ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಸಾಮಾನ್ಯವಾಗಿ ಲೈಂಗಿಕ ಕ್ರಿಯೆಯಲ್ಲಿ #SexualActivity ಗರ್ಭಧಾರಣೆ ಹಾಗೂ ಸೋಂಕುಗಳನ್ನು ತಡೆಯಲು ಬಹಳಷ್ಟು ಮಂದಿ ಕಾಂಡೋಮ್ ಬಳಸುತ್ತಾರೆ. ಆದರೆ, ಇದು ಇದಕ್ಕೆ ತದ್ವಿರುದ್ದವಾದ ಶಾಕಿಂಗ್ ಮಾಹಿತಿಯೊಂದು ಹೊರಬಿದ್ದಿದೆ.
ಹೌದು… ಲೈಂಗಿಕವಾಗಿ #Sex ಹರಡುವ ಸೋಂಕುಗಳನ್ನು ತಡೆಯುವ ಪೂರ್ಣ ಸಾಮರ್ಥ್ಯ ಕಾಂಡೋಮ್’ಗಳು #Condom ಹೊಂದಿಲ್ಲ. ಬದಲಾಗಿ ಸೋಂಕುಗಳು ಹರಡುವ ಸಾಧ್ಯತೆ ಹೆಚ್ಚಾಗಿದೆ ಎಂಬ ವರದಿಯಾಗಿದೆ.
ಈ ಕುರಿತಂತೆ ನವದೆಹಲಿಯ ಕ್ಲೌಡೈನ್ ಗ್ರೂಪ್ ಆಫ್ ಹಾಸ್ಪಿಟಲ್ಸ್, ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರಜ್ಞೆಯಾಗಿರುವ ಡಾ. ಸಾಧನಾ ಸಿಂಘಲ್ ವೈಷ್ಣೋಯಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಪುರುಷರು ಬಳಸುವ ಕಾಂಡೋಮ್’ಗಳು ಕೇವಲ ಅವರ ಶಿಶ್ನವನ್ನು ಮಾತ್ರ ಕವರ್ ಮಾಡುತ್ತದೆ. ಆದರೆ, ಜನನಾಂಗ #Genitalia ಪ್ರದೇಶದ ಇತರ ಭಾಗಗಳನ್ನು ತೆರೆದಿಡುತ್ತದೆ. ಇದು, ಲೈಂಗಿಕತೆ ನಂತರ ಸೋಂಕುಗಳು ಚರ್ಮದಿಂದ ಚರ್ಮಕ್ಕೆ ಅಂಟುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ, ಕಾಂಡೋಮ್ ಸಂಪೂರ್ಣ ಲೈಂಗಿಕ ಸೋಂಕಿನಿಂದ ರಕ್ಷಣೆ ನೀಡುವುದಿಲ್ಲ.
ಕಾಂಡೋಮ್ ಜಾರುವ ಸಾಧ್ಯತೆ
ಸಂಭೋಗದ ಸಮಯದಲ್ಲಿ ಶಿಶ್ನವನ್ನು ಮಾತ್ರ ಕವರ್ ಮಾಡುವ ಕಾಂಡೋಮ್ ಕೆಲವೊಮ್ಮೆ ಜಾರುವ ಅಥವಾ ಹರಿದುಹೋಗುವ ಸಾಧ್ಯತೆಯಿರುತ್ತದೆ. ಕಾಂಡೋಮ್’ಗಳಲ್ಲಿ ಎಣ್ಣೆ ದ್ರವರೂಪದ ಲೂಬ್ರಿಕೆಂಟ್’ನಿಂದಾಗಿ ಲೈಂಗಿಕ ಕ್ರಿಯೆ ನಡೆಸುವಾಗ ಕಾಂಡೋಮ್ ಜಾರುವ ಸಾಧ್ಯತೆ ಇರುತ್ತದೆ.

ಕಾಂಡೋಮ್’ಗಳು ಸಂಪರ್ಕವನ್ನು ಸೀಮಿತಗೊಳಿಸುವ ಮೂಲಕ ಶಿಲೀಂಧ್ರಗಳ #fungus ಸೋಂಕಿನ ಪ್ರಸರಣವನ್ನು ಕಡಿಮೆ ಮಾಡಬಹುದು. ಅವು ಸಂಪೂರ್ಣವಾಗಿ ರಕ್ಷಣಾತ್ಮಕವಾಗಿಲ್ಲ. ಯೀಸ್ಟ್ ಸೋಂಕುಗಳಂತಹ ಶಿಲೀಂಧ್ರಗಳ ಸೋಂಕುಗಳು ಕಾಂಡೋಮ್ ತಡೆಗೋಡೆಯನ್ನು ಒದಗಿಸುವ ಪ್ರದೇಶಗಳ ಮೇಲೆ ಪರಿಣಾಮ ಬೀರಬಹುದು, ಕಾಂಡೋಮ್ ಬಳಕೆಯ ಹೊರತಾಗಿಯೂ ಸಂಭಾವ್ಯವಾಗಿ ಹರಡುವಿಕೆಗೆ ಕಾರಣವಾಗಬಹುದು.
ನಿಮಗೆ ಯಾವುದೇ ರೀತಿಯ ಜನನಾಂಗಗಳ ಸೋಂಕಿನ ಮುನ್ಸೂಚನೆ ಸಿಕ್ಕರೆ ತಕ್ಷಣವೇ ತಜ್ಞರನ್ನು ಭೇಟಿಯಾಗಿ, ಪರೀಕ್ಷಿಸಿಕೊಳ್ಳಿ. ಒಬ್ಬರಿಗಿಂತ ಅಧಿಕ ಲೈಂಗಿಕ ಸಂಗಾತಿಗಳನ್ನು ಹೊಂದಿರುವ ಜನರು ರೆಗ್ಯುಲುರ್ ಆಗಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post