ಕಲ್ಪ ಮೀಡಿಯಾ ಹೌಸ್ | ಬೆಳಗಾವಿ/ಶಿವಮೊಗ್ಗ |
ಶಿವಮೊಗ್ಗ ಜಿಲ್ಲೆಗೆ ಹೊಸ ಆಯುರ್ವೇದ ವಿಶ್ವವಿದ್ಯಾಲಯ 2010ರಲ್ಲಿ ಮಂಜೂರಾಗಿದ್ದು ಅದರ ನಿರ್ಮಾಣದ ಕಾರ್ಯ ಪ್ರಾರಂಭಿಸಲು ವಿಧಾನ ಪರಿಷತ್ತಿನ ಸದಸ್ಯರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿ ಡಿ.ಎಸ್. ಅರುಣ್ #D S Arun ಹೇಳಿದರು.
ಬೆಳಗಾವಿಯಲ್ಲಿ ನಡೆಯುತ್ತಿರುವ 154ನೇ ವಿಧಾನ ಪರಿಷತ್ತಿನ ಚಳಿಗಾಲದ ಅಧಿವೇಶನದ ಮೊದಲನೇ ದಿನವಾದ ಇಂದು ಪ್ರಶ್ನೋತ್ತರ ವೇಳೆಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಆಯುರ್ವೇದ ವಿಶ್ವವಿದ್ಯಾಲಯಗಳ #Ayurvedic University ನಿರ್ಮಾಣದ ಬಗ್ಗೆ ಮಾತನಾಡುತ್ತಾ, ಶಿವಮೊಗ್ಗ ಜಿಲ್ಲೆಯಲ್ಲಿ ಆಯುರ್ವೇದ ಕಾಲೇಜು ಹಾಗೂ ವಿಶ್ವವಿದ್ಯಾಲಯವನ್ನು ಪ್ರಾರಂಭಿಸಬೇಕೆನ್ನುವ ಸದುದ್ದೇಶದಿಂದ ಡಿ.ಹೆಚ್.ಶಂಕರಮೂರ್ತಿಯವರ ಕಾಳಜಿ ಹಾಗೂ ಪ್ರಯತ್ನದಿಂದಾಗಿ ಶಿವಮೊಗ್ಗ ಜಿಲ್ಲೆಗೆ ಹೊಸ ಆಯುರ್ವೇದ ವಿಶ್ವವಿದ್ಯಾಲಯ 2010ರಲ್ಲಿ ಮಂಜೂರಾಗಿದ್ದು ಅದರ ನಿರ್ಮಾಣದ ಕಾರ್ಯ ಪ್ರಾರಂಭಿಸಲು ಸರ್ಕಾರಕ್ಕೆ ಇರುವ ತೊಂದರೆಗಳ ಬಗ್ಗೆ ಸರ್ಕಾರದ ಗಮನ ಸೆಳೆದರು.

Also read: ನಾನು ಎಂದಿಗೂ ಪಂಚಮಸಾಲಿ ಮೀಸಲಾತಿ ಪರ | ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿಕೆ
ಭಾರತದಲಿರುವಂಥ 10 ಉನ್ನತ ಆಯುರ್ವೇದ ಕಾಲೇಜುಗಳ ಪೈಕಿ ಕರ್ನಾಟಕದಲ್ಲಿ 3 ಕಾಲೇಜುಗಳಿವೆ. ಆದರೆ ಇತ್ತೀಚಿನಲ್ಲಿ ಉಪನ್ಯಾಸಕರುಗಳ ನೇಮಕಾತಿ ಆಗುತ್ತಿಲ್ಲ. ಪರಿಣಾಮ ಶಿವಮೊಗ್ಗದಲ್ಲಿರುವಂಥ ಆಯುರ್ವೇದ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆಯಿಂದ 60 ವಿದ್ಯಾರ್ಥಿಗಳ ಪ್ರವೇಶಕ್ಕೆ ಇದ್ದ ಸೀಟುಗಳ ಪ್ರಮಾಣ 32 ಸೀಟುಗಳಿಗೆ ಕುಸಿದಿದೆ. ಇದಕ್ಕೆ ಪರಿಹಾರವೆಂದರೆ ಈ ಕಾಲೇಜುಗಳನ್ನು ವಿಶ್ವವಿದ್ಯಾಲಯ ವ್ಯಾಪ್ತಿಗೆ ತರುವುದಾಗಿದೆ ಹಾಗೂ ವಿಶ್ವವಿದ್ಯಾಲಯ ಸ್ಥಾಪನೆಗೆ ಸಂಬಂಧಿಸಿದಂತೆ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಕ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಇದಕ್ಕೆ ಪೂರಕವಾಗಿ ಡಿ.ಎಸ್.ಅರುಣ್‌ರವರು ಮಾತನಾಡುತ್ತಾ, ಆಯುರ್ವೇದ ವಿಶ್ವವಿದ್ಯಾಲಯಕ್ಕೆ ಹಂಚಿಕೆಯಾದ ಜಾಗದಲ್ಲಿ ವಸತಿ ಇಲಾಖೆಗೆ 38 ಎಕರೆಗೂ ಹೆಚ್ಚು ಜಾಗ ಹಂಚಿಕೆಯಾಗಿತ್ತು ಆದರೆ ಜಾಗವನ್ನು ಹಿಂಪಡೆಯಲಾಗಿರುವುದರಿಂದ ಈ ಜಾಗವೂ ಸೇರಿದಂತೆ ಇದಕ್ಕೆ ಹೊಂದಿಕೊಂಡಂತೆ ಇನ್ನಷ್ಟು ಜಾಗ ದೊರೆಯಬಹುದು. ಆದಕಾರಣ ಸರ್ಕಾರ ಆಯುರ್ವೇದ ವಿಶ್ವವಿದ್ಯಾಲಯವನು ಸ್ಥಾಪಿಸುವ ಬಗ್ಗೆ ತಮ್ಮ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕೆಂದು ಸದನದಲ್ಲಿ ಒತ್ತಾಯಿಸಿದಾಗ ಮಾನ್ಯ ಮಂತ್ರಿಗಳು, ಈ ವಿಚಾರದ ಬಗ್ಗೆ ಅಧಿವೇಶನ ತರುವಾಯ ಸುದೀರ್ಘ ಚರ್ಚೆ ನಡೆಸುವುದಾಗಿ ಸದನದಲ್ಲಿ ಭರವಸೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post