ಕಲ್ಪ ಮೀಡಿಯಾ ಹೌಸ್ | ಕಾರ್ಕಳ |
ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಕಾರ್ಕಳದ ಕ್ರೈಸ್ಟ್‌ಕಿಂಗ್ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯ ಬಾಲಕರ ಹಾಗೂ ಬಾಲಕಿಯರ ನಾಲ್ಕೂ ತಂಡಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿವೆ.
ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕಾರ್ಕಳ ಇವರ ಆಶ್ರಯದಲ್ಲಿ ಭುವನೇಂದ್ರ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲ್ಲಿ ನಡೆದ ಬಾಲಕರ ತಂಡವನ್ನು ಪ್ರತಿನಿಧಿಸಿದ್ದ ಏಳನೇ ತರಗತಿಯ ಅಶ್ವಿನ್ ಶೆಟ್ಟಿ, ಪ್ರೆಸ್ಟನ್ ಡಿ’ಸೋಜ, ಆರನೇ ತರಗತಿಯ ವಿಹಾನ್ ಪೂಜಾರಿ, ರಿಸ್ಟನ್ ಸೆರಾವೋ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದರೆ ಬಾಲಕಿಯರ ತಂಡವನ್ನು ಪ್ರತಿನಿಧಿಸಿದ್ದ ಏಳನೇ ತರಗತಿಯ ಖುಷಿ ಶೆಟ್ಟಿ, ವಿಶ್ಮಿತಾ, ಆರನೇ ತರಗತಿಯ ಮೆಲ್ರಿನ್ ಫೆರ್ನಾಂಡಿಸ್ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
Also read: ಚರಕ ಸರಳ ಜೀವನದ ಧ್ಯೋತಕ: ಶ್ರೀಕುಮಾರ್ ಅಭಿಪ್ರಾಯ
ಪ್ರೌಢಶಾಲಾ ವಿಭಾಗದಿಂದ ಬಾಲಕಿಯರ ವಿಭಾಗದಲ್ಲಿ ಹತ್ತನೇ ತರಗತಿಯ ಗಣ್ಯ ಪೂಜಾರಿ, ಅನಘ ರಾವ್, ಒಂಬತ್ತನೇ ತರಗತಿಯ ಲಿನಿಶಾ ಡಿ’ಸೋಜ, ವಿಯೋನ್ನ ಪ್ರೇರಿತಾ ಸೆರಾವೋ ಜಿಲ್ಲಾಮಟ್ಟಕ್ಕೆ ಆಯ್ಕೆಯಾದರೆ ಬಾಲಕರ ತಂಡ ಪ್ರತಿನಿಧಿಸಿದ್ದ ಒಂಬತ್ತನೇ ತರಗತಿಯ ಗೌರವ್, ಶೋಬಿತ್, ಮೊಹಮ್ಮದ್ ಅಯಾನ್, ಪ್ರಥಮ್ ಶೆಟ್ಟಿ, ಹತ್ತನೇ ತರಗತಿಯ ಸಾವನ್ ವರ್ಮ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ಮೂಲಕ ಈ ವರ್ಷ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಕ್ರೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳೇ ಜಿಲ್ಲಾಮಟ್ಟದಲ್ಲಿ ಕಾರ್ಕಳ ತಾಲೂಕನ್ನು ಪ್ರತಿನಿಧಿಸಲಿದ್ದಾರೆ. ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಕೃಷ್ಣಪ್ರಸಾದ್, ಪ್ರಕಾಶ್ ನಾಯ್ಕ್, ಕು.ಲಾವಣ್ಯ ತಂಡದ ನೇತೃತ್ವ ವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post