ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ರಾಜ್ಯದ ವಿವಿಧ ನಗರಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸಿ #Traffic Rules Break ತಿರುಗಾಡುತ್ತಿದ್ದ ಲಾರಿ ಚಾಲಕನನ್ನು ನಗರ ಸಂಚಾರಿ ಪೊಲೀಸರು ಹಿಡಿದು ದಂಡ ವಿಧಿಸಿದ್ದಾರೆ.
ಹೌದು… ಲಾರಿ ಚಾಲಕನೊಬ್ಬ ರಾಜ್ಯದ ವಿವಿಧ ಕಡೆಗಳಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ತಿರುಗಾಡುತ್ತಿದ್ದನು. ಸಂಚಾರ ಪೊಲೀಸ್ ಠಾಣಾಧಿಕಾರಿ ಶಾಂತಲಾ ಹಾಗೂ ಸಿಬ್ಬಂದಿಗಳು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಲಾರಿಯನ್ನು ತಡೆದು ತಪಾಸಣೆ ನಡೆಸಿದ್ದು, ಈ ವೇಳೆ ಆತ ಸಿಕ್ಕಿ ಬಿದ್ದಿದ್ದಾನೆ.
Also read: ಸಣ್ಣ ವ್ಯಾಪಾರಿಗಳಿಗಾಗಿ `ಭಾರತ್ ವಾಟ್ಸಪ್ ಯಾತ್ರಾ’ ಆರಂಭ | ಹೇಗೆ ಪ್ರಯೋಜನವಾಗಲಿದೆ?
ಕೂಲಂಕಶವಾಗಿ ಪರಿಶೀಲನೆ ನಡೆಸಿದ ನಂತರ ಈ ಚಾಲಕನ ವಿರುದ್ಧ ರಾಜ್ಯದ ವಿವಿಧ ಕಡೆಗಳಲ್ಲಿ ಒಟ್ಟು 10 ಐಎಂವಿ ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿದೆ.
ಚಾಲಕನಿಂದ 5,000 ರೂಪಾಯಿ ದಂಡ ವಸೂಲಿ ಮಾಡಲಾಗಿದೆ ಎಂದು ಠಾಣಾಧಿಕಾರಿ ಶಾಂತಲಾ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post