ಕಲ್ಪ ಮೀಡಿಯಾ ಹೌಸ್ | ಕೊಡಗು |
ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ ನಡೆದ 2ನೇ ಹಾಕಿ ಇಂಡಿಯಾ ಜೂನಿಯರ್ ಮೆನ್ಸ್ ಸೌತ್ ಝೋನ್ ಚಾಂಪಿಯನ್ ಶಿಪ್’ನಲ್ಲಿ ಜಯಗಳಿಸಿದ ಕರ್ನಾಟಕ ತಂಡದಲ್ಲಿ ಏಳು ಆಟಗಾರರು ಕೊಡಗಿನವರಾಗಿದ್ದಾರೆ.
ಆಂಧ್ರಪ್ರದೇಶದ ಕಡಪದಲ್ಲಿ ಇತ್ತೀಚೆಗೆ ಎರಡನೇ ಹಾಕಿ ಇಂಡಿಯಾ ಜೂನಿಯರ್ ಮೆನ್ಸ್ ಸೌತ್ ಜೋನ್ ಚಾಂಪಿಯನ್ ಶಿಪ್’ನಲ್ಲಿ ಕರ್ನಾಟಕ ತಂಡ ತಮಿಳುನಾಡು ತಂಡದ ವಿರುದ್ಧ 4-2 ಗೋಲುಗಳಿಂದ ಫೈನಲ್ ಪಂದ್ಯಾಟದಲ್ಲಿ ಜಯಗಳಿಸಿ ಚಾಂಪಿಯನ್ ಶಿಪ್ ಪಟ್ಟವನ್ನು ಪಡೆದುಕೊಂಡಿದೆ.
Also read: ಭದ್ರಾ, ಲಿಂಗನಮಕ್ಕಿ ಡ್ಯಾಂಗೆ ಒಂದೇ ದಿನ ಹರಿದುಬಂದ ನೀರೆಷ್ಟು? ಎಷ್ಟು ಟಿಎಂಸಿ ಸಂಗ್ರಹವಾಗಿದೆ?
ವಿಶೇಷವೆಂದರೆ ಕರ್ನಾಟಕ ತಂಡದಲ್ಲಿ ಏಳು ಆಟಗಾರರು ಕೊಡಗಿನವರಾಗಿದ್ದು, ಜಿಲ್ಲೆಯ ಎಲ್ಲೆಡೆಯಿಂದ ಈ ಸಾಧಕರಿಗೆ ಅಪಾರ ಪ್ರಶಂಶೆ ಹಾಗೂ ಅಭಿನಂದನೆ ವ್ಯಕ್ತವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post