ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬಸವನಗುಡಿಯ ನ್ಯಾಷನಲ್ ಡಿಗ್ರಿ ಕಾಲೇಜಿನ ಪದ್ಮಭೂಷಣ ಡಾ.ಎಚ್. ನರಸಿಂಹಯ್ಯ ಮಲ್ಟಿ ಮೀಡಿಯಾ ಸಭಾಂಗಣದಲ್ಲಿ ಡಿ.8ರಂದು ವಿಕಸನ ಟ್ರಸ್ಟ್ ಉದ್ಘಾಟನಾ ಸಮಾರಂಭ ಹಾಗೂ ನಿಶ್ಯಬ್ದ ಭಾಗ-2 ಗೀತೆ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.
ಅಂದು ಸಂಜೆ 4.30ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ `ಗಾನಕಲಾಭೂಷಣ’ ಡಾ.ಆರ್.ಕೆ. ಪದ್ಮನಾಭ, ಖ್ಯಾತ ಮ್ಯಾಂಡೋಲಿನ್ ಕಲಾವಿದರೂ, ಸಂಗೀತ ನಿರ್ದೇಶಕರೂ ಆದ ಶ್ರೀ ಎನ್.ಎಸ್. ಪ್ರಸಾದ್ ಮತ್ತು ಅದಮ್ಯ ಚೇತನದ ಅಧ್ಯಕ್ಷರಾದ ಡಾ.ತೇಜಸ್ವಿನಿ ಅನಂತಕುಮಾರ್ ಪಾಲ್ಗೊಳ್ಳಲಿದ್ದಾರೆ.ಭಕ್ತಿ ಭಾವ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಕಸನ ಟ್ರಸ್ಟ್ ಮತ್ತು ಗುರುಕುಲಂ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ, ವಂದ್ಯಂ-ಪ್ರಭಾತ್ ಅಕಾಡೆಮಿ ಆಫ್ ಡ್ಯಾನ್ಸ್’ನ ಕಲಾವಿದರಿಂದ ನೃತ್ಯ ಪ್ರದರ್ಶನದ ನಂತರ ಸಭಾ ಕಾರ್ಯಕ್ರಮ ಮತ್ತು ನಿಶ್ಶಬ್ದ ಭಾಗ-2 ಗೀತೆ ಬಿಡುಗಡೆ ಆಗಲಿದೆ.
Also Read: ಶಿವಮೊಗ್ಗ | ಪಾಲಿಕೆ ಬಜೆಟ್ ಸಲಹೆ ಸಭೆ | ಸಮಸ್ಯೆಗಳ ಬಗ್ಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಆಕ್ರೋಶ
ಇನ್ನು, ಅಪರ್ಣ ನರೇಂದ್ರ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ವಾದ್ಯ ಸಹಕಾರದಲ್ಲಿ ಆರ್. ಲೋಕೇಶ್ (ತಬಲಾ), ವೀರೇಂದ್ರ ಪ್ರಸಾದ್ (ಮ್ಯಾಂಡೋಲಿನ್), ವಿ. ಯಶೋಧರ್ (ರಿದಂ ಪ್ಯಾಡ್), ದುಶ್ಯಂತ್ (ಕೀ-ಬೋರ್ಡ್) ಮತ್ತು ವಸಂತ್ ಕುಮಾರ್ (ಕೊಳಲು) ಸಾಥ್ ನೀಡಲಿದ್ದಾರೆ.
ಈ ಕಾರ್ಯಕ್ರಮದ ನಿರೂಪಣೆಯನ್ನು ಅರ್ಚನಾ ಹೆಗಡೆ ನಡೆಸಿಕೊಡಲಿದ್ದು, ಈ ಕಾರ್ಯಕ್ರಮದಲ್ಲಿ ಸಂಗೀತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಸಂಗೀತ ಗುರುಗಳೂ ಟ್ರಸ್ಟಿನ ಸಂಸ್ಥಾಪಕರೂ ಆದ ಅಪರ್ಣ ನರೇಂದ್ರ ಅವರು ವಿನಂತಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post