No Result
View All Result
Indriya - Krithi Shetty - Brand Ambassador
English Articles

Indriya announces Krithi Shetty as Brand Ambassador for Southern Markets

by kalpa News
August 14, 2026
0

Kalpa Media House  |  Bengaluru  | Indriya, Aditya Birla Jewellery, announced actor Krithi Shetty as its Brand Ambassador, ahead of...

Read moreDetails
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
Olectra Deploys 4,000 Electric Buses in India Milestone

Olectra Creates History | First Company in India to Deploy 4,000 Electric Buses

July 31, 2026
  • Advertise With Us
  • Grievances
  • About Us
  • Contact Us
Saturday, August 15, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಉತ್ತರ ಕನ್ನಡ

ರಾಮಭಕ್ತಿಯಿಂದ ಜೀವಯಾನ ದೇವಯಾನವಾಗಬಲ್ಲದು: ರಾಘವೇಶ್ವರ ಶ್ರೀ

kalpa News by kalpa News
August 14, 2024
in ಉತ್ತರ ಕನ್ನಡ
0
ರಾಮಭಕ್ತಿಯಿಂದ ಜೀವಯಾನ ದೇವಯಾನವಾಗಬಲ್ಲದು: ರಾಘವೇಶ್ವರ ಶ್ರೀ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಗೋಕರ್ಣ  |

ಶ್ರೀರಾಮನಂಥ ಮಹಾಪುರುಷರು ಮಾತ್ರವೇ ಜೀವಯಾನವನ್ನು ದೇವಯಾನವಾಗಿ ಪರಿವರ್ತಿಸಬಲ್ಲರು. ರಾಮನನ್ನು ಆಶ್ರಯಿಸಿದ ಎಲ್ಲರೂ ಮೋಕ್ಷವನ್ನು ಪಡೆಯುತ್ತಾರೆ. ಬೇರೆಯವರಿಗೆ ಜೀವಯಾನ ಕ್ಲೇಶಕರವಾದರೆ, ಅನನ್ಯನಾಗಿ ರಾಮನನ್ನು ಆಶ್ರಯಿಸುವವರಿಗೆ ಮೋಕ್ಷ ಸಾಧನೆಯಾಗುತ್ತದೆ ಎಂದು ಶ್ರೀಮಜ್ಜದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ #Raghaweshwara shri ನುಡಿದರು.

ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ಕೈಗೊಂಡಿರುವ ಶ್ರೀಗಳು 23ನೇ ದಿನವಾದ ಸೋಮವಾರ ಜೀವಯಾನ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿ, ಜೀವಯಾನ ಒಂದರ್ಥದಲ್ಲಿ ದೇವಯಾನ; ಜೀವ-ದೇವ ಯಾನ. ರಾಮಾವತಾರದ ಕೊನೆಯ ಭಾಗದಲ್ಲಿ ಬರುವ ಶ್ರೀರಾಮನ ನಿರ್ಯಾಣದ ಪಯಣವನ್ನು ಬಣ್ಣಿಸಿದರು.
ರಾಮಾವತಾರದ ಕೊನೆಯ ದಿನಗಳಲ್ಲಿ ತಾಪಸನೊಬ್ಬ ಬಂದು ಲಕ್ಷ್ಮಣ ಬಳಿ ಬಂದು ರಾಮನ ಭೇಟಿಯ ಇಂಗಿತ ವ್ಯಕ್ತಪಡಿಸುತ್ತಾನೆ. ಅದರಂತೆ ರಾಮನ ಬಳಿಗೆ ಆತನನ್ನು ಕರೆತಂದಾಗ, ಇಬ್ಬರು ಮಾತ್ರ ಮಾತನಾಡಬೇಕೆಂದು, ನಮ್ಮಿಬ್ಬರ ಸಂಭಾಷಣೆಯನ್ನು ಕೇಳಿಸಿಕೊಂಡರೆ ಆತನಿಗೆ ಮೃತ್ಯುದಂಡ ನೀಡಬೇಕೆಂದು ಷರತ್ತು ವಿಧಿಸುತ್ತಾನೆ. ಬಾಗಿಲಲ್ಲಿ ನಿಂತು ಕಾಯುವಂತೆ ಲಕ್ಷ್ಮಣನಿಗೆ ಸೂಚಿಸುತ್ತಾನೆ. ಅಲ್ಲಿಗೆ ಬಂದ ತಾಪಸಿ ನಿಜವಾಗಿ ಬ್ರಹ್ಮದೇವ ಕಳುಹಿಸಿಕೊಟ್ಟ ಕಾಲಪುರುಷನಾಗಿದ್ದ. ಯಮ ಕಾಲಾತ್ಮಕನಾಗಿ ಅಲ್ಲಿಗೆ ಬಂದಿದ್ದ ಎಂದು ವಿವರಿಸಿದರು.

“ರಾಮಾವತಾರಕ್ಕೆ ಹನ್ನೊಂದು ಸಾವಿರ ವರ್ಷಗಳ ಅವಧಿಯನ್ನು ನೀನೇ ವಿಧಿಸಿಕೊಂಡಿದ್ದಿ. ನೀನು ಹೇಳಿದ ಅವಧಿ ಮುಗಿಯುತ್ತಾ ಬಂದಿದೆ. ಮನುಷ್ಯ ಅವತಾರದ ಅವಧಿ ಮುಗಿಯಿತು ಎನ್ನುವ ಸ್ಥಿತಿ ನಮ್ಮದಲ್ಲ; ರಾಮರಾಜ್ಯವನ್ನು ಮುನ್ನಡೆಸಲು ಭೂಮಿಯ ಮೇಲೆ ಇನ್ನೂ ಕೆಲ ಕಾಲ ಇರುವ ಇಚ್ಛೆ ನಿನಗಿದ್ದರೆ ಅದನ್ನು ಪಾಲಿಸುತ್ತೇವೆ” ಎಂಬ ಬ್ರಹ್ಮನ ಸಂದೇಶವನ್ನು ಕಾಲ ವಿವರಿಸುತ್ತಾನೆ ಎಂದರು.

ಮೂರು ಲೋಕಗಳ ಕಲ್ಯಾಣಕ್ಕಾಗಿ ನಾನು ಅವತಾರವೆತ್ತಿದ ಕಾರ್ಯ ಮುಗಿಯಿತು. ಮುಂದಿನ ಪ್ರಯಾಣಕ್ಕೆ ವ್ಯವಸ್ಥೆ ಮಾಡಲು ರಾಮ ಸಮ್ಮತಿ ನೀಡುತ್ತಾನೆ. ಆ ಹಂತದಲ್ಲಿ ದೂರ್ವಾಸ ಮುನಿಗಳ ಆಗಮನವಾಗುತ್ತದೆ. ಜರೂರಾರಿ ರಾಮನ ಭೇಟಿಗೆ ಆಗ್ರಹಪಡಿಸಿದ್ದು, ಲಕ್ಷ್ಮಣನನ್ನು ಸಂದಿಗ್ಧತೆಗೆ ಸಿಲುಕಿಸುತ್ತದೆ. ರಾಮನ ಆಜ್ಞೆಯ ಅರಿವಿದ್ದರೂ, ಪರರ ಹಿತಕ್ಕಾಗಿ ತಾನು ಮೃತ್ಯುದಂಡ ಸ್ವೀಕರಿಸಲು ಸಿದ್ಧನಾಗಿ ರಾಮನ ಭೇಟಿಗೆ ತೆರಳುತ್ತಾನೆ. ತಕ್ಷಣವೇ ರಾಮ ದೂರ್ವಾಸರಲ್ಲಿಗೆ ಬಂದು ಪ್ರೀತಿಯಿಂದ ಉಪಚರಿಸುತ್ತಾನೆ ಎಂದು ಹೇಳಿದರು.
Kalahamsa Infotech private limitedರಾಮ ತನ್ನ ಪ್ರಾಣವೇ ಆಗಿದ್ದ ಲಕ್ಷ್ಮಣನಿಗೆ ಮೃತ್ಯುದಂಡ ವಿಧಿಸುವ ಸಂದಿಗ್ಧತೆಗೆ ಸಿಲುಕಿದ. ಅತಿಯಾದ ವ್ಯಥೆಯಾಯಿತು. ಅಧೋಮುಖ ದೃಷ್ಟಿಯೊಂದಿಗೆ ರಾಮ ನಿಂತಿದ್ದಾಗ ಲಕ್ಷ್ಮಣ ದೇಶಕ್ಕೆ ಬರುವ ಶಾಪ ತಪ್ಪಿಸುವ ಉದ್ದೇಶದಿಂದ ತಾನೇ ಕೈಯಾರೆ ಆಹ್ವಾನಿಸಿಕೊಂಡ ಸಾವಿಗೆ ಸಜ್ಜಾಗುತ್ತಾನೆ. ಆಗ ವಸಿಷ್ಠರು ಕೊಟ್ಟ ಮಾತನ್ನು ಉಳಿಸಿಕೊಳ್ಳುವಂತೆ ರಾಮನಿಗೆ ಸೂಚಿಸಿದರು. ಕೊನೆಗೂ ಧರ್ಮ ಉಳಿಸುವ ಸಲುವಾಗಿ ಲಕ್ಷ್ಮಣನ ವಿಸರ್ಜನೆಗೆ ರಾಮ ನಿರ್ಧರಿಸಿದ. ಸರಯೂ ನದಿಗೆ ತೆರಳಿದ ಲಕ್ಷ್ಮಣ ಕುಂಭಕದ ಮೂಲಕ ಪ್ರಾಣತ್ಯಾಗ ಮಾಡಿದ. ಆಗ ಪುಷ್ಪವೃಷ್ಟಿಯಾಗುತ್ತದೆ ಎಂದು ತಿಳಿಸಿದರು.

Also read: ಸ್ವಾತಂತ್ರೋತ್ಸವ ನಿಮಿತ್ತ ಈಸೂರಿಗೆ ಬೈಕ್ ರ‍್ಯಾಲಿ: ಜೆ.ಎಸ್. ಚಿದಾನಂದಗೌಡ

ಇದಾದ ಬಳಿಕ ರಾಮ ಭರತನನ್ನು ಕರೆದು, ತಾನೂ ಲಕ್ಷ್ಮಣನಿರುವಲ್ಲಿಗೆ ಹೋಗುತ್ತೇನೆ; ರಾಜ್ಯಾಧಿಕಾರವನ್ನು ಭರತನಿಗೆ ಒಪ್ಪಿಸಲು ಮುಂದಾದ. ಅದಕ್ಕೆ ನಿರಾಕರಿಸಿದ ಭರತ ತಾನೂ ರಾಮನೊಂದಿಗೆ ಬರುವ ಪ್ರತಿಜ್ಞೆ ಕೈಗೊಳ್ಳುತ್ತಾನೆ. ಲವ- ಕುಶರಿಗೆ ರಾಜ್ಯ ಒಪ್ಪಿಸುವಂತೆ ಸಲಹೆ ನೀಡುತ್ತಾನೆ. ಇಡೀ ಪ್ರಕೃತಿ ರಾಜನಿಗೆ ನಮಸ್ಕರಿಸುವಾಗ ವಸಿಷ್ಠರು ಎಲ್ಲ ಜನರ ಕೋರಿಕೆ ಈಡೇರಿಸುವಂತೆ ಸಲಹೆ ನೀಡಿದರು. ಎಲ್ಲರೂ ರಾಮನನ್ನು ಹಿಂಬಾಲಿಸುವ ನಿರ್ಧಾರಕ್ಕೆ ಬಂದ. ಅದಕ್ಕೂ ರಾಮ ಒಪ್ಪುತ್ತಾನೆ. ಲವ ಕುಶರಿಗೆ ಪಟ್ಟಾಧಿಕಾರ ನೀಡಿ ಸಲಹೆ ಸೂಚನೆಗಳನ್ನು ನೀಡಿ ಮಹಾನಿರ್ಯಾಣಕ್ಕೆ ಮುಂದಾಗುತ್ತಾನೆ ಎಂದರು.
ವಾನರ- ರಾಕ್ಷಸರು ಕೂಡಾ ಅಲ್ಲಿಗೆ ಬಂದು ರಾಮನೊಂದಿಗೆ ಬರುವ ಪ್ರತಿಜ್ಞೆ ಮಾಡುತ್ತಾರೆ. ವಿಭೀಷಣನನ್ನು ಇಲ್ಲೇ ಇರಿಸಿ ಧರ್ಮಪರಿಪಾಲನೆಗೆ ಇಕ್ಷ್ವಾಕು ವಂಶದ ಕುಲದೇವತೆಯನ್ನು ಪೂಜಿಸುವಂತೆ ಆದೇಶ ಮಾಡುತ್ತಾನೆ. ರಾಮಕಥೆ ವ್ಯಾಪಿಸಿರುವವರೆಗೂ ಜಗತ್ತಿನಲ್ಲಿ ಇರಬೇಕು ಎಂದು ಹನುಮಂತನಿಗೆ ಸೂಚಿಸುತ್ತಾನೆ. ಕಲಿಯುಗ ಬರುವವರೆಗೆ ಜಾಂಬವಂತನಿಗೆ ಸೂಚನೆ ಇತ್ತು ಎಲ್ಲರೊಂದಿಗೆ ಮಹಾಪ್ರಸ್ಥಾನಕ್ಕೆ ಹೊರಟು ನಿಂತ ಎಂದು ವಿವರಿಸಿದರು.

ರಾಮನ ನಾಮಕರಣ, ವಿವಾಹ, ಪಟ್ಟಾಭಿಷೇಕ ವಿಧಿಗಳನ್ನು ನೆರವೇರಿಸಿದ್ದ ವಸಿಷ್ಠರು ಮಹಾಪ್ರಸ್ಥಾನದ ವಿಧಿಗಳನ್ನು ಪೂರೈಸಿದರು. ರಾಮ ಸೀತೆಯನ್ನು ತ್ಯಜಿಸಿರಲಿಲ್ಲ ಎನ್ನುವುದಕ್ಕೆ ಅಗ್ನಿಹೋತ್ರ ಸಾಕ್ಷಿಯಾಗಿ ನಿಲ್ಲುತ್ತದೆ. ಮಹಾಪ್ರಸ್ಥಾನದ ಜತೆಗೆ ವಾಜಪೇಯದ ಶ್ವೇತಛತ್ರ ಶೋಭೆಯಾಗಿ ಬೆಳಗುತ್ತಿರುವಾಗ ರಾಮ ಅರಮನೆಯಿಂದ ಹೊರಬರುತ್ತಾನೆ. ಕೈಯಲ್ಲಿ ದರ್ಭೆ ಹಿಡಿದು ಓಂಕಾರ ಪಠಿಸುತ್ತಾ ಬಂದಾಗ ಸೂರ್ಯತೇಜಸ್ಸಿನಿಂದ ಕಂಗೊಳಿಸಿದ ಎಂದರು.

https://kalpa.news/wp-content/uploads/2024/04/VID-20240426-WA0008.mp4

ಆಗ ಪ್ರಕೃತಿ ಎರಡು ರೂಪದಿಂದ ಪ್ರಕಟವಾಗಿ ರಾಮನ ಇಕ್ಕೆಲಗಳಲ್ಲಿ ಶೋಭಿಸುತ್ತಾಳೆ. ಬಲಭಾಗದ ದೇವಿ ಮೋಕ್ಷವನ್ನೂ ಎಡಭಾಗದ ದೇವಿ ಶ್ರೇಯಸ್ಸನ್ನೂ ನೀಡುವಂಥದ್ದು. ರಾಮನ ಬಾಣಗಳು ಪುರುಷರೂಪದಿಂದ ನಿಂತವು. ರಾಮಧನಸ್ಸು ಕೂಡಾ ಪುರುಷರೂಪದಲ್ಲಿ ನಿಂತಿತು. ವೇದಗಳು ಬ್ರಾಹ್ಮಣರಾಗಿ, ವೇದಮಾತೆ ಗಾಯತ್ರಿಯೂ ಪ್ರಕಟಗೊಂಡರು ಎಂದು ಬಣ್ಣಿಸಿದರು.

ರಾಮ ಮಹಾಪ್ರಸ್ಥಾನದ ಬಳಿಕ ಅಯೋಧ್ಯೆಯಲ್ಲಿ ಜೀವ ಇರುವ ಯಾವುದೂ ಉಳಿಯಲಿಲ್ಲ. ಸಮಷ್ಟಿ ಚೈತನ್ಯ ಅಲ್ಲಿಗೆ ಹರಿದಿತ್ತು. ಅಯೋಧ್ಯ ಶೂನ್ಯವಾಯಿತು. ಅರ್ಧಯೋಜನ ಪಯಣದ ಬಳಿಕ ಸರಯೂ ನದಿಯ ದರ್ಶನ ಪಡೆದು ಅನುಸರಿಸಿ ಮಹಾನಿರ್ಯಾಣ ಸ್ಥಳಕ್ಕೆ ರಾಮ ಬಂದ. ಧರ್ಮದೇವ ಎಲ್ಲ ದೇವತೆಗಳ ಒಡಗೂಡಿ ಸ್ವಾಗತಕ್ಕೆ ಬರುತ್ತಾನೆ. ಆ ಮಂಗಲಮಯ ವಾತಾವರಣದಲ್ಲಿ ರಾಮ ಸರಯೂ ನದಿಯಲ್ಲಿ ಪಾದವಿಡುತ್ತಾನೆ. ಆಗ ವರುಣದೇವ ಸ್ವಾಗತಿಸಿ, ಮೂಲರೂಪವನ್ನು ತಾಳುವಂತೆ ಕೋರುತ್ತಾನೆ ಎಂದು ವಿವರಿಸಿದರು.

ರಾಮ ಮಹಾಪ್ರಸ್ಥಾನದ ವೇಳೆ ವಿಷ್ಣುರೂಪದಲ್ಲಿ ಐಕ್ಯನಾದ ಬಳಿಕವೂ ತನ್ನೊಂದಿಗೆ ಬಂದ ಎಲ್ಲರಿಗೂ ಅತ್ಯುತ್ತಮ ಗತಿಯನ್ನು ನೀಡುವಂತೆ ಬ್ರಹ್ಮದೇವನಿಗೆ ಸೂಚಿಸುತ್ತಾನೆ. ರಾಮನ ಜತೆಗೆ ಬಂದಿದ್ದ ಎಲ್ಲರೂ ಸರಯೂ ನದಿಯಲ್ಲಿ ಮುಕ್ತಿ ಪಡೆಯುತ್ತಾರೆ ಎಂದು ಕಥಾವಸ್ತುವನ್ನು ಪೂರ್ಣಗೊಳಿಸಿದರು.

ಸುಮಾರು 350 ವರ್ಷಗಳ ಪಂಚಾಂಗಗಳ ಸಂಗ್ರಹವನ್ನು ಜಯಾ ಪಂಡಿತ್ ಅನಾವರಣಗೊಳಿಸಿದರು. ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ವ್ಯವಸ್ಥಾಪಕ ಪ್ರಮೋದ್ ಮುಡಾರೆ, ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ಶ್ರೀಶ ಶಾಸ್ತ್ರಿ, ವಿವಿವಿ ಆಡಳಿತಾಧಿಕಾರಿ ಡಾ.ಪ್ರಸನ್ನ ಕುಮಾರ್ ಟಿ.ಜಿ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಜಿ.ವಿ.ಹೆಗಡೆ, ಮೋಹನ ಭಟ್ ಹರಿಹರ, ಸುಧಾಕರ ಬಡಗಣಿ, ಪರಂಪರಾ ವಿಭಾಗದ ವರಿಷ್ಠಾಚಾರ್ಯ ಸತ್ಯನಾರಾಯಣ ಶರ್ಮಾ, ಪರಂಪರಾ ಗುರುಕುಲದ ಪ್ರಾಚಾರ್ಯ ನರಸಿಂಹ ಭಟ್, ಪಿಯು ಪ್ರಾಚಾರ್ಯರಾದ ಶಶಿಕಲಾ ಕೂರ್ಸೆ, ಮುಖ್ಯಶಿಕ್ಷಕಿ ಸೌಭಾಗ್ಯ ಭಟ್ಟ ಮತ್ತಿತರರು ಉಪಸ್ಥಿತರಿದ್ದರು. ಪ್ರಶಾಂತ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news      

Tags: GokarnaKannada News WebsiteKannada_NewsKannada_News_LiveKannada_News_OnlineKannada_WebsiteLatest News KannadaNews_in_KannadaNews_KannadaRaghaweshwara shriUttara Kannadaಗೋಕರ್ಣಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ
Share215Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಸ್ವಾತಂತ್ರೋತ್ಸವ ನಿಮಿತ್ತ ಈಸೂರಿಗೆ ಬೈಕ್ ರ‍್ಯಾಲಿ: ಜೆ.ಎಸ್. ಚಿದಾನಂದಗೌಡ

Next Post

Imparting value based education is key for country’s growth: MP Yaduveer Wadiyar

kalpa News

kalpa News

Next Post
Imparting value based education is key for country’s growth: MP Yaduveer Wadiyar

Imparting value based education is key for country's growth: MP Yaduveer Wadiyar

Leave a Reply Cancel reply

Your email address will not be published. Required fields are marked *

No Result
View All Result
Indriya - Krithi Shetty - Brand Ambassador
English Articles

Indriya announces Krithi Shetty as Brand Ambassador for Southern Markets

by kalpa News
August 14, 2026
0

Kalpa Media House  |  Bengaluru  | Indriya, Aditya Birla Jewellery, announced actor Krithi Shetty as its Brand Ambassador, ahead of...

Read moreDetails
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
Olectra Deploys 4,000 Electric Buses in India Milestone

Olectra Creates History | First Company in India to Deploy 4,000 Electric Buses

July 31, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL