರ ರಾಯರ ಮಠ, 12.30 ಕುಮಾರಸ್ವಾಮಿ ಬಡಾವಣೆ ರಾಯರ ಮಠ, 1.30 ಇಸ್ರೋ ಬಡಾವಣೆ ರಾಯರ ಮಠ, 3 ಕ್ಕೆ ಐಟಿಐ ಬಡಾವಣೆ ರಾಯರ ಮಠ, ತಪ್ತ ಮುದ್ರಾಧಾರಣೆ ಮಾಡಲಿದ್ದಾರೆ. – ಸಂಪರ್ಕ 91418 26180.
ಸೋದೆ ಮಠ
ಶ್ರೀವಿಶ್ವವಲ್ಲಭ ತೀರ್ಥರು ಬೆಂಗಳೂರಿನ ಬಸವನಗುಡಿ ಶಂಕರಪುರಂನ ಪಂಪಮಹಾಕವಿ ರಸ್ತೆಯಲ್ಲಿರುವ ರಾಯರಾಯ ಕಲ್ಯಾಣ ಮಂದಿರ ಆವರಣದ ಕೃಷ್ಣ ವಾದಿರಾಜ ಮಂದಿರದಲ್ಲಿ ಬೆಳಗ್ಗೆ 7ರಿಂದ 1ರ ವರೆಗೆ ಮುದ್ರಾಧಾರಣೆ ನೆರವೇರಿಸುವರು. ವಿವರಗಳಿಗೆ ಕರೆ ಮಾಡಿ: 94499 74554
ಭೀಮನಕಟ್ಟೆ ಶ್ರೀ ರಘುವರೇಂದ್ರ ತೀರ್ಥರು
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಭೀಮನಕಟ್ಟೆ ಮಠದ ಶ್ರೀ ರಘುವರೇಂದ್ರ ತೀರ್ಥ ಸ್ವಾಮೀಜಿ ತುಮಕೂರಿನ ಶ್ರೀ ಕೃಷ್ಣ ಮಂದಿರದಲ್ಲಿ ಬೆಳಗ್ಗೆ 7ರಿಂದ 9 ವರೆಗೆ ಮುದ್ರೆ ನೀಡಲಿದ್ದಾರೆ. ಬೆಳಗ್ಗೆ 11 ರಿಂದ 12ರ ವರೆಗೆ ಬೆಂಗಳೂರಿನ ಕೆಂಗೇರಿ ಕೃಷ್ಣಮಠ, 1ರಿಂದ 2 ರವರೆಗೆ ಮತ್ತೀಕೆರೆ ರಾಯರ ಮಠ, 3ರಿಂದ 7 ವಿದ್ಯಾರಣ್ಯಪುರ ಮುಖ್ಯರಸ್ತೆ ದೊಡ್ಡಬೊಮ್ಮಸಂದ್ರದ ಭೀಮನಕಟ್ಟೆ ಮಠದಲ್ಲಿ ಮುದ್ರಾ ಧಾರಣೆ ಮಾಡಲಿದ್ದಾರೆ. ಮಾಹಿತಿಗಾಗಿ 83348 27523ಗೆ ಕರೆ ಮಾಡಿ.
17ರಂದು ಕೂಡಲಿ ಶ್ರೀಗಳಿಂದ ತಪ್ತ ಮುದ್ರಾಧಾರಣೆ
ಕೂಡಲಿ ಆರ್ಯ ಅಕೋಭ್ಯತೀರ್ಥ ಮಹಾ ಸಂಸ್ಥಾನದ ಶ್ರೀ ರಘುವಿಜಯ ತೀರ್ಥ ಸ್ವಾಮೀಜಿ ಶಿವಮೊಗ್ಗದ ಬಿ.ಬಿ. ರಸ್ತೆಯ ಕೂಡಲಿ ಮಠದಲ್ಲಿ ಜು. 17ರ ಬೆಳಗ್ಗೆ 7.30ರಿಂದ ಮಧ್ಯಾಹ್ನ 1ರವರೆಗೆ ಭಕ್ತರಿಗೆ ತಪ್ತ ಮುದ್ರಾ ಧಾರಣೆ ಮಾಡಲಿದ್ದಾರೆ.
ಮಧ್ಯಾಹ್ನ 1ರಿಂದ 3ರ ವರೆಗೆ ಶ್ರೀಗಳು ಶ್ರೀ ವೈಕುಂಠ ರಾಮದೇವರ ಸಂಸ್ಥಾನ ಪೂಜೆ ನೆರವೇರಿಸಿ ನಂತರ ದಿನಪೂರ್ತಿ ಮುದ್ರಾಧಾರಣೆ ನಡೆಸಲಿದ್ದಾರೆ. ಆಶಾಢ ಏಕಾದಶಿ (ಪ್ರಥಮ ಏಕಾದಶಿ) ನಿಮಿತ್ತ ವಾರ್ಷಿಕ ವಿಧಿ ವಿಧಾನದಂತೆ ಈ ಬಾರಿಯೂ ಮಾಧ್ವ ಸಮುದಾಯದವರು ನಗರದಲ್ಲಿ ಮುದ್ರೆ ಸ್ವೀಕಾರ ಮಾಡಲಿರುವುದು ವಿಶೇಷ. ವಿವರಗಳಿಗೆ ಸಂಪರ್ಕ ಸಂಖ್ಯೆ: 99006 93107
ಹುಬ್ಬಳ್ಳಿಯಲ್ಲಿ ಭಂಡಾರಕೇರಿ ಶ್ರೀಗಳಿಂದ ತಪ್ತ ಮುದ್ರಾಧಾರಣೆ
ಆಶಾಢ ಏಕಾದಶಿ (ಪ್ರಥಮ ಏಕಾದಶಿ) ನಿಮಿತ್ತ ವಾರ್ಷಿಕ ಸಂಪ್ರದಾಯದಂತೆ ಉಡುಪಿ ಶ್ರೀ ಅಚ್ಯುತಪ್ರೇಕ್ಷ ಸಂಸ್ಥಾನ ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಅವರು ಹುಬ್ಬಳ್ಳಿಯ ದೇಶಪಾಂಡೆ ನಗರದ ಶ್ರೀ ಕೃಷ್ಣ ಕಲ್ಯಾಣ ಮಂದಿರದಲ್ಲಿ ಜು. 17ರ ಬೆಳಗ್ಗೆ 9ರಿಂದ 10ರವರೆಗೆ ಮಾಧ್ವ ಸಮುದಾಯದ ಭಕ್ತರಿಗೆ ತಪ್ತ ಮುದ್ರಾ ಧಾರಣೆ ಮಾಡಲಿದ್ದಾರೆ. ಇದಕ್ಕೂ ಮುನ್ನ ಅವರು ಬೆಳಗ್ಗೆ 7ಕ್ಕೆ ಸಂಸ್ಥಾನ ಪೂಜೆ ನೆರವೇರಿಸಲಿದ್ದಾರೆ.
ಧಾರವಾಡ
ಧಾರವಾಡದ ಕಲ್ಯಾಣ ನಗರದಲ್ಲಿರುವ ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಮಹಾಸಭಾದ ಶ್ರೀ ಕೃಷ್ಣ ಗಣಪತಿ ರಾಘವೇಂದ್ರ ಮಂದಿರದಲ್ಲಿ ಬೆಳಗ್ಗೆ 10.30ರಿಂದ 11.30ರವರೆಗೆ ಶ್ರೀಗಳು ತಪ್ತ ಮುದ್ರಾ ಧಾರಣೆ ಪ್ರದಾನ ಮಾಡಲಿದ್ದಾರೆ. ಮಾಹಿತಿಗೆ ಸಂಪರ್ಕ ಸಂಖ್ಯೆ: 81234 39135.
ಬೆಳಗಾವಿ
ಬೆಳಗಾವಿ ನಗರದ ಆರ್’ಪಿಡಿ ಕಾಲೇಜು ಎದುರಿನ ಪೇಜಾವರ ಮಠದ ಶ್ರೀ ಕೃಷ್ಣ ಮಂದಿರದಲ್ಲಿ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಮಧ್ಯಾಹ್ನ 2ರಿಂದ 4ರವರೆಗೆ ಭಕ್ತರಿಗೆ ತಪ್ತ ಮುದ್ರಾಧಾರಣೆ ಮಾಡಲಿದ್ದಾರೆ. ವಿವರಗಳಿಗೆ ಸಂಪರ್ಕ ಸಂಖ್ಯೆ: 81234 39135.
ಮೈಸೂರಿನಲ್ಲಿ ಪಲಿಮಾರು ಶ್ರೀ ಸಾರಥ್ಯ
ಮೈಸೂರು: ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉಡುಪಿ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಜೂ. 17ರಂದು ಆಶಾಢ ಏಕಾದಶಿ (ಪ್ರಥಮ ಏಕಾದಶಿ) ಅಂಗವಾಗಿ ವಾರ್ಷಿಕ ವಿಧಿ ವಿಧಾನದಂತೆ ನಗರದಲ್ಲಿ ಭಕ್ತರಿಗೆ ತಪ್ತ ಮುದ್ರಾಧಾರಣೆ ಮಾಡಲಿದ್ದಾರೆ.
ನಾರಾಯಣ ಶಾಸ್ತ್ರಿ ರಸ್ತೆಯ ಉಡುಪಿ ಕೃಷ್ಣಮಂದಿರದಲ್ಲಿ ಬೆಳಗ್ಗೆ 9ರಿಂದ 1030, ಸರಸ್ವತಿಪುರಂನ ಸಾಹುಕಾರ್ ಚನ್ನಯ್ಯ ರಸ್ತೆಯ ಶ್ರೀ ಕೃಷ್ಣಧಾಮದಲ್ಲಿ ಬೆಳಗ್ಗೆ 11ರಿಂದ ಸಂಜೆ 4ರವರೆಗೆ, ಕೆ.ಆರ್. ನಗರದ ಕೃಷ್ಣಮಂದಿರದಲ್ಲಿ ಸಂಜೆ 5ರಿಂದ 6ರವರೆಗೆ, ಮೈಸೂರಿನ ವಿಠಲಧಾಮದಲ್ಲಿ ಸಂಜೆ 7ರಿಂದ 8ರವರೆಗೆ ಮುದ್ರಾಧಾರಣೆ ನೆರವೇರಲಿದೆ. ಮಾಧ್ವ ಸಮುದಾಯದ ಭಕ್ತರು ಭಾಗವಹಿಸಬಹುದು. ವಿವರಗಳಿಗೆ 98456 56708 ಸಂಪರ್ಕಿಸಬಹುದು ಎಂದು ಪಲಿಮಾರು ಮಠದ ಪ್ರಕಟಣೆ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post