ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಆನವೇರಿ ಬಳಿ ಬೆಳ್ಳಂಬೆಳಗ್ಗೆ ಎರಡು ಭೀಕರ ಅಪಘಾತದಲ್ಲಿ ಇಬ್ಬರು ಸಾವು #Two died in Accident ಕಂಡಿದ್ದು, ಮತ್ತೊಬ್ಬ ಗಂಭೀರ ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಪ್ರಕರಣದ ವಿವರ:
1.ಭದ್ರಾವತಿ ತಾಲೂಕು ಆನವೇರಿ ಸಮೀಪ ಮಂಗೋಟೆ ಕ್ರಾಸ್ ಮತ್ತು ಮಲ್ಲಾಪುರದ ಮಧ್ಯೆ ಕ್ಯಾಂಟರ್ ಮತ್ತು ಬೈಕ್ ಮಧ್ಯ ಅಪಘಾತ ಸಂಬವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವು ಕಂಡ ಘಟನೆ ವರದಿಯಾಗಿದೆ.
Also read: ಭದ್ರಾವತಿ | ಹಗ್ಗ ಬಿಗಿದು ವ್ಯಕ್ತಿ ಕೊಲೆ | ಆರೋಪಿಗಳ ಬಂಧನ |
ಹೊನ್ನಾಳಿ ತಾ. ಲಿಂಗಪುರದ ಮೂಲದ ಯುವಕ ಸಾವು ಕಂಡ ದುರ್ದೈವಿ. ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಿಚಾರಣೆ ಮುಂದುವರೆದಿದೆ.
2. ಭದ್ರಾವತಿ ತಾಲೂಕಿನ ಆನವೇರಿಯ ಬಳಿಯ ಸನ್ಯಾಸಿಕೋಡಮಗ್ಗಿ ನಾಗಸಮುದ್ರದ ನಡುವೆ ಬೈಕ್ ಮತ್ತು ಕಾರು ಮಧ್ಯೆ ಅಪಘಾತವಾಗಿದ್ದು, ಹೊನ್ನಾಳಿ ಮೂಲದ 26 ವರ್ಷದ ಯುವಕ ಸಾವುಕಂಡಿದ್ದಾನೆ ಎನ್ನಲಾಗಿದೆ.
ಬೈಕ್ ಹಿಂದೆ ಕುಳಿತಿದ್ದ ಮತ್ತೋರ್ವ ಕೋಡಮಗ್ಗಿಯ ಯುವಕ ಗಾಯಗೊಂಡಿದ್ದಾನೆ ಎನ್ನಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 















