ಕಲ್ಪ ಮೀಡಿಯಾ ಹೌಸ್ | ಜೋಗ(ಶಿವಮೊಗ್ಗ) |
ಮಲೆನಾಡಿನ ಹೆಮ್ಮೆಯ ಪ್ರವಾಸಿ ತಾಣವಾದ ವಿಶ್ವವಿಖ್ಯಾತ ಜೋಗ #Jogfalls ಜಲಪಾತದಲ್ಲಿ ವಿಶ್ವ ಪ್ರವಾಸೋದ್ಯಮ ದಿನವನ್ನು ರ‍್ಥಪರ‍್ಣವಾಗಿ ಆಚರಿಸಲಾಯಿತು.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ವಿಶ್ವ ವಿಖ್ಯಾತ ಜೋಗ ಜಲಪಾತದಲ್ಲಿ ಪ್ರವಾಸೋದ್ಯಮ ದಿನವನ್ನು ಆಚರಿಸಲಾಯಿತು.
ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಈ ದಿನದ ಮೊದಲ ಪ್ರವಾಸಿಗರಿಗೆ ಜೋಗ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸಿಹಿ ಹಂಚಿ ಶುಭ ಕೋರಲಾಯಿತು.
Also read: ಸಾರ್… ಗಲಾಟೆ ಆಗ್ತಿದೆ, ಬೇಗ ಬನ್ನಿ ಎಂದು ಕರೆ | ಸ್ಥಳಕ್ಕೆ ದೌಡಾಯಿಸಿದ 112 ಪೊಲೀಸ್ ಸಿಬ್ಬಂದಿಗೆ ಕಾದಿತ್ತು ಶಾಕ್
ಜೋಗಕ್ಕೆ ಭೇಟಿ ನೀಡಿದ ಪ್ರವಾಸಿಗರಿಗೆ ಹಾಗೂ ಸ್ಥಳೀಯರಿಗೆ ಸಿಹಿ ಹಂಚಿದ ಆಡಳಿತ ಪ್ರಾಧಿಕಾರದ ಅಧಿಕಾರಿ ಹಾಗೂ ಸಿಬ್ಬಂದಿಗಳು ಶುಭ ಕೋರಿದರು.
ಜೋಗ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು, ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷ ರಾಜಕುಮಾರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post