No Result
View All Result
ಒಂದು ವರ್ಷ ಪೂರ್ಣಗೊಳಿಸಿದ ಹೆಣ್ಣೂರು ಸ್ಪರ್ಶ್ ಆಸ್ಪತ್ರೆ | ಮಲ್ಟಿಸ್ಪೆಷಾಲಿಟಿ ಆರೈಕೆಯ ಪ್ರತಿಬಿಂಬ
English Articles

Hennur Sparsh Hospital Completes One Year | A Reflection of Multispecialty Care

by ಕಲ್ಪ ನ್ಯೂಸ್
May 25, 2026
0

Kalpa Media House  |  Bengaluru  | SPARSH Hospital, Hennur Road has completed one year of operations, with its first-year clinical...

Read moreDetails
ಸ್ಯಾಂಡಲ್ವುಡ್ ಸಲಗ-ರಚಿತಾ ರಾಮ್ ನಟಿಸಿರುವ ‘ಲ್ಯಾಂಡ್ ಲಾರ್ಡ್’ ಇದೇ ಶನಿವಾರ ಜೀ ಕನ್ನಡದಲ್ಲಿ

Duniya Vijay, Rachita Ram & Raj B. Shetty’s Landlord Premieres This Saturday on Zee Kannada

May 22, 2026
ನೇಮಕಾತಿ ಪ್ರಕ್ರಿಯೆ ಕಠಿಣ | ತೆರೆಮರೆಯ ಪ್ರತಿಭೆಗಳನ್ನು ಹುಡುಕಲು ಎಐ ಮೊರೆ: ಲಿಂಕ್ಡ್‌ ಇನ್

LinkedIn shares Bengaluru’s Top Companies for career growth in 2026

May 20, 2026
GE Aerospace to Invest ₹100 Crore in Pune Facility, Boosting India Manufacturing

GE Aerospace to Invest ₹100 Crore in Pune Facility, Boosting India Manufacturing

May 20, 2026
Marriott Bonvoy Expands ICC Partnership to Include Women’s T20 World Cup 2026

Marriott Bonvoy Expands ICC Partnership to Include Women’s T20 World Cup 2026

May 19, 2026
  • Advertise With Us
  • Grievances
  • About Us
  • Contact Us
Tuesday, May 26, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಆನಂದ ಕಂದ

ರಾಮನಂತಿದ್ದರೆ ಆರಾಮ 

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
November 28, 2024
in ಆನಂದ ಕಂದ
0
ರಾಮನಂತಿದ್ದರೆ ಆರಾಮ 
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಆನಂದಕಂದ ಲೇಖನ ಮಾಲಿಕೆ-15  |
ನಾವೆಲ್ಲರೂ ರಾಮನನ್ನು ಆದರ್ಶ ಪುರುಷರನ್ನಾಗಿಸಿಕೊಂಡಿದ್ದೇವೆ. ರಾಜ್ಯವೆಂದರೆ ರಾಮರಾಜ್ಯ! ಮಗನಿದ್ದರೆ ರಾಮನಂಥ ಮಗನಿರಬೇಕು ಎಂದು ಈಗಲೂ ಜನರೆನ್ನುತ್ತಾರೆ. ರಾಮ ಕೇವಲ ದೇವರಾಗಿ ಉಪದೇಶ ಮಾಡದೆ ಮನಷ್ಯನಾಗಿ ನಮ್ಮೊಡನೆದ್ದು ಅನೇಕ ಪಾತ್ರಗಳಲ್ಲಿ ತಾನೇ ನಡೆದು ತೋರಿಸಿದ್ದಾನೆ.

ಮಗನಾಗಿ ರಾಮ-ಪಿತೃವಾಕ್ಯ ಪರಿಪಾಲಕ 
ರಾಮನು ದಶರಥನಿಗೆ ಪ್ರೀತಿಯ ದಾಶರಥಿ ಯಾಗಿ ತಂದೆಯ ಮಾತಿಗೆ ಎಂದೂ ತಪ್ಪದೆ, ಅತ್ಯಂತ ಪ್ರೀತಿ ಗೌರವಗಳಿಂದ ನಡೆದುಕೊಂಡ.  ತನಗೆ ರಾಜನ ಪಟ್ಟವಿಲ್ಲವೆಂದು ತಿಳಿದಾಗಲೂ, ತಂದೆಯ ಮೇಲೆ ಅದೇ ಪ್ರೀತಿ ಗೌರವದಿಂದಲೇ ಇದ್ದ. ಅಬ್ಬಾ! ರಾಮ ಎಂಥಾ ಅಚ್ಚರಿ. ಇಂದಿನ ಸಿನಿಮಾ ಧಾರವಾಹಿಗಳಲ್ಲಿ ತೋರಿಸುವಂತೆ, ನಮಗೆ ಬೇಕಾದ ವಸ್ತು ಸಿಗಲಿಲ್ಲ ಎಂದರೆ ಮನೆಯ ವಸ್ತುಗಳನ್ನೆಲ್ಲ ಹಾಳುಮಾಡಿ, ಸಿಕ್ಕಲ್ಲಿ, ಸಿಕ್ಕಿದ್ದನ್ನೆಲ್ಲ ಎಸೆದು ಹಠ ಮಾಡುವ ನಾವೆಲ್ಲಿ? ಕಾಡಿಗೆ ಹೋಗಬೇಕಾಗಿ ಬಂದಾಗಲೂ ಮುಖದಲ್ಲಿ ಸಣ್ಣ ಬೇಸರದ ಗೆರೆಯೂ ಇಲ್ಲದೆ ತಂದೆ ಮಾತನ್ನು ನಡೆಸಲು ಹೆಮ್ಮೆಯಿಂದಲೇ ಕಾಡಿಗೆ ಹೊರಟ ರಾಮನೆಲ್ಲಿ? ಇದಕ್ಕಾಗಿಯೇ ರಾಮ ಆದರ್ಶವಾಗಿ ನಿಲ್ಲುವುದು. ರಾಮನನ್ನು ಕಾಡಿಗೆ ಕಳುಹಿಸಿದಳೆಂದು ಕೈಕೇಯಿ ಮೇಲೆ ಕೋಪಗೊಂಡ ಭರತನು ಆಕೆಯನ್ನು ನಿಂದಿಸುವಾಗ “ತಾಯಿ ಕೈಕೇಯಿಯನ್ನು ಎಂದಿಗೂ ನಿಂದಿಸಕೂಡದು, ನಿಂದಿಸಿದ ಪಕ್ಷದಲ್ಲಿ ನಿನ್ನ ಮುಖವನ್ನು ನಾನು  ನೋಡುವುದಿಲ್ಲ” ಎಂದು ಶ್ರೀರಾಮ ಭರತನನ್ನು ತಡೆಯುವ ಮೂಲಕ ಎಚ್ಚರಿಸುತ್ತಾನೆ.ರಾಜನಾಗಿ ರಾಮ
ರಾಮನು ಪ್ರಜೆಗಳನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ. ಪ್ರಜೆಗಳಲ್ಲಿ ಯಾರಿಗಾದರೂ ತೊಂದರೆ ಉಂಟಾದರೆ ತಾನೇ ಖುದ್ದಾಗಿ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದ. ಮಕ್ಕಳ ಸಂತೋಷವನ್ನು ತಂದೆ ಅನುಭವಿಸುವಂತೆ ಪ್ರಜೆಗಳ ಸಂತೋಷವನ್ನು ತಾನು ಪ್ರೀತಿಯಿಂದ ಜೊತೆಗಿದ್ದು ಸವಿಯುತ್ತಿದ್ದ. ವೇಷ ಮರೆಸಿಕೊಂಡು ಪ್ರಜೆಗಳ ಮಧ್ಯೆ ಓಡಾಡಿ, ಅವರ ಕಷ್ಟ ಸುಖಗಳನ್ನು ತಿಳಿಯುತ್ತಿದ್ದ, ತಿಳಿದು ದುಃಖಗಳನ್ನು ತಿಳಿಗೊಳಿಸುತ್ತಿದ್ದ.

ರಾಮನು ಪತಿಯಾಗಿ
ರಾಮನು ಸೀತೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ತಾನು ಕಾಡಿಗೆ ಹೊರಟುನಿಂತಾಗ ತಾನೂ ಬರುವುದಾಗಿ ಹಠ ಹಿಡಿದ ಸೀತೆಯನ್ನು ಬಗೆ ಬಗೆಯಾಗಿ ತಡೆದ. ಆದಾಗ್ಯೂ ಕೇಳದ ಸೀತೆಯು ಲಕ್ಷ್ಮಣ ರಾಮನೊಡನೆ ಕಾಡಿಗೆ ಹೊರಟಳು. ಮತ್ತೆ ಶೂರ್ಪನಖಿ ಬಂದಾಗಲೂ ಮರ್ಯಾದಾಪುರುಷೋತ್ತಮನಾದ ಶ್ರೀರಾಮ ತಾನು ಏಕಪತ್ನಿ ವ್ರತಸ್ಥ ಎಂದು ಆಕೆಯನ್ನು ತಡೆದ. ಅಶ್ವಮೇಧ ಯಜ್ಞದ ಪ್ರಸಂಗ ಬಂದಾಗ ಬೇರೆ ವಿವಾಹವಾಗದೆ ಬಂಗಾರದ ಸೀತೆಯನ್ನು ಮಾಡಿ ಪಕ್ಕದಲ್ಲಿ ಇರಿಸಿಕೊಂಡು ಯಾಗ ಮಾಡಿದನು. ಸೀತೆ ಜೊತೆಯಲ್ಲಿದ್ದಾಗಲೂ ಇಲ್ಲದಿದ್ದಾಗಲೂ ರಾಮನು ಸೀತಾಪತಿಯಾಗಿಯೇ ಇದ್ದ.ಅಣ್ಣನಾಗಿ ರಾಮ
ರಾಮ ಕಾಡಿಗೆ ಹೋಗಬೇಕಾಗಿ ಬಂದಾಗ ಭರತನ ಬಗ್ಗೆ ಕೊಂಕು ಮಾತು ಆಡಲಿಲ್ಲ. ಕಾಡಿನಲ್ಲಿ ಲಕ್ಷ್ಮಣನಿಗಾಗಿ ಕಾಳಜಿ ವಹಿಸಿದ. ಮಾರೀಚ ವಧೆ ಸಂದರ್ಭದಲ್ಲಿ ಮೊದಲೇ ಸೀತೆಯಿಂದ ಬೈಸಿಕೊಂಡು ಬಂದ ಲಕ್ಷ್ಮಣನ ಮನಸ್ಸಿಗೆ ಇನ್ನಷ್ಟು ನೋವಾದೀತು ಎಂದು ಯೋಚಿಸಿದ ರಾಮ, ಸೀತೆಯನ್ನು ಬಿಟ್ಟು ನೀನೇಕೆ ಇಲ್ಲಿ ಬಂದೆ? ಎಂದು ಒಮ್ಮೆ ಮಾತ್ರ ಕೇಳಿದ ಹೊರತೂ ಮತ್ತೆಂದೂ ಆತನನ್ನು ನಿಂದಿಸಲಿಲ್ಲ. ಈಗಂತೂ ಮಕ್ಕಳು ಪರೀಕ್ಷೆಯಲ್ಲಿ ಚೆನ್ನಾಗಿ ಅಂಕ ಪಡೆಯಲಿಲ್ಲವೆಂದರೆ ಮಕ್ಕಳನ್ನು ಪರಿಪರಿಯಾಗಿ ನಿಂದಿಸುತ್ತಾರೆ. ಒಮ್ಮೆಯಾದರೂ ಮಗುವಿನ ಜಾಗದಲ್ಲಿ ನಿಂತು ಯೋಚಿಸಿ ನಿರ್ಣಯಿಸಬೇಕಲ್ಲವೇ? ರಾಮನು  ಕೊನೆಯ ತನಕವೂ ಲಕ್ಷಮಣನಿಗೆ ‘ನಿನ್ನಿಂದ ಹೀಗಾಯಿತು‘ ಎಂದು ಮಾತಿನಿಂದ ತಿವಿಯಲಿಲ್ಲ.

ಹೀಗೆ ರಾಮಚಂದ್ರನು ಸೂರ್ಯವಂಶದಲ್ಲಿ ಬಂದ ಬೆಳದಿಂಗಳು. ಈ ಲೇಖನದಲ್ಲಿ ರಾಮಚಂದ್ರನ ಹಲವಾರು ಮುಖಗಳ ಪರಿಚಯವನ್ನು ಮಾಡುವ ಪ್ರಯತ್ನವನ್ನು ಮಾಡಿದ್ದೇನೆ. ರಾಮನು ಎಲ್ಲಾ ಪಾತ್ರಗಳನ್ನೂ ಪರಿಪೂರ್ಣವಾಗಿ, ಸಮರ್ಥವಾಗಿ ನಿರ್ವಹಿಸುತ್ತಾನೆ. ಇದಕ್ಕೇ ರಾಮನೊಬ್ಬ ಆದರ್ಶ ವ್ಯಕ್ತಿಯಾಗಿ ನಿಂತ. ರಾಮಾಯಣವನ್ನು ಈ ನಿಟ್ಟಿನಲ್ಲಿ ಓದಿ, ಅದರಂತೆ ಜೀವನದಲ್ಲಿ ರಾಮನ ಆದರ್ಶಗಳನ್ನು ಅಳವಡಿಸಿಕೊಳ್ಳೋಣ. ಇದಕ್ಕೆ ಪೂರಕವಾಗಿಯೇ ಅಯೋಧ್ಯಾಪತಿ ಶ್ರೀರಾಮಚಂದ್ರ ನಮಗಾಗಿ 500 ವರ್ಷಗಳ ನಂತರ ಮತ್ತೆ ಭಾರತದ ಅಸ್ಮಿತೆಯ ಮೂರ್ತರೂಪವಾಗಿ ಬಾಲರೂಪದಲ್ಲಿ ಪ್ರತಿಷ್ಠಾಪನೆಗೊಂಡಿದಾನೆ. ರಾಮನಂತಹ ರಾಜನ ಸಂರಕ್ಷಣೆಯಲ್ಲಿ ನಾವೆಲ್ಲರೂ ಸುರಕ್ಷಿತವಾಗಿದ್ದೇವೆ. “ರಾಜಾ ಕಾಲಸ್ಯ ಕಾರಣಂ” ಎಂಬ ಮಾತು ಸತ್ಯಗೊಳಿಸುವಲ್ಲಿ ನಾವು ಕಂಕಣಬದ್ಧರಾಗಬೇಕಿದೆ. ಆತನ ಆದರ್ಶಗುಣಗಳನ್ನು ಅಳವಡಿಸಿಕೊಂಡು ರಾಮನೆಂದರೆ ಭರತ, ಭಾರತವೆಂದರೆ ರಾಮ ಎಂಬ ಘೋಷವನ್ನು ಜಗತ್ತಿನಾದ್ಯಂತ ಮೊಳಗಿಸುವಲ್ಲಿ ಕಾರ್ಯರತರಾಗಬೇಕಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

http://kalpa.news/wp-content/uploads/2024/04/VID-20240426-WA0008.mp4

Kalahamsa Infotech private limited

Tags: AnandakandaAnandavana GurukulaAyodhyaBharataKannada News WebsiteLatest News KannadaLord RamaRamaRama Articleಆದರ್ಶಆನಂದಕಂದದಶರಥರಾಮರಾಮರಾಜ್ಯಲೇಖನ ಮಾಲಿಕೆ
Share196Tweet123Send
Previous Post

ಬಳ್ಳಾರಿಯಲ್ಲಿ ನಿಲ್ಲದ ಬಾಣಂತಿಯರ ಸಾವಿನ ಸರಣಿ | ವ್ಯಾಪಕ ಆಕ್ರೋಶ

Next Post

ಘೋರಾತಿಘೋರ | ಆಸ್ಪತ್ರೆ ಟಾಯ್ಲೆಟ್’ನಲ್ಲಿ ನವಜಾತ ಶಿಶು ಎಸೆದು ಫ್ಲಶ್ ಮಾಡಿದ ರಾಕ್ಷಸರು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಘೋರಾತಿಘೋರ | ಆಸ್ಪತ್ರೆ ಟಾಯ್ಲೆಟ್’ನಲ್ಲಿ ನವಜಾತ ಶಿಶು ಎಸೆದು ಫ್ಲಶ್ ಮಾಡಿದ ರಾಕ್ಷಸರು

ಘೋರಾತಿಘೋರ | ಆಸ್ಪತ್ರೆ ಟಾಯ್ಲೆಟ್'ನಲ್ಲಿ ನವಜಾತ ಶಿಶು ಎಸೆದು ಫ್ಲಶ್ ಮಾಡಿದ ರಾಕ್ಷಸರು

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಹೋರಾಟ ಬೆಂಬಲಿಸಿದ ಎಂಪಿ ರಾಘವೇಂದ್ರ ಹೇಳಿದ್ದೇನು?

ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಹೋರಾಟ ಬೆಂಬಲಿಸಿದ ಎಂಪಿ ರಾಘವೇಂದ್ರ ಹೇಳಿದ್ದೇನು?

May 26, 2026
ವಿಧಾನಪರಿಷತ್ ಚುನಾವಣೆ ದಿನಾಂಕ ಪ್ರಕಟ | ಚುನಾವಣಾ ವೇಳಾಪಟ್ಟಿ ಇಲ್ಲಿದೆ

ವಿಧಾನಪರಿಷತ್ ಚುನಾವಣೆ ದಿನಾಂಕ ಪ್ರಕಟ | ಚುನಾವಣಾ ವೇಳಾಪಟ್ಟಿ ಇಲ್ಲಿದೆ

May 26, 2026
ದುಬೈನಲ್ಲಿ ಭೀಕರ ರಸ್ತೆ ಅಪಘಾತ | ಕರಾವಳಿಯ ಭರತನಾಟ್ಯ ಶ್ರೀಲತಾ ತಂತ್ರಿ ನಿಧನ

ದುಬೈನಲ್ಲಿ ಭೀಕರ ರಸ್ತೆ ಅಪಘಾತ | ಕರಾವಳಿಯ ಭರತನಾಟ್ಯ ಶ್ರೀಲತಾ ತಂತ್ರಿ ನಿಧನ

May 26, 2026
90 ವರ್ಷದ ವೃದ್ಧೆಯನ್ನೂ ಬಿಡದ ಕಾಮುಕರು | ನಾಲ್ವರು ಮುಸುಕುಧಾರಿಗಳಿಂದ ಅತ್ಯಾಚಾರ

6 ವರ್ಷದ ಬಾಲಕಿಯ ಮೇಲೆ 9ನೇ ತರಗತಿ ವಿದ್ಯಾರ್ಥಿಯಿಂದ ಅತ್ಯಾಚಾರ

May 26, 2026
ಶಿವಮೊಗ್ಗ | ಜಾನುವಾರುಗಳಿಗೆ ಸಿಟಿ ಬಸ್ ಡಿಕ್ಕಿ | ಕರು ಸಾವು | ಹಲವು ಕರುಗಳಿಗೆ ಗಾಯ

ಶಿವಮೊಗ್ಗ | ಜಾನುವಾರುಗಳಿಗೆ ಸಿಟಿ ಬಸ್ ಡಿಕ್ಕಿ | ಕರು ಸಾವು | ಹಲವು ಕರುಗಳಿಗೆ ಗಾಯ

May 26, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL