ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಇಲ್ಲಿನ ಹಳೇನಗರದ ಶ್ರೀ ರಾಮೇಶ್ವರ ಮತ್ತು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಡಿ.7ರ ಶನಿವಾರ ಶ್ರೀ ಸುಬ್ರಹ್ಮಣ್ಯ ಷಷ್ಠಿ ಉತ್ಸವವನ್ನು ಆಯೋಜಿಸಲಾಗಿದೆ.
ಶನಿವಾರ ಬೆಳಗ್ಗೆ 7 ಗಂಟೆಗೆ ಶ್ರೀ ಸ್ವಾಮಿಯವರಿಗೆ ಪಂಚಾಮೃತ ಅಭಿಷೇಕ ಮತ್ತು ಮಹನ್ಯಾಸ ಪೂರ್ವಕ ರುದ್ರಾಭಿಷೇಕ ನಂತರ ವಿಶೇಷ ಅಲಂಕಾರ ನಡೆಯಲಿದೆ.
Also read: ಈಶ್ವರಪ್ಪರಿಗೆ ಮತ್ತೊಂದು ಸಂಕಷ್ಟ | ಕೋಟೆ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲು
ಬೆಳಗ್ಗೆ 9 ಗಂಟೆಯಿಂದ ಶ್ರೀ ಸುಬ್ರಹ್ಮಣ್ಯ ಮೂಲಮಂತ್ರದಿಂದ ಹೋಮ ನಡೆಯಲಿದ್ದು, 10 ಗಂಟೆಗೆ ರಾಜಬೀದಿ ಉತ್ಸವ ನಡೆಯಲಿದೆ. ನಂತರ ಪೂರ್ಣಾಹುತಿ, ಬ್ರಹ್ಮಚಾರಿಗಳ ಪೂಜೆ ಹಾಗೂ ಮಹಾಮಂಗಳಾರತಿ ನಡೆಯಲಿದೆ.
ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಅದ್ವೈತ ವಾಚಸ್ಪತಿ ಕೃಷ್ಣಮೂರ್ತಿ ಸೋಮಯಾಜಿ ಅವರ ನೇತೃತ್ವದಲ್ಲಿ ನಡೆಯಲಿದೆ.
ಶ್ರೀ ಸುಬ್ರಹ್ಮಣ್ಯ ಹೋಮದ ಸಂಕಲ್ಪ ಮಾಡಿಸುವುದರಿಂದ ವಿವಾಹ ಪ್ರಾಪ್ತಿ, ಸಂತಾನ ಪ್ರಾಪ್ತಿ, ಗ್ರಹದೋಷ ನಿವಾರಣೆ, ಆರೋಗ್ಯ ಪ್ರಾಪ್ತಿ, ಚರ್ಮವ್ಯಾದಿ ಹಾಗೂ ದುಷ್ಟಾರಿಷ್ಟ ನಿವಾರಣೆ ಹಾಗೂ ಇತರ ದೋಷಗಳು ನಿವಾರಣೆಯಾಗಲಿದೆ. ಹೀಗಾಗಿ, ಭಕ್ತರು ಈ ಎಲ್ಲಾ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲಯ ಸಮಿತಿಯ ಪ್ರಮುಖರು ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post