ಕಲ್ಪ ಮೀಡಿಯಾ ಹೌಸ್ | ಉಡುಪಿ |
ಶ್ರೀಕೃಷ್ಣ ಜನ್ಮಾಷ್ಟಮಿ, #Shri Krishna Janmashtami ಶ್ರೀಕೃಷ್ಣ ಲೀಲೋತ್ಸವವನ್ನು ಸಾಂಪ್ರದಾಯಿಕವಾಗಿ ಹಾಗೂ ವೈಭವಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಶ್ರೀಕೃಷ್ಣ ಮಠದ ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ಒಂದು ತಿಂಗಳ ಕಾಲ ಕೃಷ್ಣ ಮಾಸೋತ್ಸವವನ್ನು ಆಯೋಜಿಸಲಾಗಿದೆ.
ಈ ಕುರಿತಂತೆ ಮಾತನಾಡಿರುವ ಪರ್ಯಾಯ ಮಠಾಧೀಶರಾದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು, #Shri Sugunendrathirtha shri ಶ್ರೀ ಕೃಷ್ಣನು ಅವತರಿಸಿದ ದಿನವನ್ನು ಕೃಷ್ಣಜನ್ಮಾಷ್ಟಮಿಯಾಗಿ ಆಚರಿಸಲಾಗುತ್ತದೆ. ಕಾರ್ಯಕ್ರಮ ವ್ಯವಸ್ಥಿತವಾಗಿ ಆಯೋಜಿಸುವ ದೃಷ್ಟಿಯಿಂದ ಸಮಿತಿ ರಚಿಸಲಾಗಿದೆ. ಆ.1ರಂದು ಗುರುಗಳಾದ ಶ್ರೀಸುಜ್ಞಾನೇಂದ್ರ ತೀರ್ಥರ ಸಂಸ್ಮರಣೆಯೊAದಿಗೆ ಶ್ರೀ ಕೃಷ್ಣ ಮಾಸೋತ್ಸವ ಆರಂಭವಾಗಲಿದ್ದು, ಪ್ರತಿ ದಿನವೂ ವಿವಿಧ ಕಾರ್ಯಕ್ರಮ, ಸ್ಪರ್ಧೆ ಇರಲಿದೆ ಎಂದರು.
ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ರಾಷ್ಟಿçÃಯ ಹಬ್ಬದಂತೆ ಆಚರಿಸಬೇಕು. ಶ್ರೀ ಕೃಷ್ಣಮಠದಲ್ಲಿ ಒಂದು ತಿಂಗಳು ನಿರಂತರ ಕಾರ್ಯಕ್ರಮ ರಾಜಾಂಗಣ ಹಾಗೂ ಗೀತಾ ಮಂದಿರದಲ್ಲಿ ನಡೆಯಲಿದೆ ಎಂದರು.
Also read: ಭದ್ರಾ ನದಿ ಅಬ್ಬರ | ಜಲಾವೃತಗೊಂಡ ಬಾಳೆಹೊನ್ನೂರು ಪಟ್ಟಣ
ಶ್ರೀ ಮಠದ ದಿವಾನ ನಾಗರಾಜ ಆಚಾರ್ಯ ಮಾತನಾಡಿ, ಆ.1ರಂದು ರಾಜಾಂಗಣದಲ್ಲಿ ಶ್ರೀ ಕೃಷ್ಣ ಮಾಸೋತ್ಸವಕ್ಕೆ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥರು, ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥರು, ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶತೀರ್ಥರು, ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ನೆರವೇರಲಿದೆ ಎಂದರು.
ಶ್ರೀಮಠದ ರಮೇಶ್ ಭಟ್ ಅವರು ಕ್ರೀಡೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಶ್ರೀ ಮಠದ ಪ್ರಸನ್ನ ಆಚಾರ್ಯ, ರಾಘವೇಂದ್ರ ಆಚಾರ್ಯ ಇದ್ದರು.
ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಈ ವಿಶೇಷ ಕಾರ್ಯಕ್ರಮಗಳು
- ಲಡ್ಡೋತ್ಸವ, ಸಾಮೂಹಿಕ ಡೋಲೋತ್ಸವ, ಕ್ರೀಡೋತ್ಸವ ಹಾಗೂ ಗೀತೋತ್ಸವ
- ಲಡ್ಡು ಮಾಡಲು ಉತ್ತೇಜನ ನೀಡುವುದು, 108 ಬಗೆಯ ಲಡ್ಡುಗಳನ್ನು ಶ್ರೀಕೃಷ್ಣನಿಗೆ ಸಮರ್ಪಿಣೆ
- ಡೋಲೋತ್ಸವದಲ್ಲಿ ತೊಟ್ಟಿಲೋತ್ಸವ ಇತ್ಯಾದಿಗಳು ವೈಭವದಿಂದ ಆಚರಣೆ
- ಕ್ರೀಡೋತ್ಸವದಲ್ಲಿ ಜನಪದ ಕ್ರೀಡೆಗಳು, ಹುಲಿಕುಣಿತ, ವಿವಿಧ ಸ್ಪರ್ಧೆಗಳು
- ಗೀತೋತ್ಸವದಲ್ಲಿ ಭಗದ್ಗೀತೆಯ ಪಠನ ಸಹಿತವಾಗಿ ಕೋಟಿಗೀತ ಲೇಖನ ಯಜ್ಞ
- ಭಗವದ್ಗೀತೆ ಸಾಮೂಹಿಕ ಗಾಯನ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post