ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ/ದಕ್ಷಿಣ ಕನ್ನಡ |
ಈಗಾಗಲೇ ಮಳೆಯಿತ್ತು ತತ್ತರಿಸಿ ಹೋಗಿರುವ ಕರಾವಳಿ ಹಾಗೂ ಮಲೆನಾಡಿನ 5 ಜಿಲ್ಲೆಗಳಲ್ಲಿ ಮತ್ತೆ 2 ದಿನ ರೆಡ್ ಅಲರ್ಟ್ #Red alert ಘೋಷಣೆ ಮಾಡಲಾಗಿದೆ.
ಈ ಕುರಿತಂತೆ ವರದಿ ಬಿಡುಗಡೆ ಮಾಡಿರುವ ಹವಾಮಾನ ಇಲಾಖೆ, ಜುಲೈ 19ರ ಇಂದು ಹಾಗೂ ಜುಲೈ 20ರ ನಾಳೆ ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿದ್ದು, ಅತಿಯಾದ ಮಳೆ ಮುಂದುವರೆಯಲಿದೆ ಎಂದಿದೆ.
ಇನ್ನು, ಈ ಐದು ಜಿಲ್ಲೆಗಳಲ್ಲಿ ಜುಲೈ 21ರಂದು ಆರೆಂಜ್ ಹಾಗೂ 22-23ರಂದು ಯೆಲ್ಲೋ ಅಲರ್ಟ್ ಘೋಷಿಸಿದ್ದು, ಭಾರೀ ಮಳೆಯಾಗಲಿದೆ ಎಂದು ವರದಿ ಮಾಡಿದೆ.
ಇದರ ಹೊರತಾಗಿ ಬೆಳಗಾವಿ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಜುಲೈ 23ರವರೆಗೂ, ಬೀದರ್ ಹಾಗೂ ಕಲಬುರಗಿ ಜಿಲ್ಲೆಯಲ್ಲಿ ಇಂದು, ಧಾರವಾಡ, ಹಾವೇರಿ, ಹಾಸನ ಜಿಲ್ಲೆಗಳಲ್ಲಿ ಜುಲೈ 22, ಕೊಡಗು ಜಿಲ್ಲೆಯಲ್ಲಿ ಇಂದು ಹಾಗೂ ನಾಳೆ ಆರೆಂಜ್, ಜುಲೈ 23ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















