No Result
View All Result
Deeksha Brahmavara | A Divine Synergy of Artistic Excellence and Intellectual Brilliance
English Articles

Deeksha Brahmavara | A Divine Synergy of Artistic Excellence and Intellectual Brilliance

by ಕಲ್ಪ ನ್ಯೂಸ್
February 10, 2026
0

Kalpa Media House  |  Special Article: Satish Shetty Cherkadi Doddamane  | The coastal soil of Karnataka is fertile with art, but...

Read moreDetails
ಬೇಸಿಗೆಯಲ್ಲಿ ಗಂಟಲು ಒಣಗುತ್ತಿದೆಯೇ? ಧ್ವನಿ ಗರಗರಿಸುತ್ತಿದೆಯೇ? ಹಾಗಾದರೆ ಹೀಗೆ ಮಾಡಿ | ತಜ್ಞರ ಸಲಹೆ

Stay Hydrated to Protect Your Voice This Summer: ENT Expert Advice

February 10, 2026
Mysore – Shivamogga Express Big Update on this Date | Must Read

Mysore – Shivamogga Express Big Update on this Date | Must Read

February 9, 2026
Union Minister V. Somanna Flagged Off New Demu Train Services Between Dandeli – Alnavar

Union Minister V. Somanna Flagged Off New Demu Train Services Between Dandeli – Alnavar

February 9, 2026
ಡಯಾಲಿಸಿಸ್ ಅಂತಿಮವಲ್ಲ | ಮೃತ ದಾನಿದಾರ ಕಿಡ್ನಿಯಿಂದ ರೋಗಿಗೆ ಹೊಸ ಬದುಕು

A Second Chance at Life Through Deceased Organ Donation

February 3, 2026
  • Advertise With Us
  • Grievances
  • About Us
  • Contact Us
Wednesday, February 11, 2026
Follow Us
kalpa.news
">
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಶಿವಮೊಗ್ಗ | ಪಾಲಿಕೆ ಬಜೆಟ್ ಸಲಹೆ ಸಭೆ | ಸಮಸ್ಯೆಗಳ ಬಗ್ಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಆಕ್ರೋಶ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
December 6, 2024
in ಶಿವಮೊಗ್ಗ
0
ಶಿವಮೊಗ್ಗ | ಪಾಲಿಕೆ ಬಜೆಟ್ ಸಲಹೆ ಸಭೆ | ಸಮಸ್ಯೆಗಳ ಬಗ್ಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಆಕ್ರೋಶ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  |

ಇಂದಿನ ಬಜೆಟ್ ಸಲಹೆ ಸಭೆಯಲ್ಲಿ ಕಳೆದ 10 ವರ್ಷಗಳಿಂದ ಪಾಲಿಕೆಯ ವ್ಯಾಪ್ತಿಯಲ್ಲಿ ಸಾರ್ವಜನಿಕರು ಅನುಭವಿಸುತ್ತಿರುವ ನೂರಾರು ಸಮಸ್ಯೆಗಳ ಬಗ್ಗೆ ಪ್ರತಿ ವರ್ಷ ಪ್ರಸ್ತಾಪಿಸುತ್ತಿದ್ದರೂ ಪಾಲಿಕೆಯ ಅಧಿಕಾರಿಗಳು ಯಾವುದೇ ಸ್ಪಂದನೆ ನೀಡದಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

ಮಹಾನಗರ ಪಾಲಿಕೆಯು ಆಯುಕ್ತ ಡಾ. ಕವಿತಾ ಯೋಗಪ್ಪನವರ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ 2025-26ನೇ ಸಾಲಿನ ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆಯ ಆರಂಭದಲ್ಲಿ ಸಭೆಯು ಬಜೆಟ್ ಸಂಬಂಧಿಸಿದಂತೆ ಚರ್ಚೆ, ಸಲಹೆಗಳಿಂದ ವಿಮುಖಗೊಂಡು ಕುಂದುಕೊರತೆ ಸಭೆಯಾಗಿ ಮಾರ್ಪಾಟಿತು.

ನಾಗರೀಕ ಹಿತಾರಕ್ಷಣಾ ಸಮಿತಿಯ ಸಂಘಟನ ಕಾರ್ಯದರ್ಶಿ ಡಾ.ಸತೀಶ್‍ಕುಮಾರ್ ಶೆಟ್ಟಿ ಮಾತನಾಡಿ, ಕಳೆದ 10-15 ವರ್ಷಗಳಿಂದ ಈ ಸಭೆಯಲ್ಲಿ ಸಾರ್ವಜನಿಕರು ನಗರದ ಸಮಸ್ಯೆಗಳ ಬಗ್ಗೆ ಸಲಹೆ ಸೂಚನೆಗಳನ್ನು ನೀಡುತ್ತಲೇ ಬಂದಿದ್ದಾರೆ. ಆದರೆ ಯಾವ ಸಮಸ್ಯೆಯು ಬಗೆಹರಿಯದೆ ಹಾಗೆಯೇ ಉಳಿದುಕೊಂಡಿದೆ. ಆದ್ಯತೆ ಮೇರೆಗೆ ಸಮಸ್ಯೆಗಳ ಪರಿಹಾರಕ್ಕೆ ಪಾಲಿಕೆ ಕಾರ್ಯೋನ್ಮುಖವಾಗಬೇಕೆಂದು ಸಲಹೆ ನೀಡಿದರು.

ಪ್ರಮುಖವಾಗಿ ನಗರದ ಹಸಿರೀಕರಣ, ಸ್ವಚ್ಛತೆ, ಹೈಜನಿಕ್ ವ್ಯವಸ್ಥೆ, ಪ್ರತ್ಯೇಕ ಮೀನು ಮಾರುಕಟ್ಟೆ, ಪಾಲಿಕೆಯಿಂದ ಸ್ಮಶಾನ ಅಭಿವೃದ್ಧಿ ಮೊದಲಾದವುಗಳಿಗೆ ಆದ್ಯತೆ ಮೇರೆಗೆ ಅನುದಾನ ನೀಡಿ, ಅವುಗಳನ್ನು ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಲಾಗಿತ್ತು. ಆದರೆ ಯಾವ ಯಾವ ಕಾಮಗಾರಿಗಳಿಗೆ ಎಷ್ಟು ಹಣ ಬಿಡುಗಡೆಯಾಗಿದೆ, ಎಷ್ಟು ಹಣ ವೆಚ್ಚ ಮಾಡಲಾಗಿದೆ ಎಂಬುದರ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ನೀಡದೇ, ಇಂದಿನ ಸಭೆಯನ್ನು ಕರೆದಿರುವುದು ಸಮಂಜಸವಲ್ಲ ಎಂದರು.
ಇದೇ ಸಂದರ್ಭದಲ್ಲಿ ನಗರದ ಅಭಿವೃದ್ಧಿಗೆ ಪೂರಕವಾದ ಕಾಮಗಾರಿ ಪಟ್ಟಿಯನ್ನು ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳು ಪಾಲಿಕೆ ಆಯುಕ್ತರಿಗೆ ಪುನಃ ಸಲ್ಲಿಸಿದರು.

ಇತ್ತೀಚೆಗೆ ನಗರದಲ್ಲಿ ಕಲುಷಿತ ಕುಡಿಯುವ ನೀರು ಸರಬರಾಜು ಮಾಡುವ ಮೂಲಕ ಜನರ ಅನಾರೋಗ್ಯಕ್ಕೆ ಕಾರಣವಾದ ಪಾಲಿಕೆ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಮತ್ತು ನೀರು ಶುದ್ಧೀಕರಣಕ್ಕೆ ತಂತ್ರಜ್ಞಾನ ಅವಳವಡಿಸಿಕೊಳ್ಳಲು ಅನುದಾನ ಮೀಸಲಿಡುವಂತೆ ನಾಗರೀಕ ಹಿತರಕ್ಷಣಾಸಮಿತಿಯ ಡಾ. ಸತೀಶ್ ಕುಮಾರ್ ಶೆಟ್ಟಿ ಆಗ್ರಹಿಸಿದರೆ ಅವರದ್ದೇ ಸಂಘಟನೆಯ ಪದಾಧಿಕಾರಿಗಳು ಕನ್ಸರ್ ವೆನ್ಸಿಗಳಲ್ಲಿ, ರಾಜಕಾಲುವೆಗಳಲ್ಲಿ ಕಾನೂನುಬಾಹಿರ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದ್ದು ಪಾಲಿಕೆ ಕಣ್ಮುಚ್ಚಿಕುಳಿತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Also read: ಈಶ್ವರಪ್ಪರಿಗೆ ಮತ್ತೊಂದು ಸಂಕಷ್ಟ | ಕೋಟೆ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲು

ನಾಗರಿಕ ಹಿತ ಸಮಿತಿಯ ಕಾರ್ಯದರ್ಶಿ ಎಸ್.ಬಿ. ಅಶೋಕ್‍ ಕುಮಾರ್ ಮಾತನಾಡಿ, ಕನ್ಸರ್‍ವೆನ್ಸಿಗಳಲ್ಲಿ ಅನೇಕ ಕಡೆ ಅನಧಿಕೃತ ಕಟ್ಟಡಗಳು ನಿರ್ಮಾಣವಾಗುತ್ತಿವೆ. ಕೆಲವೆಡೆ ಮೂತ್ರ ವಿಸರ್ಜನೆ ಇತ್ಯಾದಿಗಳಿಂದಾಗಿ ಓಡಾಡಲು ಆಗುತ್ತಿಲ್ಲ. ನಗರದಲ್ಲಿ 6 ವಾಣಿಜ್ಯ ಸಂಕೀರ್ಣಗಳು ಇದ್ದು, ಬಹುತೇಕ ಖಾಲಿ ಬಿದ್ದಿವೆ. ನಗರ ಮಧ್ಯದಲ್ಲಿ ಇರುವ ದೇವರಾಜ್ ಅರಸ್ ವಾಣಿಜ್ಯ ಸಂಕೀರ್ಣ ಸಂಪೂರ್ಣ ಪಾಳು ಬಿದ್ದಿದ್ದು, ಅದರ ಸದ್ಭಳಕೆ ಪಾಲಿಕೆ ಮುಂದಾಗಬೇಕು ಎಂದು ಆಗ್ರಹಿಸಿದರು. ನಗರ ಮಧ್ಯದಲ್ಲಿ ರಾಜಕಾಲುವೆ ಮೇಲೆಯೇ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಿದ್ದು, ಇದು ಕಾನೂನು ಬಾಹಿರವಾಗಿದೆ. ಸಂಬಂಧಿಸಿದ ಅಧಿಕಾರಿ, ಇಂಜಿನಿಯರ್ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಆದಿಜಾಂಬವ ಸಂಘದ ಕಾರ್ಯದರ್ಶಿ ಶಿವಲಿಂಗಪ್ಪ ಅವರು ಮಾತನಾಡಿ, ಅಂಬೇಡ್ಕರ್ ಭವನದ ಅವ್ಯವಸ್ಥೆಯ ಆಗರವಾಗಿದೆ. ಪಾಲಿಕೆ ಅಥವಾ ಜಿಲ್ಲಾಡಳಿತಕ್ಕೆ ನಿರ್ವಹಣೆ ಸಾಧ್ಯವಾಗದಿದ್ದರೆ ನಮ್ಮ ಸಂಘಟನೆಗೆ ಜವಾಬ್ದಾರಿ ಕೊಡಿ, ನಾವೇ ಸ್ವಚ್ಚವಾಗಿಟ್ಟುಕೊಳ್ಳುತ್ತೇವೆ. ಅಂಬೇಡ್ಕರ್ ಭವನದ ಬಗ್ಗೆ ನಮಗೆ ಒಂದು ಭಾವನಾತ್ಮಕ ಸಂಬಂಧವಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು ಅಂಬೇಡ್ಕರ್ ಭವನ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿದ್ದು, ಅದನ್ನು ಪಾಲಿಕೆ ವ್ಯಾಪ್ತಿಗೆ ಪಡೆದು ನಿರ್ವಹಣೆ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಲಾಗುತ್ತಿದೆ ಎಂದು ಪ್ರತಿಕ್ರಿಯಿಸಿದರು.

ಕನ್ನಡ ಸಾಹಿತ್ಯ ಚಟುವಟಿಕೆಗಳಿಗೆ ಅನುದಾನ ಮೀಸಲುಡುವುದು, ಕ್ರೀಡಾಕೂಟ. ಕ್ರೀಡಾಪಟುಗಳಿಗೆ ಪ್ರೋತ್ಸಾಹಕವಾಗಿ ಅನುದಾನ ನೀಡುವ ಬೇಡಿಕೆಗಳು, ಟ್ರಾಫಿಕ್ ವ್ಯವಸ್ಥೆ ನಿರ್ವಹಣೆ, ರಸ್ತೆ ಗುಂಡಿ ಮುಚ್ಚುವುದು, ಗ್ರಂಥಾಲಯ ಸ್ಥಾಪನೆ, ವಾಕಿಂಗ್ ಪಾಥ್ ನಿರ್ಮಾಣ, ಪಾರ್ಕ್ ಅಭಿವೃದ್ದಿ ಸೇರಿದಂತೆ ಸಾರ್ವಜನಿಕ ಸಮಸ್ಯೆಗಳ ಪಟ್ಟಿಯೇ ಆಯುಕ್ತರ ಮುಂದೆ ಮಂಡಿಸಲ್ಪಟ್ಟಿದ್ದು, ಅಧಿಕಾರಿಗಳು ಹೊಣೆಗಾರಿಕೆಯಿಂದ ಕೆಲಸ ಮಾಡುತ್ತಿಲ್ಲ ಎಂಬ ಆರೋಪಗಳು ನಾಗರೀಕ ಸಂಘಟನೆಗಳ ಮುಖಂಡರಿಂದ ಕೇಳಿಬಂದವು.ಸಮಸ್ಯೆಗಳನ್ನು ಆಲಿಸಿದ ಆಯುಕ್ತರು ಎಲ್ಲವುಗಳಿಗೂ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದು ಸಮಜಾಯಿಷಿ ಕೊಟ್ಟರಲ್ಲದೆ, ದಯಮಾಡಿ ಬಜೆಟ್ ಬಗ್ಗೆ ಸಲಹೆ ಕೊಡಿ ಎಂದು ಮನವಿ ಮಾಡಿಕೊಂಡರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆಯ ಪ್ರಧಾನ ಕಾರ್ಯದರ್ಶಿ ವಿ.ಟಿ ಅರುಣ್ ಮಾತನಾಡಿ ಪತ್ರಕರ್ತರ ಕಲ್ಯಾಣ ನಿಧಿಗೆ ಇದುವರೆಗೂ ಮೀಸಲಿಡುತ್ತಿದ್ದ 20 ಲಕ್ಷ ರೂಗಳನ್ನು 1 ಕೋಟಿ ರೂ ಗೆ ಹೆಚ್ಚಿಸಬೇಕು. ಪತ್ರಕರ್ತರ ಅರೋಗ್ಯವಿಮೆ ಅನುಷ್ಠಾನಕ್ಕೆ ಬಜೆಟ್ ನಲ್ಲಿ ಹಣ ಮೀಸಲಿರಿಸಬೇಕು ಎಂದು ಮನವಿ ಮಾಡಿಕೊಂಡರು.

ಪತ್ರಕರ್ತ ಎನ್. ರವಿಕುಮಾರ್ ಅವರು ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ 143 ಅಂಗನವಾಡಿಗಳು, 245 ಸರ್ಕಾರಿ ಹೈಯರ್ ಪ್ರೈಮರಿ ಶಾಲೆಗಳಿದ್ದು ಇವುಗಳ ಮೂಲಭೂತ ಸೌಕರ್ಯ ಅಭಿವೃದ್ದಿಗೆ ಹೆಚ್ಚು ಆಧ್ಯತೆ ನೀಡಬೇಕು, ಅಭಿವೃದ್ದಿ ಎಂದರೆ ಕೇವಲ ಚರಂಡಿ, ರಸ್ತೆಗೆ ಮಾತ್ರವೇ ಅಲ್ಲದೆ ಮಾನವ ಸಂಪನ್ಮೂಲ, ಬೌದ್ಧಿಕ ವಿಕಸನಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸುವುದೂ ಆಗಿರುತ್ತದೆ. ಈ ನಿಟ್ಟಿನಲ್ಲಿ ಅಂಗನವಾಡಿ ಮತ್ತು ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಹೆಚ್ಚಿನ ಪ್ರಮಾಣದ ಅನುದಾನವನ್ನು ಬಜೆಟ್ ನಲ್ಲಿ ಮೀಸಲಿಡಬೇಕೆಂದು ಸಲಹೆ ನೀಡಿದರು.

ಬೀದಿ ಬದಿ ವ್ಯಾಪಾರಿ ಸಂಘದ ಚನ್ನವೀರ ಗಾಮನಗಟ್ಟಿ ಮಾತನಾಡಿ, ವ್ಯಾಪಾರಿಗಳಿಗೆ ಸೂಕ್ತ ಸೌಲಭ್ಯ ಕಲ್ಪಿಸಿಕೊಡಬೇಕು. ಅದಕ್ಕೆ ಪಾಲಿಕೆ ಅನುದಾನ ಮೀಸಲಿಡಬೇಕು ಎಂದು ಒತ್ತಾಯಿಸಿದರು.

ಶಿವಪ್ಪ ನಾಯಕ ಬಡಾವಣೆ ನಿವಾಸಿಗಳ ಸಂಘದ ಟಿ.ಕುಮಾರ್ ಅಲ್ಲಿ ರಸ್ತೆ ದುರಸ್ಥಿ ಕಾರ್ಯ ಕೈಗೊಳ್ಳಬೇಕು ಎಂದರು.

ಪ್ರಿಯದರ್ಶಿನಿ ಬಡಾವಣೆ, ವಿನೋಬನಗರ, ವೀರಣ್ಣ ಲೇಔಟ್ ಸಂಘದ ಪ್ರತಿನಿಧಿಗಳು ಆರ್.ಎಂ.ಎಲ್.ನಗರದ ನಿವಾಸಿಗಳು, ಅಲಾರಿಂ ಬಡಾವಣೆ ನಿವಾಸಿಗಳ ಸಂಘ, ರವೀಂದ್ರನಗರ ಪ್ರೇರಣಾ ಮಹಿಳಾ ಸಂಘ, ಇನ್ನಿತರ ಬಡಾವಣೆ ನಿವಾಸಿಗಳು ತಮ್ಮ ಸಮಸ್ಯೆಗಳನ್ನು ಈ ಸಂದರ್ಭದಲ್ಲಿ ಹೇಳಿಕೊಂಡರು ಎಂದು ಆಗ್ರಹಿಸಿದರು.
Kalahamsa Infotech private limitedಅದೇ ರೀತಿ ನಗರದಲ್ಲಿ 53 ಕೊಳೆಚೆ ಪ್ರದೇಶಗಳಿದ್ದು ಅವುಗಳಲ್ಲಿನ ಬಹುತೇಕ ಕೊಳಚೆ ಪ್ರದೇಶಗಳು ಕಾನೂನು ಪ್ರಕಾರಣ ಅಧಿಕೃತ ಘೋಷಣೆಯಾಗಬೇಕಿದೆ. ಅಂತಹ ಸ್ಲಂಗಳನ್ನು ಅಧಿಕೃತ ಘೋಷಣೆ ಮಾಡಿ, ಅವುಗಳ ಅಭಿವೃದ್ದಿ ಪರಿಶಿಷ್ಟ ಜಾತಿ/ವರ್ಗಗಳ ವಿಶೇಷ ಅನುದಾನದಡಿ ಅಭಿವೃದ್ದಿ ಪಡಿಸಲು ಅನುದಾನದಲ್ಲಿ ಹೆಚ್ಚಿನ ಪ್ರಮಾಣದ ಹಣವನ್ನು ಮೀಸಲಿರಿಸಬೇಕೆಂದು ಒತ್ತಾಯಿಸಿದರು. ಇದಕ್ಕೆ ಆಯುಕ್ತರು ಸಮ್ಮತಿಸಿದರು.

ಸಭೆಯಲ್ಲಿ ಉಪ ಆಯುಕ್ತರಾದ ನಿಂಗೇಗೌಡರು, ತುಷಾರ್, ಬಿ ಹೊಸೂರು, ಲೆಕ್ಕಾಧಿಕಾರಿ ಡಕಣನಾಯ್ಕ ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

http://kalpa.news/wp-content/uploads/2024/04/VID-20240426-WA0008.mp4
Tags: BudgetCorporationKannada News WebsiteLatest News KannadaLocal NewsMalnad NewsShimogaShivamoggaShivamogga Newsಕುಡಿಯುವ ನೀರುನಾಗರಿಕ ಹಿತ ಸಮಿತಿನಾಗರೀಕ ಹಿತಾರಕ್ಷಣಾ ಸಮಿತಿಪಾಲಿಕೆಬಜೆಟ್ ಸಭೆಮಹಾನಗರ ಪಾಲಿಕೆಶಿವಮೊಗ್ಗಸ್ಮಶಾನ ಅಭಿವೃದ್ಧಿಹಸಿರೀಕರಣ
Share196Tweet123Send
Previous Post

ಭದ್ರಾವತಿ | ಡಿ.7 | ರಾಮೇಶ್ವರ ದೇವಾಲಯದಲ್ಲಿ ಸ್ಕಂದ ಷಷ್ಠಿ ಉತ್ಸವ

Next Post

ಒಕ್ಕಲಿಗ ಸ್ವಾಮೀಜಿ ವಿರುದ್ಧ ಕ್ರಮ, ಮುಸ್ಲಿಂ ಮುಖಂಡನ ವಿರುದ್ಧ ಏಕೆ ಕ್ರಮವಿಲ್ಲ? ಆರ್‌. ಅಶೋಕ ಪ್ರಶ್ನೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ರಾಜ್ಯದಲ್ಲಿ ಲವ್ ಜಿಹಾದ್ ಹೆಚ್ಚಳ, ಕೇರಳದಲ್ಲಿ ಯುವಕರಿಗೆ ತರಬೇತಿ: ಆರ್. ಅಶೋಕ್

ಒಕ್ಕಲಿಗ ಸ್ವಾಮೀಜಿ ವಿರುದ್ಧ ಕ್ರಮ, ಮುಸ್ಲಿಂ ಮುಖಂಡನ ವಿರುದ್ಧ ಏಕೆ ಕ್ರಮವಿಲ್ಲ? ಆರ್‌. ಅಶೋಕ ಪ್ರಶ್ನೆ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

January 12, 2026
ಗದಗ-ಧಾರವಾಡ ಪ್ಯಾಸೆಂಜರ್ ರೈಲು ಪುನಾರಂಭ? ಕೇಂದ್ರ ಸಚಿವ ಜೋಶಿ ಹೇಳಿದ್ದೇನು?

ಸಾಗರ ಮಾರಿಕಾಂಬಾ ಜಾತ್ರೆಗೆ ಯಶವಂತಪುರ-ತಾಳಗುಪ್ಪ 2 ಸ್ಪೆಷಲ್ ರೈಲುಗಳು | ಹೀಗಿದೆ ಡೀಟೇಲ್ಸ್

January 31, 2026
ಸಾಗರ | ಬ್ಯಾಕೋಡು ಬಳಿ ಹುಲಿ ಕಾಟ | ಹಸು ಕೊಂದ ವ್ಯಾಘ್ರ, ಬೈಕ್ ಸವಾರನ ಮೇಲೆ ದಾಳಿ

ಸಾಗರ | ಬ್ಯಾಕೋಡು ಬಳಿ ಹುಲಿ ಕಾಟ | ಹಸು ಕೊಂದ ವ್ಯಾಘ್ರ, ಬೈಕ್ ಸವಾರನ ಮೇಲೆ ದಾಳಿ

February 11, 2026
ಟಾಕ್ಸಿಕ್ ಸಿನಿಮಾಗೆ ಮತ್ತೆ ಸಂಕಷ್ಟ | ಕ್ರೈಸ್ತ ಒಕ್ಕೂಟದಿಂದ ವಾಣಿಜ್ಯ ಮಂಡಳಿಗೆ ದೂರು | ಏನಿದು ವಿವಾದ?

ಟಾಕ್ಸಿಕ್ ಸಿನಿಮಾಗೆ ಮತ್ತೆ ಸಂಕಷ್ಟ | ಕ್ರೈಸ್ತ ಒಕ್ಕೂಟದಿಂದ ವಾಣಿಜ್ಯ ಮಂಡಳಿಗೆ ದೂರು | ಏನಿದು ವಿವಾದ?

February 11, 2026
ಶಾಸಕ ಬೈರತಿ ಬಸವರಾಜ್’ಗೆ ಅರೆಸ್ಟ್ ಭೀತಿ | ಫೋನ್ ಕಾಲ್’ಗೂ ಸಿಗದೇ ಎಸ್ಕೇಪ್

ಶಾಸಕ ಬೈರತಿ ಬಸವರಾಜ್’ಗೆ ಅರೆಸ್ಟ್ ಭೀತಿ | ಫೋನ್ ಕಾಲ್’ಗೂ ಸಿಗದೇ ಎಸ್ಕೇಪ್

February 11, 2026
ಆಗುಂಬೆ ಘಾಟ್ ರಸ್ತೆ ಅಪಾಯಕಾರಿ ಪ್ರಯಾಣಕ್ಕೆ ಸಿಗಲಿದೆ ಮುಕ್ತಿ | ಸಂಸದರ ಪ್ರಯತ್ನಕ್ಕೆ ಮುನ್ನಡೆ

ಆಗುಂಬೆ ಘಾಟ್ ರಸ್ತೆ ಅಪಾಯಕಾರಿ ಪ್ರಯಾಣಕ್ಕೆ ಸಿಗಲಿದೆ ಮುಕ್ತಿ | ಸಂಸದರ ಪ್ರಯತ್ನಕ್ಕೆ ಮುನ್ನಡೆ

February 11, 2026
ವಂದೇ ಮಾತರಂ ಗೀತೆಗೆ ಇನ್ಮುಂದೆ ಎದ್ದು ನಿಂತು ಗೌರವ ನೀಡುವುದು ಕಡ್ಡಾಯ | ಕೇಂದ್ರ ಆದೇಶ

ವಂದೇ ಮಾತರಂ ಗೀತೆಗೆ ಇನ್ಮುಂದೆ ಎದ್ದು ನಿಂತು ಗೌರವ ನೀಡುವುದು ಕಡ್ಡಾಯ | ಕೇಂದ್ರ ಆದೇಶ

February 11, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL