ಕಲ್ಪ ಮೀಡಿಯಾ ಹೌಸ್ | ಪ್ಯಾರಿಸ್ |
ಪ್ಯಾರಿಸ್ 2024 ಒಲಿಂಪಿಕ್ಸ್ ನಲ್ಲಿ #Paris Olympics 2024 ತೂಕ ಹೆಚ್ಚಳದ ಕಾರಣ ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿ ವಿನೇಶ್ ಫೋಗಟ್ ಸಿಎಎಸ್ (ಕ್ರೀಡೆಗಾಗಿ ಇರುವ ಆರ್ಬಿಟ್ರೇಶನ್ ಕೋರ್ಟ್) ಮೊರೆ ಹೋಗಿದ್ದು, ಅನರ್ಹತೆಯನ್ನು ಪ್ರಶ್ನಿಸಿರುವುದಲ್ಲದೇ ಜಂಟಿಯಾಗಿ ಬೆಳ್ಳಿ ಪದಕಕ್ಕೆ ಮನವಿ ಮಾಡಿದ್ದಾರೆ.
ಮಹಿಳೆಯರ 50 ಕೆಜಿ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದ ಕುಸ್ತಿ ಪಟು ವಿನೇಶ್ ಪೋಗಟ್, #Vinesh Pogat ತಮ್ಮ ತೂಕ ನಿಗದಿತ ಮಿತಿಗಿಂತ 100 ಗ್ರಾಮ್ ಹೆಚ್ಚಳವಾಗಿದ್ದಕ್ಕೆ ಅನರ್ಹಗೊಂಡಿದ್ದರು.
Also read: ಸಿದ್ದರಾಮಯ್ಯ ಪತ್ನಿ ಬದಲಿ ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದು ಏಕೆ? ಸ್ವತಃ ಸಿಎಂ ಹೇಳಿದ್ದೇನು?
ವಿನೇಶ್ ಫೋಗಟ್ ಮಂಗಳವಾರ ಬರೊಬ್ಬರಿ ಮೂರು ಪಂದ್ಯಗಳನ್ನಾಡಿ ಫೈನಲ್ ಗೇರಿದ್ದರು. ಫೈನಲ್ ನಲ್ಲಿ ಅವರು ಅಮೆರಿಕದ ಸಾರಾ ಹಿಲ್ಡೆಬ್ರಾಂಡ್ ಅವರನ್ನು ಎದುರಿಸಲು ಸಿದ್ಧರಾಗಿದ್ದರು. ಆದರೆ ತೂಕದ ವಿಚಾರವಾಗಿ ಅನರ್ಹಗೊಂಡು ಚಿನ್ನದ ಪದಕದ ಆಸೆ ಕೈ ಬಿಡುವಂತಾಗಿದೆ.
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ವಿನೇಶ್ ಫೋಗಟ್ ಅನರ್ಹತೆ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಈ ಬಗ್ಗೆ ಸ್ಪಷ್ಟನೆ ನೀಡಿರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಅಧಿಕಾರಿಗಳು ”ಕೂದಲಿಗೆ ಕತ್ತರಿ ಸೇರಿದಂತೆ ತೂಕ ಇಳಿಕೆಗೆ ಎಲ್ಲ ರೀತಿಯ ಕಠಿಣ ಕ್ರಮ ತೆಗೆದುಕೊಂಡಿದ್ದೆವು” ಎಂದು ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post