ಕಲ್ಪ ಮೀಡಿಯಾ ಹೌಸ್ | ಆನಂದಕಂದ ಲೇಖನ ಮಾಲಿಕೆ-4 |

ಹೌದು… ತನ್ನವರೆಲ್ಲ ಯುದ್ಧದಲ್ಲಿ ನಿರತರಾಗಿರಬೇಕಾದರೆ ಅಭಿಮನ್ಯು ದ್ರೋಣಾಚಾರ್ಯರಿಂದ ರಚಿಸಲ್ಪಟ್ಟ ಚಕ್ರವ್ಯೂಹಕ್ಕೆ #Chakravyuha ತಾನೇ ಹೋಗುವುದಾಗಿ ನಿಶ್ಚಯಿಸುತ್ತಾನೆ. ಪರಶುರಾಮನ ಶಿಷ್ಯರಾದ ದ್ರೋಣಾಚಾರ್ಯರಿಂದ #Dronacharya ರಚಿಸಲ್ಪಟ್ಟ ಚಕ್ರವ್ಯೂಹದ ಭೇದನೆ ಎಂದರೆ ಹುಡುಗಾಟವೇ? ಒಂದೆಡೆ ಅರ್ಜುನನು ಯುದ್ಧದಲ್ಲಿ ನಿರತನಾಗಿದ್ದರೆ, ಮತ್ತೊಂದೆಡೆ ಯುಧಿಷ್ಠಿರನಿಗೆ ತಲೆನೋವು ಶುರುವಾಗಿದೆ. ಆ ಸಮಯದಲ್ಲಿ ಒಪ್ಪಿಗೆ ಕೇಳಲು ಅಭಿಮನ್ಯು ಬರುತ್ತಾನೆ.
ನಮ್ಮ ಹಿಂದೂ ಧರ್ಮ ಎಷ್ಟು ಚಂದ ನೋಡಿ. ಅಭಿಮನ್ಯು #Abhimanyu ತಾನು ನಿಶ್ಚಯಿಸಿದ ನಂತರ ಯುದ್ಧಕ್ಕೆ ಹೊರಡಲಿಲ್ಲ. ದೊಡ್ಡವರ ಅನುಮತಿ ಪಡೆದೇ ತೀರುತ್ತೇನೆ ಎಂದು ನಿಶ್ಚಯಿಸಿದ. ಹಾಗೆ ಮಾಡಿದನೂ ಕೂಡ. ಇವರಿಬ್ಬರ ಸಂವಾದವು ಕರ್ನಾಟಭಾರತ ಕಥಾಮಂಜರಿಯಲ್ಲಿ ಹೀಗೆ ವಿವರಿಸಲಾಗಿದೆ.

ನಸುನಗುತ ಧರ್ಮಜನು ಘನಪೌರುಷವು
ನಿನಗುಂಟೆಂದು ಕಂದನ ತೆಗೆದು ಬಿಗಿದಪ್ಪಿ…
ಇದರಿಂದ ನಮಗೆ ತಿಳಿದದ್ದು ಏನೆಂದರೆ ಯುಧಿಷ್ಠಿರನು ಅಭಿಮನ್ಯುವನ್ನು ಎತ್ತಿ ಹಿಡಿಯುತ್ತಿದ್ದನೆಂದರೆ ಆತನಿಗೆ ಎಷ್ಟು ವಯಸ್ಸಿರಬಹುದು ಎಂದು ಒಮ್ಮೆ ಯೋಚಿಸಿ.
ಕೊನೆಗೂ ಚಕ್ರವ್ಯೂಹಕ್ಕೆ ಚಿರತೆಯು ತನ್ನ ಭೇಟಿ ನೋಡಿ ಹಾರಿ ಬರುವಂತೆ ಹಾರಿದ. ಅವನ ಯುದ್ಧ ಕೌಶಲಗಳನ್ನು ನೋಡಿದ ದ್ರೋಣ, ಕರ್ಣ, ಕೃಪ, ಜಯದ್ರಥರೇ ಮೊದಲಾದವರು ಬೆಚ್ಚಿಬಿದ್ದರು. ಅವನೆಲ್ಲಿ ಚಕ್ರವ್ಯೂಹ ಭೇದನೆ ಮಾಡುವನು ಎಂದು ಹೆದರಿ ಮೋಸದ ಯುದ್ಧ ಮಾಡಿದ ದ್ರೋಣ ಮತ್ತು ಕರ್ಣರಿಗೆ ನ್ಯಾಯದ ಸಾವೇ ದೊರಕಿತು. ತನಗೆ ಹಿಂದಿನಿಂದ ಬಾಣಬಿಟ್ಟ ಕರ್ಣನ ಮೇಲೆ ಉಕ್ಕಿದ ರೋಷದಿಂದ, ಅಭಿಮನ್ಯು ತನ್ನ ಸಾವು ನೋವುಗಳನ್ನು ಲೆಕ್ಕಿಸದೆ ಘನ ಘೋರ ಯುದ್ಧಕ್ಕೆ ಇಳಿಯುತ್ತಾನೆ. ಕೊನೆಗೂ ಕೃಷ್ಣನು ಅಭಿಮನ್ಯುವಿನ ಕೈಬಿಡುತ್ತಾನೆ. ಅರಳದ ಹೂವನ್ನು ಮೊಗ್ಗಿನಲ್ಲೇ ಕಿತ್ತೆಸೆದನು. ಅಭಿಮನ್ಯು ತನಗಾಗಿ ಕಾಯುತ್ತಿರುವ ತನ್ನ ವಂಶೋದ್ಧಾರಕನನ್ನು ಬೆಳೆಸುತ್ತಿದ್ದ. ಉತ್ತರಯ್ಯ ನೆನಪಿನಲ್ಲಿ ತನ್ನ ತಂದೆ ತಾಯಿ ಬಂಧು ಬಾಂಧವರ ನೆನಪಿನಲ್ಲಿ ಕೊನೆ ಉಸಿರೆಳೆಯುತ್ತಾನೆ. ಎಲ್ಲರ ಬದುಕಲ್ಲು ಕರುಣಿಯಾದ ಕೃಷ್ಣ ಏಕೆ ಈ ಹಸುಳೆಯ ಜೀವನದಲ್ಲಿ ಇಷ್ಟೊಂದು ನಿಷ್ಕರುಣಿಯಾದ??
ಮುಂದೆ ಇವನೆಂಥ ಪರಾಕ್ರಮಿಯಾಗಬಹುದೋ ಎಂಬ ಭಯದಿಂದಲೇ? ನಾ ಕಾಣೆ.

ಒಂದು ವೇಳೆ ಅರ್ಜುನನೇನಾದರು ಆ ಘನಘೋರ ಯುದ್ಧವನ್ನು ನೋಡಿದ್ದರೆ, ಅವನ ಸಾವನ್ನು ಕುರಿತು ದುಃಖ ಪಡದೆ ಹೆಮ್ಮೆಪಡುತ್ತಿದ್ದನೋ ಏನೋ…!
ಅಂಥಾ ಯೋಧರಿರುವ ಆ ಕುರುಕ್ಷೇತ್ರವನ್ನು ನಿಶ್ಶಬ್ಧ ಮಾಡಲು ಕಾರಣನೀತ ಅಭಿಮನ್ಯು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post