ಕಲ್ಪ ಮೀಡಿಯಾ ಹೌಸ್ | ಚಿಕ್ಕಮಗಳೂರು |
ಶೃಂಗೇರಿ #Sringeri ಮಠದಲ್ಲಿ ವಸ್ತ್ರ ಸಂಹಿತೆ ಜಾರಿಯಾದ ಬೆನ್ನಲ್ಲೇ ಮಲೆನಾಡಿನ ಇನ್ನೊಂದು ಪುಣ್ಯಕ್ಷೇತ್ರ ಹೊರನಾಡು #Horanadu ಅನ್ನಪೂರ್ಣೇಶ್ವರಿ ದೇಗುಲದಲ್ಲೂ ಸಹ ಇದೇ ನಿಯಮವನ್ನು ಜಾರಿ ಮಾಡಲಾಗಿದೆ.
ಈ ಕುರಿತಂತೆ ದೇವಾಲಯದ ವತಿಯಿಂದ ಆದೇಶ ಹೊರಡಿಸಲಾಗಿದ್ದು, ಹೊರನಾಡು ಅನ್ನಪೂಣೇಶ್ವರಿ ದೇವಾಲಯ ಪ್ರವೇಶಿಸಿ, ದೇವಿಯ ದರ್ಶನ ಪಡೆಯಲು ಸಾಂಪ್ರದಾಯಿಕ ಉಡುಗೆ ತೊಡುವುದು ಕಡ್ಡಾಯವಾಗಿದೆ.
ವಸ್ತ್ರ ಸಂಹಿತೆ ಹೀಗಿದೆ:
ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ ಪ್ರವೇಶಿಸಲು ಇನ್ನು ಮುಂದೆ, ಪುರುಷರು ಚಂಚೆ, ಶಲ್ಯ ಅಥವಾ ಪ್ಯಾಂಟ್ ಹಾಗೂ ಶರ್ಟ್ ಧರಿಸಿಕೊಂಡು ಬರಬೇಕು.
Also read: ವಾಲಿಬಾಲ್ ಪಂದ್ಯಾವಳಿ: ಕ್ರೈಸ್ಟ್‌ಕಿಂಗ್ ತಂಡ ಸತತ ಎರಡನೇ ಬಾರಿಗೆ ಮೈಸೂರು ವಿಭಾಗಮಟ್ಟಕ್ಕೆ ಆಯ್ಕೆ
ಹಾಗೆಯೇ ಹೆಣ್ಣು ಮಕ್ಕಳು ಸೀರೆ, ವೇಲ್ ಇರುವ ಚೂಡಿದಾರ್ ಧರಿಸಿಕೊಂಡು ಬರಬೇಕು.
ಸಾಂಪ್ರದಾಯಿಕ ಉಡುಗೆ ತೊಟ್ಟು ಬರದಿದ್ದರೆ ದೇವಸ್ಥಾನದ ಒಳಕ್ಕೆ ಪ್ರವೇಶವಿಲ್ಲ ಎಂದು ಸೂಚನೆ ನೀಡಿದ್ದಾರೆ.
ಕಳೆದ ಒಂದು ತಿಂಗಳ ಹಿಂದೆ ಶೃಂಗೇರಿ ಶಾರದಾಂಬೆ ದೇಗುಲದಲ್ಲೂ ಆಡಳಿತ ಮಂಡಳಿ ಡ್ರೆಸ್ ಕೋಡ್ ಜಾರಿಗೆ ತಂದಿದ್ದರು. ಶೃಂಗೇರಿ ಶಾರದಾಂಬೆ ಹಾಗೂ ಗುರುವತ್ರಯರ ದರ್ಶನಕ್ಕೆ ಬರುವ ಭಕ್ತರು ಸಾಂಪ್ರದಾಯಿಕ ಉಡುಗೆಯ ಶೈಲಿಯಲ್ಲಿ ಬರಬೇಕೆಂದು ಸೂಚನೆ ನೀಡಿದ್ದರು. ಗಂಡು ಮಕ್ಕಳು ಪಂಚೆ, ಶಲ್ಯ ಹಾಗೂ ಶರ್ಟ್ ಧರಿಸಿ ಬಂದರೆ ಹೆಣ್ಣು ಮಕ್ಕಳು ಸೀರೆ, ಚೂಡಿದಾರ ಧರಿಸಿ ಬರಬೇಕೆಂದು ನಮ್ಮ ಸೂಚನೆ ನೀಡಿದ್ದರು.
ಈಗ ಜಿಲ್ಲೆಯ ಎರಡು ಶಕ್ತಿ ದೇವತೆಗಳಾದ ಹೊರನಾಡು ಅನ್ನಪೂರ್ಣೇಶ್ವರಿ ಹಾಗೂ ಶೃಂಗೇರಿ ಶಾರದಾಂಬೆ ದೇಗುಲದಲ್ಲಿ ಭಕ್ತರಿಗೆ ಡ್ರೆಸ್ ಕೋಡ್ ಜಾರಿಗೆ ಬಂದಂತಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post