ಕಲ್ಪ ಮೀಡಿಯಾ ಹೌಸ್ | ಕಾರ್ಕಳ |
ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕಾರ್ಕಳ ಇವರ ಆಶ್ರಯದಲ್ಲಿ ಕಾರ್ಕಳ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಕಾರ್ಕಳ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಬಾಲಕರ ಕ್ರಿಕೆಟ್ ಪಂದ್ಯಾಟದಲ್ಲಿ ಕಾರ್ಕಳ ತಾಲೂಕು ತಂಡಕ್ಕೆ ಕಾರ್ಕಳದ ಕ್ರೈಸ್ಟ್‌ಕಿಂಗ್ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ಆಂಗ್ಲಮಾಧ್ಯಮ ಪ್ರೌಢಶಾಲೆಯ ಒಟ್ಟು ಹನ್ನೆರಡು ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
Also read: ಸಮಾಜಕ್ಕೆ ಶಿಕ್ಷಣ ನೀಡುತ್ತಿದ್ದ ಅಂದಿನ ಸಿನಿಮಾಗಳು ಸದಾ ಸ್ಮರಣೀಯ: ನಾರಾಯಣ ರಾವ್ ಅಭಿಪ್ರಾಯ
ಪ್ರೌಢಶಾಲಾ ವಿಭಾಗದಿಂದ ಹತ್ತನೇ ತರಗತಿಯ ತ್ರಿಶೂಲ್ ಶೆಟ್ಟಿ, ಅಂಜನ್ ಕುಮಾರ್, ಪೂಜನ್ ಹೆಚ್.ಎಸ್, ಒಂಬತ್ತನೇ ತರಗತಿಯ ಗಗನ್ ಎಸ್ ಶೆಟ್ಟಿ, ಎಂಟನೇ ತರಗತಿಯ ಮನನ್ ವಿ ಜೈನ್, ತನ್ಮಯ್ ಯು ಶೆಟ್ಟಿ, ಪ್ರಾಥಮಿಕ ಶಾಲಾ ವಿಭಾಗದಿಂದ ಏಳನೇ ತರಗತಿಯ ವಿನೀತ್ ಪೂಜಾರಿ, ಇಶಾಂತ್ ವಿ ಕೋಟ್ಯಾನ್, ಆಕಾಶ್ ಎಸ್ ಶೆಣೈ, ಸೌರಭ್ ಪೂಜಾರಿ, ಆರನೇ ತರಗತಿಯ ಆಯುಷ್, ಡೇಲನ್ ಡಿ’ಮೆಲ್ಲೊ ಉಡುಪಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಾಗಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















