No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
  • Advertise With Us
  • Grievances
  • About Us
  • Contact Us
Saturday, October 10, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ದೇಶಿಯ ಆಡಳಿತಗಾರರಿಗೆ ಶಿವಾಜಿ ಮಹಾರಾಜರು ಒಂದು ಮಾದರಿ…!

kalpa News by kalpa News
February 19, 2026
in Special Articles
0
ದೇಶಿಯ ಆಡಳಿತಗಾರರಿಗೆ ಶಿವಾಜಿ ಮಹಾರಾಜರು ಒಂದು ಮಾದರಿ…!
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |

ಭಾರತೀಯ ಇತಿಹಾಸದಲ್ಲಿ ಸ್ವರಾಜ್ಯ ಸ್ಥಾಪನೆ ಮಾಡಿ ತಮ್ಮ ಶ್ರೇಷ್ಠ ವ್ಯಕ್ತಿತ್ವ, ಸಾಹಸ, ಧೈರ್ಯ, ವೀರತ್ವ, ಶಕ್ತಿತ್ವ ಹಾಗೂ ಆಡಳಿತ, ರಕ್ಷಣೆ, ಧಾರ್ಮಿಕ ಸಹಿಷ್ಣುತೆಗೆ ಹೆಸರಾಗಿ ಭಾರತೀಯರ ಪ್ರತಿಯೊಬ್ಬ ವ್ಯಕ್ತಿಯ ಹೃದಯದಲ್ಲಿ ಶಿವಾಜಿ ಮಹಾರಾಜ್ ಇರುವುದನ್ನು ಇಂದಿಗೂ ಕಾಣಬಹುದು.

ಶಿವಾಜಿ #Shivaji ಮಹಾರಾಜರ ಹೆಸರು ಕೇಳಿದ ತಕ್ಷಣ ದೇಹದಲ್ಲಿ ರೋಮಾಂಚನ, ಧೈರ್ಯ, ಆತ್ಮಾಭಿಮಾನ, ವಿಶ್ವಾಸ, ಶಿಸ್ತು, ಸಂಯಮ, ಸಾಹಸ, ಕರುಣೆ, ಪ್ರೀತಿ, ಆಧ್ಯಾತ್ಮ ಭಕ್ತಿ , ಸ್ವರಾಜ್ಯ ಕಲ್ಪನೆ ಮೂಡುವುದು ಸಹಜ ಧರ್ಮವಾಗಿದೆ.

ದೇಶಿಯ ಆಡಳಿತಗಾರರಿಗೆ ಶಿವಾಜಿ ಮಹಾರಾಜರು ಒಂದು ಮಾದರಿ. ದೇಶವನ್ನು ಹೇಗೆ ಸಂರಕ್ಷಣೆ ಮಾಡಬೇಕು, ಸೈನ್ಯ ವ್ಯವಸ್ಥೆಯನ್ನು ಹೇಗೆ ರೂಡಿಸಬೇಕು ಎಂಬ ಪರಿಕಲ್ಪನೆಯನ್ನು ಆಧುನಿಕ ಭಾರತಕ್ಕೂ ಶಿವಾಜಿ ತಮ್ಮ ಆಡಳಿತದ ಮೂಲಕ ನೀಡಿರುವುದು ಗಮನಾರ್ಹವಾದುದು. ಭಾರತ ಇಂದು ಅಭಿವೃದ್ಧಿಯ ದಿಕ್ಕಿನಲ್ಲಿ ಸಾಗುತ್ತಿರಲು ಶಿವಾಜಿ ಮಹಾರಾಜರ ಪ್ರೇರಣೆಯ ಆಡಳಿತ ಕಾರಣವಾಗಿದೆ.
ಶಿವಾಜಿ ಮಹಾರಾಜರು 1627 ಫೆಬ್ರವರಿ 19 ರಂದು ಶಿವನೇರಿ ಎಂಬಲ್ಲಿ ಜನಿಸಿದರು. ತಂದೆ ಶಹಜಿ,.ತಾಯಿ ಜೀಜಾಬಾಯಿ. ತಂದೆ ಶಹಜೀ ಸೇನಾ ಸರದಾರರಾಗಿ ಅಹಮದ್ ನಗರದ ಸುಲ್ತಾನರಲ್ಲಿ ನಂತರ ಬಿಜಾಪುರದ ಆದಿಲ್ ಶಾಹಿ ಸುಲ್ತಾನರಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಶಿವಾಜಿಯ ಜನನವೇ ಭಾರತದ ಅಮೃತಗಳಿಗೆ. ಶಿವಾಜಿ ಬಾಲ್ಯದಿಂದಲೂ ತಾಯಿಯ ರಾಷ್ಟ್ರೀಯ ಭಕ್ತಿ, ಭಾರತೀಯ ಸಾಹಿತ್ಯ ಮೌಲ್ಯಗಳಾದ ರಾಮಾಯಣ ಮಹಾಭಾರತ ಹಾಗೂ ಪುರಾಣದ ಪ್ರಸಿದ್ಧ ಶ್ರೇಷ್ಠ ವ್ಯಕ್ತಿತ್ವದ ಪರಂಪರೆಯ ಇತಿಹಾಸವನ್ನು ತಿಳಿದು, ಅರ್ಥಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಂಡ ಶಿವಾಜಿ ಮಹಾರಾಜರು ಸದೃಢವಾದ ಸ್ವರಾಜ್ಯವಾದ ಮರಾಠ ಸಾಮ್ರಾಜ್ಯವನ್ನು ಸ್ಥಾಪಿಸಿ ಹಿಂದೂ ಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿ ಇಂದಿಗೂ ಹೆಮ್ಮೆಯಿಂದ ಬದುಕುವ ಆಡಳಿತವನ್ನು ನೀಡಿದ ಶಿವಾಜಿಯನ್ನು ಸದಾ ಕಾಲ ನಾವು ಸ್ಪರಿಸಿಕೊಳ್ಳಲೇಬೇಕು.

ಗುರು ದಾದಾ ಜಿ ಕೊಂಡದೇವ ಸಂತರಾದ ರಾಮದಾಸ್, ತುಕಾರಾಂ ರವರಿಂದ ಪ್ರಭಾವಿತರಾಗಿ ಬಾಲ್ಯದಲ್ಲಿಯೇ ಸ್ನೇಹಿತರು ಹಾಗೂ ಯುವ ಅನುಯಾಯಿಗಳನ್ನು ಒಳಗೊಂಡ ಪಡೆಯನ್ನು ನಿರ್ಮಿಸಿ ಸೈನಿಕ ಜೀವನವನ್ನು ಆರಂಭಿಸಿದರು. ಮಾವಳಿಯರ ಸಹಾಯದಿಂದ ಬಾಲ್ಯದಲ್ಲಿಯೇ ತೋರಣಕೋಟೆಯನ್ನು ವಶಪಡಿಸಿಕೊಂಡು ಭಗವದ್ವಜವನ್ನು ಹಾರಿಸಿದ ಮಹಾನ್ ವ್ಯಕ್ತಿ. ಸಿಂಹಗಡ, ಪುರಂದರಗಡ ಕೋಟೆ ಗೆದ್ದು ಪ್ರತಾಪಗಡ ಕೋಟೆಯನ್ನು ನಿರ್ಮಿಸಿದನು.

ಶಿವಾಜಿಯ ಹೋರಾಟ ಉತ್ತರದ ಪ್ರಬಲ ಮೊಘಲರನ್ನು ಎದುರಿಸಿದ್ದು ಹಾಗೂ ದಕ್ಷಿಣದಲ್ಲಿ ಬಿಜಾಪುರದ ಆದಿಲ್ ಶಾಹಿಗಳನ್ನು ಸೋಲಿಸುವ ಮೂಲಕ ತನ್ನ ಶಕ್ತಿಯನ್ನು ಇಡೀ ಜಗತ್ತಿಗೆ ಸಾರಿದ ಮಹಾನ್ ವ್ಯಕ್ತಿ. ಬಿಜಾಪುರದ ಆದಿಲ್ ಶಾಹಿ ಸುಲ್ತಾನರ ವಿರುದ್ಧ ಹೋರಾಟವನ್ನು ಮಾಡಿ ಅಫ್ಜಲ್ ಖಾನ್ ನನ್ನು ತನ್ನ ವ್ಯಾಘ್ರ ನಖ ಎಂಬ ವಿಶೇಷ ಆಯುಧದಿಂದ ಕೊಂದುಹಾಕಿ ವೀರ ಘರ್ಜನೆ ಮಾಡಿದವನು.
ಶಿವಾಜಿಯ ಪ್ರಭಾವ ದಕ್ಷಿಣ ಮತ್ತು ಉತ್ತರ ಭಾರತದ ಎಲ್ಲೆಡೆ ಪ್ರಸಾರವಾಗಿ ಉತ್ತರದ ಮೊಘಲರ ದೊರೆ ಔರಂಗಜೇಬ್ ಶಿವಾಜಿಯನ್ನು ಅಡಗಿಸಲು ಷಯಿಸ್ತಾ . ಖಾನ್ ನನ್ನು ನೇಮಿಸಿ ಕಳುಹಿಸಿದನು. ಶಿವಾಜಿಯನ್ನು ಸೋಲಿಸಿ, ಪೂನಾದಲ್ಲಿ ಇದ್ದಾಗ ಶಿವಾಜಿ ತನ್ನದೇ ಆದ ವಿಶೇಷ ಯುದ್ಧ ತಂತ್ರವಾದ ಮದುವೆ ದಿಬ್ಬಣದ ದೇಶದಾರಿಯಾಗಿ ಪೂನಾ ಪ್ರವೇಶಿಸಿದ. ತನ್ನ ಸ್ವಗೃಹದಲ್ಲಿ ಇದ್ದ ಮೇಲೆ ಶಯಿಸ್ತಾ ಖಾನ್ ಮೇಲೆ ದಿಡೀರ್ ದಾಳಿ ಮಾಡಿದ ಶಿವಾಜಿಯದಾಳಿಯಲ್ಲಿ ತನ್ನ ಕೈಬೆರಳುಗಳನ್ನು ಕಳೆದುಕೊಂಡು ತಪ್ಪಿಸಿಕೊಂಡು ಓಡಿ ಹೋಗಿ ಹೋದದ್ದು ಇತಿಹಾಸ.

ಶಿವಾಜಿ ಅಡಗಿಸಲು ಔರಂಗಜೇಬ್ ನಿರಂತರ ಪ್ರಯತ್ನ ಮಾಡಿ ರಾಜ ಜಯ ಸಿಂಗ್ ನನ್ನು.ಕಳುಹಿಸಿದನು. ಶಿವಾಜಿಯನ್ನು ಸೋಲಿಸಿ ಹಲವಾರು ಕೋಟೆಗಳನ್ನು ವಶಪಡಿಸಿಕೊಂಡನು. ಶಿವಾಜಿ ಹಾಗೂ ಅವನ ಮಗ ಸಾಂಭಾಜಿಯನ್ನು ಆಗ್ರಾದ ಮೊಘಲರ ಆಸ್ಥಾನಕ್ಕೆ ಭೇಟಿ ಆಗುವಂತೆ ಮಾಡಿ ಔರಂಗಜೇಬನು ಶಿವಾಜಿಯನ್ನು ಅವಮಾನಗೊಳಿಸಿ ಬಂಧನಕ್ಕೆ ಒಳಪಡಿಸಿದಾಗ ಶಿವಾಜಿ ತನ್ನದೇ ಆದ ತಂತ್ರ ಹಾಗೂ ನಟನೆಯ ಮೂಲಕ ಹಣ್ಣಿನ ಬುಟ್ಟಿಯಲ್ಲಿ ತಪ್ಪಿಸಿಕೊಂಡು ಸನ್ಯಾಸಿಯ ವೇಷದಲ್ಲಿ ತನ್ನ ರಾಜ್ಯವನ್ನು ತಲುಪಿ ಇಡೀ ಜಗತ್ತೇ ನಿಬ್ಬೆರಗಾಗುವಂತೆ ಮಾಡಿದನು.

ಶಿವಾಜಿ ಹೋರಾಟ ಅವನ ಗೆರಿಲ್ಲ ತಂತ್ರಗಾರಿಕೆ ಇತಿಹಾಸದಲ್ಲಿ ವಿಶೇಷವಾದದ್ದು. ಶಿವಾಜಿ 1674 ಜೂನ್ 6 ರಂದು ಪಟ್ಟಾಭಿಷೇಕ ನೆರವೇರಿಸಿಕೊಂಡು ಛತ್ರಪತಿ ಎಂಬ ಬಿರುದನೊಂದಿಗೆ ಇಡೀ ಬ್ರಹ್ಮಾಂಡವೇ ಹೆಮ್ಮೆಪಡುವಂತಹ ಆಡಳಿತವನ್ನು ನಡೆಸಿದ ಮಹಾನ್ ವ್ಯಕ್ತಿ.
ಶಿವಾಜಿ ಆಡಳಿತ ಆತನ ಕೇಂದ್ರ ಮತ್ತು ಪ್ರಾಂತೀಯ ಆಡಳಿತಗಳು, ಕಂದಾಯ ಪದ್ಧತಿಗಳು, ಸೈನಿಕ ವ್ಯವಸ್ಥೆ ,ನ್ಯಾಯಾಂಗ ಪದ್ಧತಿ ಇಡೀ ಜಗತ್ತಿಗೆ ಮಾದರಿಯಾಗಿದೆ. ಭಾರತೀಯ ನೌಕಾಪಡೆಯ ಪಿತಾಮಹ ರಾಗಿ ನೌಕಾಪಡೆಯನ್ನು ಸಮೃದ್ಧ ಶ್ರೇಷ್ಠ ದೃಢಪಡೆಯನ್ನು ನಿರ್ಮಿಸಿದ ಕೀರ್ತಿ ಶಿವಾಜಿಗೆ ಸಲ್ಲುತ್ತದೆ . ಧಾರ್ಮಿಕ ಸಹಿಷ್ಣತೆ, ದಕ್ಷ ಮಿಲಿಟರಿ ತಂತ್ರ, ಮಹಿಳೆಯರ ರಕ್ಷಣೆ,. ಕೃಷಿಯ ಅಭಿವೃದ್ಧಿ, 300ಕ್ಕೂ ಹೆಚ್ಚು ಕೋಟೆಗಳ ಹೊಸ ಹಾಗೂ ನಿರ್ಮಾಣ ಮಾಡುವ ಮೂಲಕ ಶಿವಾಜಿಯ ಆಡಳಿತ ಸದಾಕಾಲ ಮಾದರಿಯಾದ ಮಾದರಿಯಾಗಿದೆ.

ಈತನ ಬಹುಮುಖ್ಯವಾದ ಗುಣ ಮಾತೃಭಕ್ತಿ, ಗುರುಭಕ್ತಿ, ರಾಷ್ಟ್ರಭಕ್ತಿ. ಪ್ರತಿಯೊಬ್ಬ ವ್ಯಕ್ತಿಗೂ ಶಿವಾಜಿಯಲ್ಲಿದ್ದ ಮತ್ತು ಗುರುಭಕ್ತಿ ಮತ್ತು ರಾಷ್ಟ್ರಭಕ್ತಿಯನ್ನು ಮೈಗೂಡಿಸಿಕೊಂಡಾಗ ಭಾರತ ಸಮೃದ್ಧ ರಾಷ್ಟ್ರವಾಗಿ ಅಭಿವೃದ್ಧಿಯ ದಿಕ್ಕಿನಲ್ಲಿ ಸಾಗುತ್ತದೆ. ಇಡೀ ಜಗತ್ತು ಹೆಮ್ಮೆ ಪಡಬಹುದಾದ ರೀತಿಯಲ್ಲಿ ಭಾರತವನ್ನು ನಿರ್ಮಿಸುವುದು ಯುವ ಸಮುದಾಯದ ಬಹುಮುಖ್ಯ ಕರ್ತವ್ಯವಾಗಿದೆ ಶಿವಾಜಿ ಮಹಾರಾಜರ ಇತಿಹಾಸ, ಧೈರ್ಯ, ಅಧ್ಯಯನ ಮಾಡುವ ಮೂಲಕ ಶ್ರೇಷ್ಠ ನಾಗರೀಕರಾಗಿ ಬದುಕುವ ಸಮಾಜಕ್ಕೆ ಮತ್ತು ರಾಷ್ಟ್ರಕ್ಕೆ ಅರ್ಪಿಸಿಕೊಳ್ಳುವ ದೃಢವಾದ ಕಾರ್ಯವನ್ನು ಶಿವಾಜಿ ಜಯಂತಿಯ ದಿನ ಸಂಕಲ್ಪ ಮಾಡೋಣ.

ವಿಶೇಷ ಲೇಖನ: ಸುರೇಶ್ ಎನ್ ಋಗ್ವೇದಿ, ಉಪನ್ಯಾಸಕರು, ಅಧ್ಯಕ್ಷರು., ಜೈಹಿಂದ್ ಪ್ರತಿಷ್ಠಾನ, ಚಾಮರಾಜನಗರ.
9902317670

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

https://kalpa.news/wp-content/uploads/2024/04/VID-20240426-WA0008.mp4

Tags: Kannada NewsKannada News LiveKannada News OnlineKannada News WebsiteKannada WebsiteLatest News KannadaNews in KannadaNews KannadaShivajiSpecial Articleವಿಶೇಷ ಲೇಖನಶಿವಾಜಿ
Share198Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

ಬದುಕಿನ ಪಯಣ | ಹಣತೆ ಹಚ್ಚುವ ಹತ್ತು ಪೈಸೆ ಮತ್ತು ಸಾರ್ಥಕತೆಯ ಹಾದಿ

Next Post

ಚನ್ನವೀರ ಕಣವಿಯವರು ಸಮನ್ವಯ ಸಾಹಿತ್ಯದ ಶ್ರೇಷ್ಠ ರಚನಾಕಾರರು: ಸುರೇಶ್ ಋಗ್ವೇದಿ

kalpa News

kalpa News

Next Post
ಚನ್ನವೀರ ಕಣವಿಯವರು ಸಮನ್ವಯ ಸಾಹಿತ್ಯದ ಶ್ರೇಷ್ಠ ರಚನಾಕಾರರು: ಸುರೇಶ್ ಋಗ್ವೇದಿ

ಚನ್ನವೀರ ಕಣವಿಯವರು ಸಮನ್ವಯ ಸಾಹಿತ್ಯದ ಶ್ರೇಷ್ಠ ರಚನಾಕಾರರು: ಸುರೇಶ್ ಋಗ್ವೇದಿ

Leave a Reply Cancel reply

Your email address will not be published. Required fields are marked *

No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL