ಕಲ್ಪ ಮೀಡಿಯಾ ಹೌಸ್ | ದಾವಣಗೆರೆ |
ಇಲ್ಲಿನ ಇಮಾಮ್ ನಗರದ ನಿವಾಸಿ ದುಗ್ಗೇಶಿ(32) ಎಂಬಾತನನ್ನು ಭೀಕರವಾಗಿ ಹತ್ಯೆ ಮಾಡಲಾಗಿದ್ದು, ತತಕ್ಷಣವೇ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು 24 ಗಂಟೆಯ ಅವಧಿಯೊಳಗೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಬಂಬೂಬಜಾರ್ ನಿವಾಸಿ ಗಣೇಶ (24), ಹಳೇಚಿಕ್ಕನಹಳ್ಳಿಯ ಅನಿಲ (18), ಶಿವಕುಮಾರ್ (25), ಭಾರತ್ ಕಾಲೋನಿಯ ಮಾರುತಿ (24) ಎಂದು ಗುರುತಿಸಲಾಗಿದೆ.
ಕೊಲೆ ಆರೋಪಿ ಗಣೇಶ್ ತನ್ನ ಸಂಬಂಧಿ ದುಗ್ಗೇಶಿ ಹೆಸರಿನಲ್ಲಿ ದಾವಣಗೆರೆಯ ಖಾಸಗಿ ಬ್ಯಾಂಕ್’ನಲ್ಲಿ ಇನ್ಸೂರೆನ್ಸ್ ಮಾಡಿಸಿದ್ದನು. ದುಗ್ಗೇಶಿಯನ್ನು ಕೊಲೆ ಮಾಡಿದರೆ 40 ಲಕ್ಷ ರೂಪಾಯಿ ಇನ್ಸೂರೆನ್ಸ್ ಹಣ ದೊರೆಯುತ್ತದೆ ಎಂದು ತನ್ನ ಗೆಳೆಯರೊಡಿನೆ ದುಗ್ಗೇಶಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಶವವನ್ನು ಅವನ ಮನೆಗೆ ತಂದು ಹಾಕಿದ್ದರು.
Also read: ಭದ್ರಾವತಿ ಪೊಲೀಸರ ಭರ್ಜರಿ ಬೇಟೆ | ಖತರ‍್ನಾಕ್ ಕಳ್ಳರ ಬಂಧನ | ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ವಶ
ಪ್ರಕರಣ ದಾಖಲಿಸಿಕೊಂಡ ಆಜಾದ್ ನಗರ ಪೊಲೀಸರು ಆರೋಪಿತರ ಪತ್ತೆಗಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯ ಕುಮಾರ ಎಂ. ಸಂತೋಷ್, ಜಿ. ಮಂಜುನಾಥ್, ನಗರ ಉಪ ವಿಭಾಗ ಡಿವೈಎಸ್ಪಿ ಮ¯್ಲೆÃಶ್ ದೊಡ್ಡಮನಿ ಮಾರ್ಗ ದರ್ಶನದಲ್ಲಿ ವೃತ್ತ ನಿರೀಕ್ಷಕ ಆರ್.ಜಿ. ಅಶ್ವಿನ್ ಕುರ್ಮಾ ಸಿಬ್ಬಂದಿಗಳ ತಂಡ ಕೃತ್ಯ ನಡೆದ 24 ಗಂಟೆಯೊಳಗೆ ನಾಲ್ವರನ್ನು ಬಂಧಿಸಿ, ಕೃತ್ಯಕ್ಕೆ ಉಪಯೋಗಿಸಿದ ಪಲ್ಸರ್ ಬೈಕ್ ವಶಪಡಿಸಿಕೊಂಡಿದ್ದಾರೆ.
ಆರೋಪಿ ಗಣೇಶ್ ಮೃತ ದುಗ್ಗೇಶ್ ಹೆಸರಲ್ಲಿ ದಾವಣಗೆರೆಯ ಖಾಸಗಿ ಬ್ಯಾಂಕ್ ನಲ್ಲಿ ಇನ್ಸೂರೆನ್ಸ್ ಬಾಂಡ್ ಮಾಡಿಸಿದ್ದು, ಕೊಲೆ ಮಾಡಿದರೆ ಬಾಂಡ್ ಮೊತ್ತ 40 ಲಕ್ಷ ರೂಪಾಯಿ ಬರುತ್ತದೆ ಎಂದು ತನ್ನ ಸ್ನೇಹಿತರ ಜೊತೆ ಸೇರಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾನೆ.
ಕೊಲೆ ನಡೆದ 24 ಗಂಟೆಯೊಳಗೆ ಕ್ಷಿಪ್ರ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಉಮಾ ಪ್ರಶಾಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post