ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರ್ನಾಟಕದಲ್ಲಿ ನಡೆಯುವ ಗಣೇಶ ಗಲಾಟೆಗಳಲ್ಲಿ ಕೇರಳ ರಾಜ್ಯದ ರಾಷ್ಟ್ರ ದ್ರೋಹಿ ಮುಸ್ಲಿಂರ ಕೈವಾಡವಿದೆ ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ #K S Eshwarappa ಗಂಭೀರ ಆರೋಪ ಮಾಡಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ನಾಗಮಂಗಲ ಸೇರಿದಂತೆ ಹಲವು ಕಡೆ ರಾಷ್ಟ್ರದ್ರೋಹಿ ಮುಸ್ಲಿಂರಿಂದ ಗಲಾಟೆಗಳು ನಡೆಯುತ್ತಿರುವುದು ಕಂಡು ಬರುತ್ತಿದೆ. ಇದಕ್ಕೆ ನಾಗಮಂಗಲದ ಘಟನೆಯೇ ಉದಾಹರಣೆಯಾಗಿದೆ. ಪಿಎಫ್‌ಐ, ಕೆಎಫ್‌ಡಿಯಂತಹ ನಿಷೇದಿತ ರಾಷ್ಟ್ರದ್ರೋಹಿ ಸಂಸ್ಥೆಗಳು ಕೈಜೋಡಿಸುತ್ತಿವೆ. ಮುಖ್ಯವಾಗಿ ಕೇರಳ ಮೂಲದ ಮುಸ್ಲಿಂರು ರಾಜ್ಯದಲ್ಲಿ ಬೀಡುಬಿಟ್ಟು ಇಂತಹ ಘಟನೆಗಳಿಗೆ ಕಾರಣರಾಗಿದ್ದಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರೇ #PM Narendra Modi ಘಟನೆಯನ್ನು ಖಂಡನೆ ಮಾಡಿದ್ದಾರೆ. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಇದನ್ನು ಹಗುರವಾಗಿ ತೆಗೆದುಕೊಂಡಿದೆ. ಗೃಹಮಂತ್ರಿ ಸೇರಿದಂತೆ ಚೆಲುವರಾಜ ಸ್ವಾಮಿ ಸತೀಶ್ ಜಾರಕಿಹೊಳಿಯಂತವರು ಇದನ್ನು ಸಣ್ಣ ಘಟನೆ ಎನ್ನುತ್ತಿದ್ದಾರೆ. ಇಡೀ ನಾಗಮಂಗಲವೇ ಹತ್ತಿಉರಿಯುತ್ತಿರುವಾಗ ಇವರು ಮಾತ್ರ ಇದು ಸಣ್ಣ ಘಟನೆ ಎನ್ನುತ್ತಿರುವುದು ಆಶ್ಚರ್ಯ ತಂದಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಮಾತ್ರ ಕೆಲವು ಮುಸ್ಲಿಂ ಗುಂಡಾಗಳು ಬಾಲ ಬಿಚ್ಚುತ್ತಿದ್ದಾರೆ. ಈ ಹಾವಳಿ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿ ನಡೆಯುತ್ತಿರುವ ಗಲಭೆಗಳಿಗೆ ಕೇರಳ ಮುಸ್ಲಿಂರ ಜೊತೆಯೇ ವಿದೇಶದ ಕೈವಾಡದ ಶಂಕೆಯು ಇದೆ ಎಂದರು.
Also read: ಹಾಲಿನ ದರ ಹೆಚ್ಚಳ | ರೈತರ ಹೆಸರಿನಲ್ಲಿ ಗ್ರಾಹಕರಿಂದ ಸುಲಿಗೆ | ಎಮ್‌ಎಲ್‌ಸಿ ಡಿ.ಎಸ್. ಅರುಣ್ ಆರೋಪ
ನಾಳೆ ಶಿವಮೊಗ್ಗದಲ್ಲಿ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನ ಮೆರವಣ ಗೆ ಇದೆ. ಪೊಲೀಸರು ಈ ಸಂದರ್ಭದಲ್ಲಿ ಅತ್ಯಂತ ಎಚ್ಚರಿಕೆಯಿಂದ ಇರಬೇಕು ಶಿವಮೊಗ್ಗದಲ್ಲಿ ಮುಸ್ಲಿಂ ಮತ್ತು ಹಿಂದೂಗಳು ಸಹಭಾಳ್ವೆಯಿಂದಲೇ ಇದ್ದಾರೆ. ಮುಸ್ಲಿಂ ಯುವಕರೇ ಗಣೇಶ ಸ್ಥಾಪನೆಯ ಸ್ಥಳಗಳಿಗೆ ಹೋಗಿ ಮಾಲೆ ಹಾಕಿ ಬರುತ್ತಿದ್ದಾರೆ. ಇದು ತೋರಿಕೆಗೆ ಆಗಬಾರದು. ಶಿವಮೊಗ್ಗದಲ್ಲಿಯೂ ಕೇರಳದಿಂದ ಬಂದ ಮುಸ್ಲಿಂರು ಇರಬಹುದು ಆದ್ದರಿಂದ ಪೊಲೀಸ್ ಇಲಾಖೆ ಅತ್ಯಂತ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದರು.
ಇತ್ತೀಚಿಗೆ ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಘಟನೆಗೆ ಸಂಬAಧಿಸಿದAತೆ ಸರ್ಕಾರವೇ ಹೇಳಿದಂತೆ ಆ ಕುಟುಂಬಕ್ಕೆ ತಕ್ಷಣವೇ 25 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಇತ್ತೀಚೆಗೆ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ಮತ್ತು ಅವುಗಳನ್ನು ಒಂದೇ ಸಮನೆ ಭಿತ್ತರಿಸುತ್ತಿರುವ ಟಿವಿ ಚಾನಲ್‌ಗಳನ್ನು ಕಂಡರೆ ಕೈಮುಗಿಯಬೇಕು ಎನಿಸುತ್ತದೆ. ಕೆಟ್ಟದ್ದನ್ನೇ ಮತ್ತೆ ಮತ್ತೇ ತೋರಿಸುತ್ತಿದ್ದಾರೆ. ಈ ಟಿವಿಯವರಿಗೆ ಬೇರೆ ಒಳ್ಳೆಯ ವಿಚಾರಗಳೇ ಸಿಗುವುದಿಲ್ಲವೇ ಎಂದು ಟಿವಿ ಚಾನಲ್‌ಗಳ ಬಗ್ಗೆ ಈಶ್ವರಪ್ಪ ಬೇಸರ ವ್ಯಕ್ತಪಡಿಸಿದರು.
ಬಿಜೆಪಿ ಶಾಸಕ ಮುನಿರತ್ನಂಗೆ ಸಂಬAಧಿಸಿದAತೆ ಪ್ರತಿಕ್ರಿಯಿಸಿದ ಅವರು, ಮನುಷ್ಯ ಇಷ್ಟು ನೀಚತನಕ್ಕೆ ಇಳಿಯಬಾರದು ಎಂದರು.
ಗೋಷ್ಠಿಯಲ್ಲಿ ಪ್ರಮುಖರಾದ ಬಾಲು, ಜಾಧವ್, ಶೇಷಾದ್ರಿ, ಮೋಹನ್‌ರಾಜ್, ಶಂಕರನಾಯ್ಕ, ಟಾಕ್ರಾ ನಾಯ್ಕ, ಜಗದೀಶ್, ಶ್ರೀಕಾಂತ್ ಮುಂತಾದವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post