ಕಲ್ಪ ಮೀಡಿಯಾ ಹೌಸ್ | ಬೆಳಗಾವಿ |
ಬೆಳಗಾವಿ-ಮಣುಗೂರು ನಿಲ್ದಾಣಗಳ ನಡುವಿನ ವಿಶೇಷ ಎಕ್ಸ್’ಪ್ರೆಸ್ ರೈಲು ಸಂಚಾರವನ್ನು ರದ್ದು ಮಾಡಲಾಗಿದೆ.
ಈ ಕುರಿತಂತೆ ಹುಬ್ಬಳ್ಳಿ ನೈಋತ್ಯ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಮಾಹಿತಿ ಪ್ರಕಟಿಸಿದ್ದು, ಡಿ.18ರಿಂದ ಈ ರೈಲು ಸಂಚಾರ ರದ್ದಾಗಲಿದೆ.
ಬೆಳಗಾವಿ #Belagum ಮತ್ತು ಮಣುಗೂರು ನಿಲ್ದಾಣಗಳ ನಡುವೆ ವಾರದಲ್ಲಿ ನಾಲ್ಕು ದಿನ ಸಂಚರಿಸುವ ವಿಶೇಷ ಎಕ್ಸ್’ಪ್ರೆಸ್ (ರೈಲು ಸಂಖ್ಯೆ 07335/07336) ರೈಲು ಸೇವೆ ಕಾರ್ಯಾಚರಣೆಯ ಕಾರಣಗಳಿಂದಾಗಿ ಮುಂದಿನ ಸೂಚನೆವರೆಗೆ ರದ್ದುಪಡಿಸಲಾಗುತ್ತಿದೆ.
1.ಡಿ.18ರಿಂದ ಮುಂದಿನ ಆದೇಶದವರೆಗೆ ಬೆಳಗಾವಿಯಿಂದ ಮಣುಗೂರು ನಿಲ್ದಾಣದವರೆಗೆ ಸಂಚರಿಸುವ ವಿಶೇಷ ಎಕ್ಸ್’ಪ್ರೆಸ್ (07335) ರೈಲು ಸಂಚಾರ ರದ್ದು
2.ಡಿ.19ರಿಂದ ಮುಂದಿನ ಆದೇಶದವರೆಗೆ ಮಣುಗೂರುದಿಂದ ಬೆಳಗಾವಿ ತನಕ ಸಂಚರಿಸುವ ವಿಶೇಷ ಎಕ್ಸ್’ಪ್ರೆಸ್ (07336) ರೈಲು ಸಂಚಾರ ರದ್ದು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post