ಕಲ್ಪ ಮೀಡಿಯಾ ಹೌಸ್ | ನಾಗಮಂಗಲ |
ಗಣೇಶ ವಿಸರ್ಜನೆ ವೇಳೆ ಮಸೀದಿ ಬಳಿಯಲ್ಲಿ ಘೋಷಣೆ ಕೂಗಬೇಡಿ ಎಂದು ಕಿರಿಕ್ ಮಾಡಿ ಮೆರವಣಿಗೆ ಮೇಲೆ ಮುಸ್ಲಿಂ ಯುವಕರು ಕಲ್ಲು, ಚಪ್ಪಲಿ, ಬಾಟಲಿ ಹಾಗೂ ಪೆಟ್ರೋಲ್ ಬಾಂಬ್’ಗಳನ್ನು ತೂರಿದ ಪರಿಣಾಮ ನಿನ್ನೆ ರಾತ್ರಿ ನಡೆದಿದೆ.
ಘಟನೆ ನಡೆದಿದ್ದು ಹೇಗೆ?
ಗಣೇಶ ವಿಸರ್ಜನಾ ಪೂರ್ವ ಮೆರವಣಿಗೆ ಮೈಸೂರು ರಸ್ತೆಯಲ್ಲಿರುವ ದರ್ಗಾ ಬಳಿ ಬರುತ್ತಿದ್ದಂತೆಯೇ ಮುಸ್ಲಿಂ ಯುವಕರು ಘೋಷಣೆ ಕೂಗಬೇಡಿ ಎಂದು ಆಕ್ಷೇಪಿಸಿ ಕಲ್ಲು ತೂರಾಟ ನಡೆಸಿದ್ದಾರೆ. ದರ್ಗಾ ಬಳಿಯಲ್ಲಿ ಘೋಷಣೆ ಕೂಗಬೇಡಿ, ಡೊಳ್ಳು ಬಾರಿಸಬೇಡಿ ಎಂದು ಆಕ್ಷೇಪಿಸಿದ್ದು, ಈ ವೇಳೆ ವಾಗ್ವಾದ ನಡೆದಿದ್ದು, ಏಕಾಏಕೆ ಮುಸ್ಲಿಂ ಯುವಕರು ಕಲ್ಲು ತೂರಾಟ ನಡೆಸಿದ್ದಾರೆ.
ಇದರಿಂದ ಕೆರಳಿದ ಹಿಂದೂ ಯುವಕರು ಗಣೇಶ ಮೂರ್ತಿಯನ್ನು ಪೊಲೀಸ್ ಠಾಣೆ ಎದುರು ತಂದು ನಿಲ್ಲಿಸಿ, ಪ್ರತಿಭಟಿಸಿ, ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಕಲ್ಲು ತೂರಾಟ
ಒಂದೆಡೆ ಪೊಲೀಸ್ ಠಾಣೆಯ ಬಳಿಯಲ್ಲಿ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದ ವೇಳೆ ಇನ್ನೊಂದೆಡೆ ಕಿಡಿಗೇಡಿಗಳ ಗುಂಪು ಮತ್ತೆ ಕಲ್ಲು ತೂರಾಟ ನಡೆಸಿದ್ದಾರೆ. ಕಿಡಿಗೇಡಿಗಳನ್ನು ಚದುರಿಸಲು ಲಾಠಿ ಚಾರ್ಜ್ ನಡೆಸಿದರೂ ಕೇರ್ ಮಾಡದೇ ಮತ್ತೆ ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿದ್ದಾರೆ.
ತಲ್ವಾರ್ ಪ್ರದರ್ಶನ, ವಶಕ್ಕೆ
ಇದೇ ವೇಳೆ ಕಿಡಿಗೇಡಿಗಳು ಗುಂಪು ಹಿಂದೂ ಯುವಕರ ವಿರುದ್ದ ತಲ್ವಾರ್ ತೋರಿಸಿದ್ದು, ದರ್ಗಾ ಬಳಿಯಲ್ಲಿ ಬಂದರೆ, ಘೋಷಣೆ ಕೂಗಿದರೆ ನಿಮ್ಮನ್ನು ಉಳಿಸುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ. ಇದನ್ನು ಗಮನಿಸಿ ಮುನ್ನುಗ್ಗಿದ ಪೊಲೀಸರು ತಲ್ವಾರ್’ಗಳನ್ನು ವಶಕ್ಕೆ ಪಡೆದು, ದೊಡ್ಡ ಅನಾಹುತ ತಪ್ಪಿಸಿದ್ದಾರೆ.
ಪೆಟ್ರೋಲ್ ಬಾಂಬ್ ದಾಳಿ, ಸಿಕ್ಕಸಿಕ್ಕ ಅಂಗಡಿಗಳಿಗೆ ಬೆಂಕಿ
ಇನ್ನು, ಕಿಡಿಗೇಡಿಗಳ ಗುಂಪು ಗಣೇಶ ಮೆರವಣಿಗೆಯಲ್ಲಿ ಪಾಲ್ಗೊಂಡವರ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆಸಿದ್ದು, ಸಿಕ್ಕ ಸಿಕ್ಕ ಅಂಗಡಿ, ವಾಹನಗಳಿಗೂ ಸಹ ಬೆಂಕಿ ಹಚ್ಚಿ ಅಟ್ಟಹಾಸ ಮೆರೆದಿದ್ದಾರೆ. ಹಲವು ವಾಹನಗಳು ಸುಟ್ಟು ಕರಕಲಾಗಿವೆ.
ಕಟ್ಟಡದ ಒಳಗಿನಿಂದ ಕಲ್ಲು ತೂರಾಟ
ಈ ವೇಳೆ ಹಿಂದೂ ಯುವಕರು ಎಷ್ಟೇ ಶಾಂತಿ ಕಾಪಾಡಿದರೂ ಸಹ ಕಟ್ಟಡದ ಒಳಗಡೆ ಕುಳಿತ ಕಿಡಿಗೇಡಿಗಳು ಪಾಳಿಯಂತೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಶಾಂತವಾಗಿದ್ದ ಪರಿಸ್ಥಿತಿ ಮತ್ತೆ ಉದ್ವಿಗ್ನಗೊಂಡಿತು.
ಹಿಂದೂಗಳೇ ಟಾರ್ಗೆಟ್
ಘಟನೆಯಲ್ಲಿ ಉದ್ದೇಶ ಪೂರ್ವಕವಾಗಿ ಕಿರಿಕ್ ತೆಗೆದಿರುವ ಕಿಡಿಗೇಡಿಗಳು ಹಿಂದೂಗಳನ್ನು ಟಾರ್ಗೆಟ್ ಮಾಡಿಕೊಂಡೇ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಹಿಂದೂಗಳ ಅಂಗಡಿ, ಕಾರು, ಬೈಕ್’ಗಳ ಮೇಲೆ ದಾಳಿ ನಡೆಸಿರುವುದು ಇದಕ್ಕೆ ಸಾಕ್ಷಿಯಾಗಿದೆ.
ಅಲ್ಲದೇ, ಹಿಂದೂಗಳಿಗೆ ಸೇರಿದ ಹಣ್ಣಿನ ಅಂಗಡಿಗಳನ್ನು ಮಾತ್ರ ಚಲ್ಲಾಪಿಲ್ಲಿ ಮಾಡಲಾಗಿದೆ.
ಇಂದು ಬಂದ್, ಸೆಕ್ಷನ್ ಜಾರಿ, ಶಾಲಾ ಕಾಲೇಜಿಗೆ ರಜೆ
ಘಟನೆ ಹಿನ್ನೆಲೆಯಲ್ಲಿ ಇಂದು ನಾಗಮಂಗಲ ಬಂದ್ ಕರೆ ನೀಡಲಾಗಿದ್ದು, ಹೆಜ್ಜೆ ಹೆಜ್ಜೆಗೂ ಪೊಲೀಸ್ ಭದ್ರತೆ ಹಾಕಲಾಗಿದೆ. ನಗರದಾದ್ಯಂತ ಸೆಕ್ಷನ್ ಜಾರಿಗೊಳಿಸಲಾಗಿದ್ದು, ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.
ಪೊಲೀಸ್ ಭದ್ರತೆ
ಘಟನೆಯಿಂದಾಗಿ ನಗರ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ಮತ್ತೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಎಲ್ಲ ರೀತಿಯ ಕ್ರಮ ಕೈಗೊಂಡಿದೆ.
ನಗರವನ್ನು ಸಂಪರ್ಕಿಸುವ ಎಲ್ಲ ರಸ್ತೆಗಳಲ್ಲಿ ನಾಕಾಬಂಧಿ ಹಾಕಲಾಗಿದೆ. ಘಟನೆ ನಡೆದ ಸ್ಥಳ ಸೇರಿದಂತೆ ನಗರದ ಸೂಕ್ಷö್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post