ಜಾಂಗ್-ಸಂಗ್ National Defence Commission of North Korea ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಸಂಸ್ಥೆಯು ಉತ್ತರ ಕೊರಿಯಾದ ಮಿಲಿಟರಿ ವಿಭಾಗಗಳನ್ನು ನಿಯಂತ್ರಿಸುವ ಮತ್ತು ಮಿಲಿಟರಿಯ ಮೇಲೆ ಸಂಪೂರ್ಣ ಹಿಡಿತ ಹೊಂದಿರುವ ಸಂಸ್ಥೆ ಮಿಲಿಟರಿ ವ್ಯವಸ್ಥೆಯನ್ನೇ ಹಾಸು ಹೊದ್ದು ಮಲಗಿರುವ ಉತ್ತರ ಕೊರಿಯಾದ ನೂತನ ಅಧ್ಯಕ್ಷ ಕಿಮ್-ಜಾಂಗ್-ಉನ್ NDC of North Koreaದ ಅಧ್ಯಕ್ಷ ಕೂಡ ಆದ. ಆದರೆ ಅದೇ ಸಂಸ್ಥೆಯಲ್ಲಿ ಹಲವಾರು ವರ್ಷಗಳಿಂದ ಇದ್ದ ತನ್ನ ಮಾವ ಅಂದರೆ ‘ಕಿಮ್-ಇಲ್-ಸಂಗ್’ ಅಂದರೆ ದೇಶದ ಮೊದಲ ಸರ್ವಾಧಿಕಾರಿಯ ಮಗಳ ಗಂಡ ‘ಜಾಂಗ್-ಸಂಗ್-ತೇಕ್’ ಸಾಕಷ್ಟು ಪ್ರಭಾವ ಹೊಂದಿದ್ದ ವ್ಯಕ್ತಿಯಾಗಿದ್ದರು.
ತನ್ನ ಮಾವನಿಂದಲೇ ಮುಂದೊಮ್ಮೆ ತನಗೆ ತನ್ನ ಅಧಿಕಾರಕ್ಕೆ ಸಂಚಕಾರ ಬರಬಹುದೆಂಬ ಯೋಚನೆ ಬರುತ್ತಲೇ ತನ್ನ ಮಾವನನ್ನು ತನ್ನ ದಾರಿಯಿಂದ ತೊಡೆದು ಹಾಕುವ ತೀರ್ಮಾನ ಮಾಡಿದ್ದ ಕಿಮ್-ಜಾಂಗ್-ಉನ್. ಅದರ ಮೊದಲ ಭಾಗವಾಗಿ 2012 ನವೆಂಬರ್‌ನಲ್ಲಿ ವರ್ಕಿಂಗ್ ಪಾರ್ಟಿ ಆಪ್ ಕೊರಿಯಾ ಸೆಂಟ್ರಲ್ ಕಮಿಟಿಯ ಪಾಲಿಟ್‌ಬ್ಯೂರೋ ಮೂಲಕ ‘ಸ್ಟೇಟ್ ಫಿಸಿಕಲ್ ಅಂಡ್ ಸ್ಪೋರ್ಟ್ ಗೈಡೆನ್‌ಸ್ ಕಮಿಷನ್’ ಸ್ಥಾಪಿಸಿ ಅದರ ಮೊದಲ ಅಧ್ಯಕ್ಷನನ್ನಾಗಿ ‘ಜಾಂಗ್-ಸಂಗ್-ತೇಕ್’ರನ್ನು ನೇಮಿಸಲಾಯಿತು. ಇರುವ ಅಧಿಕಾರದ ಜೊತೆ ಮತ್ತೊಂದು ಸಂಸ್ಥೆಯ ಹೊಣೆಗಾರಿಕೆ ಹೊರಿಸಿದ್ದು ಮೇಲ್ನೋಟಕ್ಕೆ ಬಡ್ತಿಯಂತೆ ಕಂಡರೂ ಕಿಮ್‌ನ ಉದ್ದೇಶ ಬೇರೆಯದ್ದೇ ಆಗಿತ್ತು.
ಸಾಧ್ಯವಾದಷ್ಟು ಜಾಂಗ್ ತನ್ನನ್ನು ತಾನು NDC of North Korea ದಲ್ಲಿ ತೊಡಗಿಸಿಕೊಳ್ಳದಂತೆ ಮಾಡಿ ಆ ಮೂಲಕ ಆತ ಮಿಲಟರಿಯ ಮೇಲೆ ಹೊಂದಿರುವ ಹಿಡಿತವನ್ನು ಸಡಿಲಗೊಳಿಸುವುದು ಅವನ ಉದ್ದೇಶವಾಗಿತ್ತು. ಇದರ ಜೊತೆ-ಜೊತೆಗೆ ಮಿಲಿಟರಿಯ ಸುಪರ್ದಿಯಲ್ಲಿದ್ದ ಮೀನುಗಾರಿಕಾ ಉದ್ದಿಮೆಗಳನ್ನು ಮಿಲಿಟರಿಯಿಂದ ಭಾಗಶಃ ಹಿಂಪಡೆಯಲು ಕಿಮ್ ಆದೇಶಿಸಿದ್ದ, ಆದರೆ ಜಾಂಗ್‌ಗೆ ನಿಷ್ಠರಾಗಿದ್ದ ಹಲವು ಮಿಲಿಟರಿ ಪಡೆಗಳು ಈ ವರ್ಗಾವಣೆಯನ್ನು ವಿರೋಧಿಸಿದ್ದವು.
Discussion about this post