ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮೂಲವ್ಯಾಧಿಯಿಂದ #Piles ಬಳಲುತ್ತಿರುವ ರೋಗಿಗಳಿಗಾಗಿ ನಗರದ ಪ್ರಖ್ಯಾತ ಶ್ರೀ ಸದ್ಗುರು ಪೈಲ್ಸ್ ಕ್ಲಿನಿಕ್ ವತಿಯಿಂದ ಆಗಸ್ಟ್ 1ರಿಂದ 12 ದಿನಗಳ ಕಾಲ ಉಚಿತ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ಮಹಿಳೆಯರಲ್ಲಿ ಹಾಗೂ ಪುರುಷರಲ್ಲಿ ಸಮಾನವಾಗಿ ಕಂಡುಬರುವ ಈ ತೊಂದರೆಯ ನಿವಾರಣೆಗೆ ಸದ್ಗುರು ಪೈಲ್ಸ್ ಕ್ಲಿನಿಕ್’ನಲ್ಲಿ ಆಗಸ್ಟ್ 1ರಿಂದ 12ರವರೆಗೂ ಪ್ರತಿದಿನ ಉಚಿತ ತಪಾಸಣಾ ಶಿಬಿರ ನಡೆಯಲಿದೆ.
ಪ್ರತಿದಿನ ಬೆಳಗ್ಗೆ 10ರಿಂದ 1 ಹಾಗೂ ಸಂಜೆ 6 ರಿಂದ 8 ಗಂಟೆಯವರೆಗೂ ಶಿಬಿರ ನಡೆಯಲಿದೆ.ಆಯುರ್ವೇದ ಮೂಲವ್ಯಾಧಿ ಚಿಕಿತ್ಸಾ ತಜ್ಞರಾದ ಡಾ. ಎಚ್.ಎಸ್. ಸತೀಶ್ ಹಾಗೂ ಡಾ. ರಂಜನಿ ಬಿದರಳ್ಳಿ ಅವರು ಸಂದರ್ಶನಕ್ಕೆ ಲಭ್ಯವಿರುತ್ತಾರೆ.
ಶಿಬಿರ ಕುರಿತಂತೆ ಮಾತನಾಡಿದ ಡಾ.ರಂಜನಿ ಬಿದರಳ್ಳಿ ಅವರು, ನಮ್ಮ ನಿತ್ಯ ಜೀವನದ ಕೆಲಸ ಕಾರ್ಯಗಳಿಗೆ ಅಡ್ಡಿಪಡಿಸುವ ಖಾಯಿಲೆ ಹಲವು ಮನುಷ್ಯನಿಗೆ ಕಾಡುತ್ತವೆ. ಅದರಲ್ಲಿ ಮುಖ್ಯವಾದುದು ಮೂಲವ್ಯಾಧಿ. ಜೀರ್ಣಾಂಗ, ನರಮಂಡಲ, ಚರ್ಮದ ಸಮಸ್ಯೆ, ಮಾನಸಿಕ ಅನಾರೋಗ್ಯಕ್ಕೆ ಹಾರ್ಮೋನಿನ ವ್ಯತ್ಯಾಸಕ್ಕೂ ಮೂಲವ್ಯಾಧಿ ಸಮಸ್ಯೆ ಕಾರಣವಾಗುವುದು ಹಲವರಿಗೆ ತಿಳಿಯದ ವಿಷಯ. ವಿಶ್ವದೆಲ್ಲೆಡೆ ಆರೋಗ್ಯ ತಜ್ಞರ ಗಮನ ಸೆಳೆಯುತ್ತಿರುವ ವಿಷಯ Healthy Gut-Healthy Body. ಅಂದರೆ ಸ್ವಸ್ಥ ಜೀರ್ಣಾಂಗ-ಸ್ವಸ್ಥ ದೇಹ. ಇದರ ಮೂಲವೂ ಮೂಲವ್ಯಾಧಿ ಚಿಕಿತ್ಸೆಯಲ್ಲಿದೆ. ಹೀಗಾಗಿ, ಇಂತಹ ರೋಗಿಗಳಿಗಾಗಿ ಈ ಶಿಬಿರವನ್ನು ಆಯೋಜಿಸಲಾಗಿದ್ದು, ಅಗತ್ಯ ಇರುವವರು ಸದುಪಯೋಗ ಮಾಡಿಕೊಳ್ಳಿ ಎಂದು ಕೋರಿದ್ದಾರೆ.
ಶಿಬಿರದ ಬಗ್ಗೆ ಮಾತನಾಡಿದ ಡಾ. ಎಚ್.ಎಸ್. ಸತೀಶ್ ಅವರು, ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ, ಇಂತಹ ಸಮಸ್ಯೆಯಿರುವ ರೋಗಿಗಳಿಗೆ ನೆರವಾಗುವ ದೃಷ್ಠಿಯಿಂದ ಈ ಉಚಿತ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರದಲ್ಲಿ ಭಾಗವಹಿಸಿದ ರೋಗಿಗಳಲ್ಲಿ ಅವಶ್ಯರಿವವರಿಗೆ ಆಗಸ್ಟ್ 10, 11 ಹಾಗೂ 12ರಂದು ರಿಯಾಯ್ತಿ ದರದಲ್ಲಿ ಶಸ್ತ್ರಚಿಕಿತ್ಸೆಯನ್ನೂ ಸಹ ನೆರವೇರಿಸಲಾಗುವುದು. ಅಗತ್ಯ ಇರುವವರು ಇದರ ಸದುಪಯೋಗ ಮಾಡಿಕೊಳ್ಳಿ ಎಂದು ವಿನಂತಿಸಿದ್ದಾರೆ.
ನೋಂದಣಿಗಾಗಿ ಮೊ: 9741988223 ಸಂಖ್ಯೆಗೆ ಸಂಪರ್ಕಿಸಬಹುದು.
ವಿಳಾಸ: ಶ್ರೀ ಸದ್ಗುರು ಪೈಲ್ಸ್ ಕ್ಲಿನಿಕ್, ಸರ್.ಎಂ.ವಿ. ಕಾಂಪ್ಲೆಕ್ಸ್, ತಿಲಕ್ ನಗರ, ಶಿವಮೊಗ್ಗ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post