ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹೆಲಿಪ್ಯಾಡ್’ನಲ್ಲಿ ವಾಕಿಂಗ್ ಮಾಡುವಾಗ ತೀವ್ರ ಹೃದಯಾಘಾತಕ್ಕೊಳಗಾಗಿ #CardiacArrest 20 ವರ್ಷದ ವೈದ್ಯಕೀಯ ವಿದ್ಯಾರ್ಥಿ ಮರಣ ಹೊಂದಿರುವ ಘಟನೆ ನಗರದಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಸಿಮ್ಸ್ #SIMS ಕಾಲೇಜಿನಲ್ಲಿ 2ನೇ ವರ್ಷದ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದ ಪೃಥ್ವಿ ಎಂದು ಗುರುತಿಸಲಾಗಿದೆ.
ಈ ವಿದ್ಯಾರ್ಥಿ ಇಂದು ಸಂಜೆ 4 ಗಂಟೆ ವೇಳೆಗೆ ಹೆಲಿಪ್ಯಾಡ್’ನಲ್ಲಿ ವಾಕಿಂಗ್ #Walking ಮಾಡುತ್ತಿದ್ದರು. ಆ ವೇಳೆ ಏಕಾಏಕಿ ತೀವ್ರ ಹೃದಯಾಘಾತ ಸಂಭವಿಸಿದ್ದು, ಕುಸಿದು ಬಿದ್ದಿದ್ದಾರೆ.
ಅಲ್ಲೆ ವಾಕ್ ಮಾಡುತ್ತಿದ್ದ ಅಶೋಕನಗರದ ಮೋಹನ್ ಎಂಬುವರು ಹೃದಯಘಾತದ ಲಕ್ಷಣ ಕಂಡು ಬಂದಿರುವುದರಿಂದ ಸ್ಥಳದಲ್ಲೆ ಪ್ರಥಮ ಚಿಕಿತ್ಸೆ ನೀಡಿ 5 ನಿಮಿಷದಲ್ಲಿ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಅಷ್ಟರಲ್ಲೆ ಮರಣ ಹೊಂದಿರುವಾದಗಿ ವೈದ್ಯರು ದೃಢಪಡಿಸಿದ್ದಾರೆ.
ವಿದ್ಯಾರ್ಥಿಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post