ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಲಾಲ್ ದಾಸ್ ಭಕ್ತ ಆಂಜನೇಯಸ್ವಾಮಿ ಭಜನಾ ಮಂಡಳಿಯ ವತಿಯಿಂದ ಬಳೇಪೇಟೆಯ ಓಟಿಸಿ ರಸ್ತೆಯಲ್ಲಿರುವ ಶ್ರೀ ಲಾಲ್ ದಾಸ್ ವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ಏರ್ಪಡಿಸಿರುವ ಧನುರ್ಮಾಸ ಸಂಗೀತೋತ್ಸವ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಗಿದೆ.
ಡಿ.16ರ ಇಂದಿನಿಂದ ಜನವರಿ 14ರವರೆಗೆ ಒಂದು ತಿಂಗಳ ಕಾಲ ಪ್ರತಿದಿನ ಬೆಳಗ್ಗೆ 6.30ಕ್ಕೆ ನಾಡಿನ ಹೆಸರಾಂತ ಕಲಾವಿದರುಗಳಿಂದ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
Also read: ಕುಡಿಯುವ ನೀರಲ್ಲಿ ಅಲ್ಯೂಮಿನಿಯಂ ಅಂಶ ಹೆಚ್ಚಳ | ಏನೆಲ್ಲಾ ಅಪಾಯ? MLC ಡಾ.ಸರ್ಜಿ ಹೇಳಿದ್ದೇನು?
ಈ ಕುರಿತಂತೆ ಮಾಹಿತಿ ನೀಡಿದ ಕಾರ್ಯಕ್ರಮ ಸಂಚಾಲಕರಾದ ಖ್ಯಾತ ಮೃದಂಗ ವಾದಕರಾದ ಶ್ರೀನಿವಾಸ್ ಅನಂತರಾಮಯ್ಯ, ಡಿ.16ರ ಇಂದು ಕು. ದೀಪ್ತಿ ಮೋಹನ್ ಇವರ ಸಂಗೀತದಿAದ ಪ್ರಾರಂಭವಾಯಿತು. ಇವರ ಸಂಗೀತ ಕಾರ್ಯಕ್ರಮಕ್ಕೆ ವಾದ್ಯ ಸಹಕಾರದಲ್ಲಿ ಪಿಟೀಲು ವಾದನದಲ್ಲಿ ಎಂ.ಎನ್. ಸತ್ಯನಾರಾಯಣ ಮತ್ತು ಮೃದಂಗ ವಾದನದಲ್ಲಿ ಶ್ರೀ ಶ್ರೀನಿವಾಸ್ ಅನಂತರಾಮಯ್ಯ ಸಾಥ್ ನೀಡಿದರು ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post