ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ನಾಡಹಬ್ಬ ದಸರಾವನ್ನು #Dasara ನಗರದಲ್ಲಿ ಅದ್ದೂರಿಯಾಗಿ ಆಚರಿಸಿದ್ದು, ದೇವಾನುದೇವತೆಗಳ ಉತ್ಸವ ವೈಭವದಿಂದ ಸಾಗಿದೆ. ಹುತ್ತಾ ಕಾಲೋನಿಯ ಶ್ರೀ ಶ್ರೀನಿವಾಸ ದೇವಸ್ಥಾನದ ಬಳಿ ಮೆರವಣಿಗೆಗೆ ಶಾಸಕ ಬಿ.ಕೆ. ಸಂಗಮೇಶ್ವರ #MLA Sangameshwar ಅವರು ಚಾಲನೆ ನೀಡಿದರು.
ನಗರ ವ್ಯಾಪ್ತಿಯ ಎಲ್ಲಾ ದೇವಾಲಯಗಳ ದೇವರು, ನಾಡ ದೇವತೆ ಚಾಮುಂಡೇಶ್ವರಿ ತಾಯಿ ಮೂರ್ತಿ ಉತ್ಸವದಲ್ಲಿ ಸಾಗಿದ್ದು, ವಿವಿಧ ಕಲಾ ಪ್ರಕಾರಗಳು ಮೆರವಣಿಗೆಗೆ ಮೆರುಗು ನೀಡಿವೆ.
Also read: ಶಿವಮೊಗ್ಗ ದಸರಾ | ವೈಭವದ ಅಂಬಾರಿ ಮೆರವಣಿಗೆಗೆ ಚಾಲನೆ

ನಿನ್ನೆ ರಾತ್ರಿ ನಗರದಲ್ಲಿ ಸುರಿದ ಭಾರಿ ಮಳೆ ಬಹಳಷ್ಟು ಅವಾಂತರ ಸೃಷ್ಟಿಸಿದೆ. ಸಂಜೆ ವೇಳೆಗೆ ನಗರದಲ್ಲಿ ಭಾರಿ ಮೋಡ ಆವರಿಸಿದ್ದು, ಮಳೆ ಅಡ್ಡಿಯಾಗುವ ಆತಂಕ ಎದುರಾಗಿದೆ. ಪ್ರತಿ ವರ್ಷ ಮುಕ್ತಾಯವಾಗುವ ಸಮಯಕ್ಕೂ ಮುನ್ನವೇ ಈ ಭಾರೀ ಮುಕ್ತಾಯ ಆಗುವ ಸಾಧ್ಯತೆ ಇದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















Discussion about this post