ಕಲ್ಪ ಮೀಡಿಯಾ ಹೌಸ್ | ವಿಶೇಷ ಸುದ್ಧಿ |
ನಮ್ಮ ನಾಡಿನ ವರ ನಟ ಡಾ.ರಾಜಕುಮಾರ್ ಅವರ ಶಂಕರ್ ಗುರು ಚಲನಚಿತ್ರದ ಈ ಹಾಡಿನಲ್ಲಿ.. ಬೆಳಗಿನ ಬಿಸಿಲು ಚನ್ನಾ, ಹೊಂಗೆಯ ನೆರಳು ಚನ್ನಾ, ಗೆಳತಿಯೆ ನಿನ್ನ ಸ್ನೇಹ ಚಿನ್ನಕ್ಕಿಂತ ಚನ್ನಾ ಆ… ಅಂತ, ಅವರದ್ದೇ ಕಂಠ ಸಿರಿಯಲ್ಲಿ ಹೇಳಿದ್ದಾರೆ.
ಮರ ಎನ್ನುವುದು ಪ್ರಕೃತಿ ಮನುಜ ಕುಲಕ್ಕೆ ಕೊಟ್ಟಿರುವ ಒಂದು ಅಮೂಲ್ಯ ವರದಾನವೇ ಸರಿ. ಇಂತಹ ಕೊಡುಗೆಯಲ್ಲಿ ಅಮೂಲ್ಯವಾದ ಒಂದು ಉಡುಗೊರೆ ಎಂದರೆ ಅದು ಹೊಂಗೆ ಮರ. #PongamiaPinnata
ಹೌದು… ನಮ್ಮ ದೇಶದಲ್ಲಿ, ಅದರಲ್ಲೂ ದಕ್ಷಿಣ ಭಾರತದಲ್ಲಿ ಅತ್ಯಂತ ಸಾಮಾನ್ಯವಾಗಿ ಕಾಣಸಿಗುವ ಮರ ಯಾವುದು ಎಂದರೆ ಅದು ಹೊಂಗೆ ಎಂದೇ ಹೇಳಬಹುದು.
ಈ ಮರಗಳು ಏಷ್ಯಾದ ಉಷ್ಣ ಮತ್ತು ಸಮಶೀತೋಷ್ಣ ವಲಯದಲ್ಲಿ ಕಂಡು ಬರುತ್ತದೆ. ಭಾರತ, ಚೈನ, ಮಲೇಶಿಯಾ, ಇಂಡೋನೇಶಿಯಾ ದೇಶಗಳು ಈ ಮರದ ಆವಾಸ ಸ್ಥಾನ. ಈ ಮರಕ್ಕೆ ಹಿಂದಿಯಲ್ಲಿ ಕರಂಜ್, ತಮಿಳಿನಲ್ಲಿ ಪುಂಗೈ, ತೆಲುಗಿನಲ್ಲಿ ಕಾನುಗ ಮತ್ತು ಸಂಸ್ಕೃತದಲ್ಲಿ ನಕ್ತಮಾಲ ಹಾಗೂ ವೈಜ್ಞಾನಿಕವಾಗಿ ಮಿಲ್ಲೆಟಿಯ ಪಿನ್ನಾಟ ಎಂಬ ಹೆಸರಿದೆ.
Also read: ಮಾಡುವ ಕೆಲಸದಲ್ಲಿ ವಿಭಿನ್ನತೆ ಇದ್ದರೆ ಜಯ ಸುಲಭ ಸಾಧ್ಯ: ವಿನಾಯಕ ನಾಯ್ಕ್ ಅಭಿಪ್ರಾಯ
ಹೊಂಗೆ ಮರದ ಉಪಯೋಗ
ಸಾಮಾನ್ಯವಾಗಿ ಅತ್ಯಂತ ತಂಪಾದ ಗಾಳಿಯನ್ನು ಮನುಷ್ಯನಿಗೆ ಬೀಸುವ ಹೊಂಗೆ ಮರ ಔಷಧೀಯವಾಗಿಯೂ ಸಹ ಬಹಳಷ್ಟು ಉಪಯೋಗವನ್ನು ಹೊಂದಿದೆ.
ಹೊಂಗೆ ಮರದ ಎಲೆ ಹಾಗೂ ಚೆಕ್ಕೆಗಳನ್ನು ಮಧುಮೇಹ ನಿವಾರಣೆಯ ಔಷಧಿಯಾಗಿ ಬಳಸುತ್ತಾರೆ. ಕೂದಲು ಉದುರುವಿಕೆಯನ್ನು ತಡೆಯಲು ಒಣಗಿದ ಹೊಂಗೆ ಬೀಜಗಳನ್ನು ನೀರಿನಲ್ಲಿ ತೇದು ಹಚ್ಚಿಕೊಳ್ಳುವ ಅಭ್ಯಾಸ ಮೊದಲನಿಂದಲೂ ಸಹ ಇದೆ.
ಇನ್ನು, ಚರ್ಮ ಕಾಯಿಲೆಯಲ್ಲಿಯೂ ಸಹ ಹೊಂಗೆ ಬೀಜದ ಎಣ್ಣೆಯನ್ನು ಬಳಕೆ ಮಾಡುವ ಜೊತೆಯಲ್ಲಿ ಅದರ ಎಲೆಯನ್ನು ಕಷಾಯಕ್ಕಾಗಿಯೂ ಸಹ ಬಳಸಲಾಗುತ್ತದೆ.
ಹೊಂಗೆ ಮರದ ಎಲೆಗಳು ಕಂದು ಅಥವಾ ಬೂದು ಬಣ್ಣಕ್ಕೆ ಬರುವುದು ಸಾಮಾನ್ಯವಾದ ಸಮಸ್ಯೆ. ತಾನಾಗೇ ಸರಿ ಪಡಿಸಿಕೊಳ್ಳುತ್ತದೆ. ಇದರ ಉಪಯೋಗಗಳು ಗೊತ್ತಿಲ್ಲದವರಿಗೆ ಅದೊಂದು ಎಲ್ಲಾ ಮರಗಳಿಗಿಂತ ಹೆಚ್ಚು ನೆರಳು ಕೊಡುವ, ತಂಪಾಗಿ ಇಡುವ ಮರ ಹೊಂಗೆಯ ನೆರಳು, ತಾಯಿಯ ಮಡಿಲು ಅಂತಾನೇ ನಾನ್ನುಡಿ ಇದೆ. ಮರ ಕಡಿಯೋ ಯೋಚನೆಗಳು ಮಾಡಿ, ರಕ್ಕಸರಂತೆ ವರ್ತಿಸದೆ ಪ್ರಕೃತಿಯನ್ನು ಗೌರವಿಸೋಣ.
ಗಿಡ ನೆಟ್ಟು, ಮರ ಬೆಳಸಿ, ಪ್ರಕೃತಿ ಉಳಿಸೋಣ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post